Uncategorizedರಾಷ್ಟ್ರಿಯ

ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆಗೆ ಮುಸ್ಲಿಮರ ಅಡ್ಡಿ

ವಾರಾಣಸಿ: ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಜ್ಞಾನವಾಪಿ ಮಸೀದಿಯ ಬಳಿಯಲ್ಲಿನ ಶೃಂಗಾರ ಗೌರಿ ದೇವಿ ಪೂಜೆಯ ಅವಕಾಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿವಿಲ್ ಕೋರ್ಟ್ ನೇಮಿಸಿದ್ದ ವಕೀಲ ಅಜಯ್ ಕುಮಾರ್ ಅವರ ನೇತೃತ್ವದ ಸಮಿತಿಯು ಶುಕ್ರವಾರ ವಿಡಿಯೊ ಸಮೀಕ್ಷೆ ನಡೆಸಿತು. ಪೊಲೀಸರ ಭಾರಿ ಭದ್ರತೆ ನಡುವೆ ಕಾಶಿ ವಿಶ್ವನಾಥ ಆವರಣದ ಸೂಕ್ಷ್ಮ ಪ್ರದೇಶಕ್ಕೆ ಆಗಮಿಸಿದ ಸಮಿತಿಯ ವಿರುದ್ಧ ಸ್ಥಳದಲ್ಲಿ ನೆರೆದಿದ್ದ ಭಾರಿ ಸಂಖ್ಯೆಯ ಮುಸ್ಲಿಮರು ಧಿಕ್ಕಾರ ಕೂಗಿದ್ದಾರೆ.

ಜಿಲ್ಲಾಧಿ ಕಾರಿ ಕೌಶಲ್ ರಾಜ್ ಅವರ ಪ್ರಕಾರ, ಮೊದಲ ದಿನದ ಸಮೀಕ್ಷೆಯು ಯಶಸ್ವಿಯಾಗಿದೆ. ಶುಕ್ರವಾರ ಹಾಗೂ ಶನಿವಾರದಂದು ಸಮೀಕ್ಷೆ ನಡೆಸಲು ಕೋರ್ಟ್ ಆದೇಶಿಸಿತ್ತು. ಆದರೆ, ಮಸೀದಿಯ ಆಡಳಿತ ಮಂಡಳಿಯು ಆದೇಶವನ್ನು ವಿರೋಧಿ ಸುವುದಾಗಿ ಮುಂಚೆಯೇ ಹೇಳಿಕೆ ನೀಡಿತ್ತು. ಮಸೀದಿಯ ಗೋಡೆಯು ಕಾಶಿ ವಿಶ್ವನಾಥ್, ಮಂದಿರ ಆವರಣದ ಗೋಡೆಯೊಂದಿಗೆ ಜೋಡಿಕೊಂಡಿದೆ. ಹಾಗಂತ ಮಸೀದಿಯೊಳಗೆ ನಮ್ಮ ಧರ್ಮವನ್ನು ನಂಬದವರನ್ನು ಪ್ರವೇಶಿಸಲು ಬಿಡಲ್ಲ ಎಂದು ಮಸೀದಿಯ ಆಡಳಿತ ಕಾರ್ಯದರ್ಶಿ ಯಾಸಿನ್ ಎಚ್ಚರಿಸಿದ್ದರು.

ಮೇ 10ರಂದು ಪ್ರಕರಣದ ಮುಂದಿನ ವಿಚಾರಣೆಯೊಳಗೆ ಸಮಿತಿಯು ಕೋಟ್ ೯ಗೆ ವರದಿ ಸಲ್ಲಿಸಬೇಕಿದೆ. 2021ರ ಆಗಸ್ ನಲ್ಲಿ ವಾರಾಣಸಿಯ ಸ್ಥಳೀಯ ನಿವಾಸಿಗರು ತಮಗೆ ನಿತ್ಯವೂ ಶೃಂಗಾರ ಗೌರಿಯ ಪೂಜೆಗೆ ಅವಕಾಶ ನೀಡಲು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ರವಿ ದಿವಾಕರ್ ಅವರು ಕಳೆದ ಏ.26ರಂದು ವಕೀಲರ ಸಮಿತಿ ರಚಿಸಿ, ಮಸೀದಿ ಹಾಗೂ ಗೌರಿ ಮಂದಿರ ಸಮೀಕ್ಷೆ ನಡೆಸಿ ವರದಿ ನೀಡುವಂತೆ ನಿರ್ದೇಶಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button