ಸಿನಿಮಾ

ಟಿವಿಯಲ್ಲಿ ಬರುತ್ತಿದೆ ಪುನೀತ್ ರಾಜ್‌ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಲಕ್ಕಿಮ್ಯಾನ್’ ಸಿನಿಮಾ

ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಲಕ್ಕಿಮ್ಯಾನ್’ ಚಿತ್ರ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಒಂದರ ಹಿಂದೆ ಒಂದರಂತೆ ಸೂಪರ್ ಡೂಪರ್ ಹಿಟ್ ಮೂವಿಗಳನ್ನು ಪ್ರಸಾರ ಮಾಡಿರುವ ಸ್ಟಾರ್ ಸುವರ್ಣ ಇದೀಗ ‘ಲಕ್ಕಿಮ್ಯಾನ್’ ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ.ಈ ಸಿನಿಮಾದ ಮುಖ್ಯ ಆಕರ್ಷಣೆಯೇ ‘ಪವರ್ ಸ್ಟಾರ್’.

‘ಲಕ್ಕಿಮ್ಯಾನ್’ ಸಿನಿಮಾದಲ್ಲಿ ನಮ್ಮೆಲ್ಲರ ಪ್ರೀತಿಯ ‘ಪವರ್ ಸ್ಟಾರ್ ಪುನೀತ್ ರಾಜಕುಮಾರ್’ ಅವರು ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್‌ ಜೊತೆಗೆ ಸಾಧು ಕೋಕಿಲ ಕೂಡ ಅಭಿನಯಿಸಿದ್ದಾರೆ.

ಇವರಿಬ್ಬರ ಕಾಂಬಿನೇಷನ್‌ನ ಸೀನ್‌ಗಳು ನೋಡುಗರನ್ನು ನಗಿಸುತ್ತವೆ. ಎಂದಿನಂತೆ ತಮ್ಮ ಮಂದಹಾಸವನ್ನು ಚೆಲ್ಲುತ್ತ ಪುನೀತ್ ಲವಲವಿಕೆಯಿಂದ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿರೋ ಅಪ್ಪು ಹಾಗು ಪ್ರಭುದೇವ್ ಅವರ ಅದ್ಭುತ ಡಾನ್ಸ್ ವೀಕ್ಷಕರ ಮನಗೆಲ್ಲುವುದಂತೂ ಖಚಿತ.

ನಟ ಡಾರ್ಲಿಂಗ್ ಕೃಷ್ಣ ಹಾಗು ನಟಿ ಸಂಗೀತ ಶೃಂಗೇರಿ ಅಭಿನಯದ ಈ ವರ್ಷದ ಸಿನಿಮಾ ‘ಲಕ್ಕಿಮ್ಯಾನ್’ ಇದೇ ಭಾನುವಾರ ( ನವೆಂಬರ್ 13 ) ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುಧಾ ಬೆಳವಾಡಿ, ಮಾಳವಿಕಾ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಜೀವಾ ಶಂಕರ್ ಅವರ ಛಾಯಾಗ್ರಹಣವಿದ್ದು, ಹಾಡುಗಳಿಗೆ ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ಸಂಯೋಜನೆ ಇದೆ. ಧನಂಜಯ ರಂಜನ್ ಸಾಹಿತ್ಯ ರಚಿಸಿದ್ದಾರೆ.ತಮಿಳಿನ ‘ಓಹ್‌ ಮೈ ಕಡವುಳೆ’ ಸಿನಿಮಾದ ರಿಮೇಕ್. ‘ಲಕ್ಕಿಮ್ಯಾನ್’ಗೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್‌ ಅವರು ನಿರ್ದೇಶನ ಮಾಡಿದ್ದರು.

ತಮಿಳು ಸಿನಿಮಾದಲ್ಲಿ ವಿಜಯ್ ಸೇತುಪತಿ ದೇವರ ಪಾತ್ರ ಮಾಡಿದ್ದರು.ಬಾಲ್ಯದ ಗೆಳತಿಯನ್ನೇ ಮದುವೆಯಾದರೆ, ಜೀವನ ಚೆನ್ನಾಗಿರುರುತ್ತದೆ ಎಂದುಕೊಂಡು ಕಥಾ ನಾಯಕ ತನ್ನ ಗೆಳತಿಯನ್ನೇ ಮದುವೆ ಆಗುತ್ತಾನೆ. ಹಾಗೆ ಹೇಳಲು ಗೆಳತಿಗೆ ನಾಯಕನ ಮೇಲೆ ಪ್ರೀತಿ ಮೂಡಿರುತ್ತದೆ. ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ.

ನಾಯಕಿ ಮೇಲೆ ನಾಯಕನಿಗೆ ಪ್ರೀತಿ ಮೂಡುವುದಿಲ್ಲ, ಬೇರೆ ಹುಡುಗಿಯೂ ಸಿಗುವುದಿಲ್ಲ. ಒಟ್ಟಿನಲ್ಲಿ ಅವರ ಸಂಸಾರದಲ್ಲಿ ಉಂಟಾಗುವ ತಾಪತ್ರಯಗಳು ಒಂದೆರಡಲ್ಲ. ಒಂದೇ ವರ್ಷಕ್ಕೆ ದಾಂಪತ್ಯದಲ್ಲಿ ಕಲಹ.

ಸಂಸಾರವೇ ಸಾಕೆನಿಸಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾನೆ. ಇಂಥ ಸಂದರ್ಭದಲ್ಲಿ ಹೀರೋಗೆ ಸಿಗುವ ದೇವರು, ಆತನಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ಚಿತ್ರದ ಅನ್ನೋದೇ ಕಥೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button