
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ರಾಪಿಡ್ ಆಂಟಿಜೆನ್ ಟೆಸ್ಟ್ (ಆರ್‍ಎಟಿ) ನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ಮುಂಚಿತವಾಗಿ ತಂಡದಿಂದ ದೂರ ಉಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈಗಾಗಲೆ ಇಂಗ್ಲೆಂಡ್‍ನಲ್ಲಿರುವ ಅವರಿಗೆ ನಿನ್ನೆ ಪರೀಕ್ಷೆ ನಡೆಸಿದಾಗ ಸೋಂಕಿನಿಂದ ಬಳಲುತ್ತಿರುವುದು ಗೊತ್ತಾಗಿದೆ.
ಜುಲೈ 1 ರಿಂದ ಬರ್ಮಿಂಗ್ಯಾಮ್‍ನಲ್ಲಿ ಮೊದಲ ಟೆಸ್ಟ ಪಂದ್ಯ ಆರಂಭವಾಗಲಿದ್ದು, ರೋಹಿತ್ ಆರು ದಿನಗಳ ಐಸೋಲೇಶನ್‍ನಲ್ಲಿದ್ದರೆ, ವೇಗಿ ಜಸ್ಪ್ರೀತ್ ಬುಮ್ರಾ ಅಥವಾ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ರಿಷಬ್ ಪಂತ್ ತಂಡವನ್ನು ಮುನ್ನಡೆಸಬಹುದು ಎಂದು ಹೇಳಲಾಗಿದೆ.
ಅವರು ಪ್ರಸ್ತುತ ತಂಡ ತಂಗಿರುವ ಹೋಟೆಲ್‍ನಲ್ಲಿ ಪ್ರತ್ಯೇಕವಾಗಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲೀಸೆಸ್ಟಶೈರ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಮೊದಲ ದಿನ ರೋಹಿತ್ ಬ್ಯಾಟಿಂಗ್ ಮಾಡಿದ್ದರು ಆದರೆ ಎರಡನೇ ದಿನ ಫೀಲ್ಡಿಂಗ್ ಮಾಡಲಿಲ್ಲ. ಎರಡನೇ ಇನ್ನಿಂಗ್ಸ್‍ನಲ್ಲೂ ಅವರು ಬ್ಯಾಟಿಂಗ್ ಮಾಡಲಿಲ್ಲ.
ಮೊದಲ ಟೆಸ್ಟ್ ಆಡುವುದು ಅನುಮಾನವಾಗಿದೆ ಎಎಡನೆ ಮಂದ್ಯಕ್ಕೆ ಲಭ್ಯದ ಬಗ್ಗೆ ಚೇತರಿಕೆಯ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಆಫï-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ತಡವಾಗಿ ತಂಡವನ್ನು ಸೇರಿಕೊಂಡಿದ್ದಾರೆ.