ಅಪರಾಧ

ಜೀವಂತ ಉಡಗಳ ಮಾರಾಟಕ್ಕೆ ಯತ್ನ ಮೂವರು ಅರೆಸ್ಟ್

ಚಿಕ್ಕಬಳ್ಳಾಪುರ: ಏಳು ಜೀವಂತ ಉಡಗಳನ್ನು ತಂದು ಮಾರಾಟ ಮಾಡುತ್ತಿದ್ದ ವೇಳೆ ರಾಜ್ಯ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಮೂರು ಜನರನ್ನು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರು ಪಟ್ಟಣದಲ್ಲಿ ನಡೆದಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಚೇಳೂರು ಪಟ್ಟಣದ ಶಾಫಿಯಾ ಹೋಟೆಲ್ ನಲ್ಲಿ ಜೀವಂತ ಉಡಗಳನ್ನು ಪಂಜರದಲ್ಲಿಟ್ಟು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಎಸ್. ಇಸ್ಮಾಯಿಲ್ ಜಭೀಉಲ್ಲಾ, ರಿಜ್ವಾನ್ ಹಾಗೂ ಬಾವಾಜಾನ್ ರನ್ನು ಬಂಧನ ಮಾಡಿದ್ದಾರೆ.ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಏಳು ಜೀವಂತ ಉಡಗಳನ್ನು ರಕ್ಷಣೆ ಮಾಡಿದ್ದಾರೆ.ಕಾರ್ಯಾಚರಣೆಯಲ್ಲಿ ರಾಜ್ಯ ಅರಣ್ಯ ಸಂಚಾರಿ ದಳದ ಉಪಸಂರಕ್ಷಾಧಿಕಾರಿ ಜಿ.ಎ ಗಂಗಾಧರ್, ಚಿಂತಾಮಣಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿದಾನಂದ್ ಸೇರಿದಂತೆ ಹಲವು ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button