Uncategorized
ಡಾಲರ್ ಎದುರು ಮತ್ತಷ್ಟು ಕುಸಿದ ರೂಪಾಯಿ ಮೌಲ್ಯ

ಮತ್ತೆ ರೂಪಾಯಿ ಮೌಲ್ಯ ಕುಸಿದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 12 ಪೈಸೆ ಕುಸಿದಿರುವುವುದರಿಂದ ರೂಪಾಯಿ ಮೌಲ್ಯ 77.62 ಕ್ಕೆ ತಲುಪಿದೆ.
ಇಂದಿನ ವಿದೇಶಿ ವಿನಿಮಯದಲ್ಲಿ, ರೂಪಾಯಿಯು ಅಮೆರಿಕನ್ ಡಾಲರ್ ಎದುರು 77.61 ಕ್ಕೆ ಪ್ರಾರಂಭವಾಯಿತು, ನಂತರ 77.62 ಕ್ಕೆ ಏರಿಕೆಯಾಗಿ ಕೊನೆಗೆ 12 ಪೈಸೆ ಕುಸಿತವನ್ನು ದಾಖಲಿಸಿತು.
ಬುಧವಾರ, ರೂಪಾಯಿ ತನ್ನ ದಾಖಲೆಯ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದ್ದು, ಅಮೆರಿಕದ ಕರೆನ್ಸಿ ಎದುರು 21 ಪೈಸೆ ಏರಿಕೆಯಾಗಿ 77.50ಕ್ಕೆ ತಲುಪಿತ್ತು.