
ಬೆಂಗಳೂರು, ಜೂ.1- ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ಜೂ 6 ಒಳಗೆ ರಸ್ತೆ ಗುಂಡಿ ಮುಕ್ತ ಮಾಡಲಾಗುವುದೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ನಗರದಲ್ಲಿ ಒಂದು ವಾರ ಸತತವಾಗಿ ಮಳೆ ಸುರಿದ ಕಾರಣ ರಸ್ತೆಗಳು ಹಾಳಾಗಿವೆ.
ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗಾಗುತ್ತಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಶೀಘ್ರ ಕಾಮಗಾರಿ ಕೈಗೊಂಡು ಈಗಾಗಲೇ ನಗರದಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ಹೈಕೋರ್ಟ್ ರಸ್ತೆ ಗುಂಡಿ ಮುಚ್ಚಲು ತಗಲುವ ವೆಚ್ಚ ವರದಿ ಸಲ್ಲಿಕೆ ಕುರಿತಂತೆ ಕರೆಯಲಾಗಿದ್ದ ಸಭೆಯಲ್ಲಿ ಬಿಬಿಎಂಪಿ ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯಎಂಜಿನಿರ್ ಪ್ರಹ್ಲಾದ್ ಅವರು ಎಆರ್‍ಟಿಎಸ್ ಕಂಪನಿಯ ನಿರ್ದೇಶಕರ ಮೇಲಿನ ಹಲ್ಲೆಗೆ ಸಂಬಂಸಿದಂತೆ ವಿಶಷ ಆಯುಕ್ತ ರವೀಂದ್ರ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಕಂಪನಿ ಹಾಗೂ ಪ್ರಹ್ಲಾದ್‍ಗೆ ನೋಟೀಸ್ ನೀಡಲಾಗಿದೆ. ವಿಚಾರಣೆಯನ್ನು ತ್ವರಿತ ಗತಿಯಲ್ಲಿ ನಡೆಸಲಾಗುವುದು ಎಂದರು.
ರಸ್ತೆ ಗುಂಡಿ ಮುಚ್ಚುವ ಪೈಥಾನ್ ನಿರ್ವಹಣೆಯಿಂದ ಪ್ರಹ್ಲಾದ್ ಅವರನ್ನು ಬಿಡುಗಡೆ ಮಾಡಿ ಮುಖ್ಯ ಎಂಜಿನಿಯರ್ ಲೋಕೇಶ್ ಅವರ ಹೆಗಲಿಗೆ ವಹಿಸಲಾಗಿದೆ. ಬಿಬಿಎಂಪಿಗೆ ಹೊಸದಾಗಿ ಸೇರಿದ 100 ಹಳ್ಳಿಗಳ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಜಲಮಂಡಳಿಯಿಂದ ನೀರಿನ ಪೂರೈಕೆ ಕಾಮಗಾರಿ ತ್ವರಿತಗೊಳಿಸಲಾಗುತ್ತಿದೆ. ಪ್ರತಿ ವಾರ್ಡ್‍ಗೆ ರಸ್ತೆ ಗುಂಡಿ ಮುಚ್ಚಲು 30 ಲಕ್ಷ ಮೀಸಲಿಡಲಾಗಿದೆ ಎಂದರು.
2021ರ ಜನಗಣತಿ ಪ್ರಕಾರ 243 ವಾರ್ಡ್‍ಗಳನ್ನು ನಿಗದಿ ಮಾಡಲಾಗಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳ ವಿಚಾರಕ್ಕೆ ಸಂಬಂಸಿದಂತೆ ಪ್ರತಿಕ್ರಿಯಿಸಿದ ಅವರು, ಇದುವರೆಗೂ 3 ಪ್ರಕರಣಗಳು ದಾಖಲಾಗಿವೆ. ಚಿಕಿತ್ಸೆ ಪಡೆಯುವವರಿಗೆ 5 ಸಾವಿರದವರೆಗೂ ಪಾಲಿಕೆ ಯಿಂದಲೇ ಭರಿಸಲಾಗುವುದು.
ಎಬಿಸಿ ಕುರಿತಂತೆ ಟೆಂಡರ್ ಕರೆದಿದ್ದರೂ ಯಾರೂ ಭಾಗಿಯಾಗುತ್ತಿಲ್ಲ. ಕೆಲ ಬದಲಾವಣೆಗಳೊಂದಿಗೆ ಶೀಘ್ರದಲ್ಲೇ ಟೆಂಟರ್ ಅಂತಿಮ ಮಾಡಲಾಗುವುದು ಎಂದರು.ಕೋವಿಡ್ ಪ್ರಕರಣಗಳು ಹೆಚ್ಚಾಗಿ ಏರಿಕೆ ಕಾಣುತ್ತಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಸದ್ಯ 15 ಸಾವಿರ ಟೆಸ್ಟಿಂಗ್ ಮಾಡಲಾಗುತ್ತಿದೆ. ಇದನ್ನು 20 ಸಾವಿರಕ್ಕೆ ಎರಿಕೆ ಮಾಡಲು ಸೂಚನೆ ನೀಡಲಾಗಿದೆ. ರಾಜ ಕಾಲುವೆ ಸರ್ವೆಗೆ ಸರ್ವೆಯರ್‍ಗಳ ಕೊರತೆ ಇರುವುದು ನಿಜ. ಶೀಘ್ರದಲ್ಲೇ ಸರ್ವೆಯರ್‍ಗಳನ್ನು ನೇಮಕ ಮಾಡಿಕೊಂಡು ಸರ್ವೆ ಮಾಡಲಾಗುವುದು ಎಂದರು.