ಟಿಕ್ ಟಾಕ್ ಗೆ ಸೆಡ್ಡು ಹೊಡೆದ ಯೂಟ್ಯೂಬ್, ಶಾರ್ಟ್ಸ್ ಗಳಿಂದ ಗಳಿಸಿದ ಆದಾಯ ಎಷ್ಟು ಗೊತ್ತಾ?

ನವದೆಹಲಿ: ಟಿಕ್ ಟಾಕ್ ಗೆ ಸ್ಪರ್ಧಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಯುಟ್ಯೂಬ್ ಶಾರ್ಟ್ಸ್ ಈಗ ಜಾಗತಿಕವಾಗಿ ಸಾಕಷ್ಟು ಹವಾ ಮಾಡುತ್ತಿದೆ, ಇದಕ್ಕೆ ಪೂರಕವಾಗಿ ಈಗ ಪ್ರತಿ ತಿಂಗಳಿಗೆ 1.5 ಬಿಲಿಯನ್‌ಗಿಂತಲೂ ಹೆಚ್ಚು ಜನರು ಟ್ಯೂನ್ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.
ಹೌದು, ಟಿಕ್‌ಟಾಕ್ ನಂತರ ಆಲ್ಫಾಬೆಟ್-ಮಾಲೀಕತ್ವದ ಯೂಟ್ಯೂಬ್ ಮತ್ತು ಫೇಸ್‌ಬುಕ್-ಪೋಷಕ ಮೆಟಾ ಎರಡೂ ತಮ್ಮ ಸೇವೆಗಳಿಗೆ ಕಿರು-ರೂಪದ ವೀಡಿಯೊ ಹಂಚಿಕೆ ಸ್ವರೂಪಗಳನ್ನು ಸೇರಿಸಿದ ನಂತರ ಈಗ ಕಳೆದ ವರ್ಷದ ಕೊನೆಯಲ್ಲಿ ಸುಮಾರು ಒಂದು ಬಿಲಿಯನ್ ಬಳಕೆದಾರರನ್ನು ಗಳಿಸಿದೆ.
‘ಶಾರ್ಟ್ಸ್ ನಿಜವಾಗಿಯೂ ಈಗ ಸಾಕಷ್ಟು ಸದ್ದು ಮಾಡುತ್ತಿದೆ, ಈಗ ಪ್ರತಿ ತಿಂಗಳು 1.5 ಶತಕೋಟಿ ಲಾಗ್-ಇನ್ ಬಳಕೆದಾರರು ವೀಕ್ಷಿಸುತ್ತಿದ್ದಾರೆ.ಇದು ಯುಟ್ಯೂಬ್ ನ ಅವಿಭಾಜ್ಯ ಅಂಗವಾಗಿ ಮುಂದುವರೆಯುತ್ತದೆ ಎಂದು ಯೂಟ್ಯೂಬ್ ಮುಖ್ಯ ಉತ್ಪನ್ನ ಅಧಿಕಾರಿ ನೀಲ್ ಮೋಹನ್ ಹೇಳಿದ್ದಾರೆ.YouTube ಸಿಲಿಕಾನ್ ವ್ಯಾಲಿ ಟೆಕ್ ಟೈಟಾನ್‌ನ ಜಾಹೀರಾತು ಕೌಶಲ್ಯಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿನ ವಿಷಯದಿಂದ ಆದಾಯವನ್ನು ಗಳಿಸಲು ರಚನೆಕಾರರಿಗೆ ಸಹಾಯ ಮಾಡಲು ಕೆಲಸ ಮಾಡಿದೆ.ಆ ಮೂಲಕ ಇದು 2021 ರಲ್ಲಿ ಶತ ಕೋಟಿ ಡಾಲರ್‌ಗಳ ಆದಾಯವನ್ನು ಗಳಿಸಿದೆ ಎನ್ನಲಾಗಿದೆ.
ರಚನೆಕಾರರು ಯೂಟ್ಯೂಬ್‌ನಲ್ಲಿ ಪಾಡ್‌ಕಾಸ್ಟಿಂಗ್, ಕಿರುಚಿತ್ರಗಳು ಮತ್ತು ಲೈವ್ ಸ್ಟ್ರೀಮಿಂಗ್‌ನ ಲಾಭವನ್ನು ‘ಮಲ್ಟಿ-ಪ್ಲಾಟ್‌ಫಾರ್ಮ್ ವಿಧಾನದಲ್ಲಿ ಪಡೆಯುತ್ತಿದ್ದಾರೆ ಎಂದು ಅಮೆರಿಕದ ಉಪಾಧ್ಯಕ್ಷ ತಾರಾ ವಾಲ್‌ಪರ್ಟ್ ಲೆವಿ ಹೇಳಿದ್ದಾರೆ.ಇನ್ನೊಂದೆಡೆಗೆ ಚೀನಾ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್, ಈ ವರ್ಷದ ಆರಂಭದಲ್ಲಿ ಬಳಕೆದಾರರಿಗೆ ವಿಡಿಯೋದ ಗರಿಷ್ಠ ಅವಧಿಯನ್ನು 3 ನಿಮಿಷಗಳಿಂದ 10 ನಿಮಿಷಗಳಿಗೆ ಹೆಚ್ಚಿಸಿದೆ.