ರಾಜ್ಯ

ಜಾವಗಲ್ ಸರ್ಕಾರಿ ಶಾಲಾ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು.

2022 ರ ಜೂನ್ 21 ರಂದು
ಜಾವಗಲ್ ಸರ್ಕಾರಿ ಶಾಲಾ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು.
ಶೂನ್ಯ ಫೌಂಡೇಶನ್ ನ ಶ್ರೀಹರಿ ಗುರೂಜಿಯವರ ಮಾರ್ಗದರ್ಶನದಲ್ಲಿ ಒಂದು ವಾರದಿಂದ ಜಾವಗಲ್ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಯೋಗಾಭ್ಯಾಸದ ಪ್ರಾರಂಭಿಕ ಹಂತದ ಆಸನಗಳನ್ನು ತರಬೇತಿ ನೀಡುವುದರ ಮೂಲಕ ಈ ದಿನದ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಮಕ್ಕಳನ್ನು ಸಜ್ಜುಗೊಳಿಸುವ ಕಾರ್ಯವು ಫಲಪ್ರದವಾಯಿತು. ಶಾಲಾ ಕಾಲೇಜಿನ ಮಕ್ಕಳು ಮತ್ತು ಜಾವಗಲ್ ನ ಜನರು ಸೇರಿ ಈ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸೂರ್ಯ ನಮಸ್ಕಾರವನ್ನು ಮಾಡುವುದರ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಿದರು.

ಕನಕಗುರುಪೀಠ ಮೈಸೂರು ವಿಭಾಗದ ಪ ಪೂ ಶ್ರೀ ಶ್ರೀ ಡಾ||ಶಿವಾನಂದಪುರಿ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಮಕ್ಕಳು ತಾಳ್ಮೆಯಿಂದ ಒಂದೇ ಕಡೆ ಏಕಾಗ್ರತೆಯಿಂದ ಕುಳಿತುಕೊಳ್ಳುವುದನ್ನು ಕಲಿಯುವುದು ಬಹಳ ಕಷ್ಟಸಾಧ್ಯದ ಮಾತು. ಮಕ್ಕಳು ತಾವು ಓದುವುದರಲ್ಲಿ ಆಸಕ್ತಿಯಿಂದ ಓದುವುದು ಕಲಿಕೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದು ಈ ದಿನದ ಜಗತ್ತಿನಲ್ಲಿ ಕಷ್ಟಕರವಾಗಿದೆ. ತಮ್ಮ ಗುರಿಯನ್ನು ಸಾಧನೆ ಮಾಡಲು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಯೋಗ ಹಾಗೂ ಯೋಗ ಶಾಸ್ತ್ರವನ್ನು ಅಭ್ಯಾಸ ಮಾಡಿದ್ದೆ ಆದಲ್ಲಿ ಅವರೆಲ್ಲರೂ ನಿಖರವಾಗಿ ಗುರಿಯನ್ನು ತಲುಪಬಹುದು ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿದರು.

ಪ ಪು ಶ್ರೀ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿರವರು ಸ್ವತಹ ಯೋಗಾಭ್ಯಾಸವನ್ನು ಮೂವತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ, ಜಾವಗಲ್ ಜನತೆಗೆ ಮನಸ್ಸು ಮತ್ತು ದೇಹವನ್ನು ಭಗವಂತನೆಡೆಗೆ ಕರೆದುಕೊಂಡು ಹೋಗುವ ಸರಳ ಸೂತ್ರ ಯೋಗಾಭ್ಯಾಸದಿಂದ ಸಾಧ್ಯ ಎಂದು ತಿಳಿಸಿದರು.

ಶೂನ್ಯ ಪೌಂಡೇಶನ ಸಂಸ್ಥಾಪಕರಾದ ಶ್ರೀ ಹರಿ ಗುರೂಜಿ ಮಾತನಾಡಿ ಯೋಗವು ದೇಹ ಮತ್ತು ಮನಸ್ಸನ್ನು ಒಂದು ಮಾಡುವ ಸಾಧನ ಮತ್ತು ಯೋಗವು ಬರೀ ಆಸನಗಳಿಗೆ ಮಾತ್ರ ಸೀಮಿತವಾಗದೆ ಜೀವನಕ್ಕೆ ಯೋಗಶಾಸ್ತ್ರವು ಆರೋಗ್ಯನಿರ್ವಹಣೆ, ಮನಸ್ಸಿನ ನಿಗ್ರಹ ಹಾಗೂ ಈ ಎರಡರ ಮಹಾನ್ ಶಕ್ತಿಯನ್ನು ತನ್ನಲ್ಲಿ ತಾನು ಅರಿಯುವ ಕ್ರಿಯೆ ಎಂದು ವಿವರಿಸಿದರು.
ಯೋಗವೂ ಒಂದು ಧರ್ಮಕ್ಕೆ ಆಗಲಿ ಒಂದು ಜಾತಿಗಾಗಿ ಮೀಸಲಾಗದೆ ಜಾತಿ ಧರ್ಮಗಳನ್ನು ಮೀರಿ ಮನುಕುಲದ ಒಳಿತಿಗಾಗಿ ಇರುವಂತಹ ಒಂದು ಮಹತ್ವವಾದ ಶಾಸ್ತ್ರವಾಗಿದೆ. ಇದನ್ನು ಪ್ರತಿಯೊಬ್ಬರೂ ಸಹ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯ ಬಹುದಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಎಸ್.ಎಲ್.ಎನ್ ಯೋಗ ಸಂಘದ ಯೋಗಗುರುಗಳಾದ ರಂಗಸ್ವಾಮಿಯವರು ಯೋಗವನ್ನು ಒಂದು ದಿನಕ್ಕೆ ಮಾತ್ರ ಮೀಸಲಿಡಬಾರದು ಅದು ಪ್ರತಿದಿನದ ಅಭ್ಯಾಸ ವಾಗಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಯಶೋದಮ್ಮ ಮಾತನಾಡಿ ಸಮಸ್ತ ಜನರು ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಹಾಗೂ ಜಾವಗಲ್ ಜನರೆಲ್ಲರೂ ಆರೋಗ್ಯವಾಗಿ ಇರಲಿ ಎಂದು ಆಶಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಮಾತನಾಡಿ
ಜಾವಗಲ್ ಅಂತರ್ರಾಷ್ಟ್ರೀಯ ಯೋಗ ದಿನದ ಮಹತ್ವದ ಕುರಿತು ಮಾತನಾಡಿದರು.

ಶೂನ್ಯ ಫೌಂಡೇಶನ್ ನಲ್ಲಿ ಯೋಗ ಶಾಸ್ತ್ರದ ಮೂಲಕ ಚಿಕಿತ್ಸೆಯನ್ನು ಪಡೆಯುತ್ತಿರುವ ಮಗುವಿನ ತಾಯಿ ಶ್ರೀಮತಿ ಪದ್ಮಶ್ರೀ ಮಾತನಾಡಿ ತನ್ನ ಮಗುವಿನ ಚೇತರಿಕೆಯ ಬಗ್ಗೆ ವಿವರಣೆ ನೀಡಿ ಯೋಗ ಶಾಸ್ತ್ರದ ಬಗ್ಗೆ ಬಹಳ ಗೌರವ ಪೂರ್ವಕವಾದ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜ್ಞಾನ ಸ್ಪಂದನ ಫೌಂಡೇಶನ್ ಸಂಸ್ಥಾಪಕರಾದ ಸತ್ಯನಾರಾಯಣರವರು,
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಪ್ರಸನ್ನ ರವರು, ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಯಶೋದಮ್ಮ ನಂಜುಂಡಪ್ಪ, ಬಿಜೆಪಿ ಮುಖಂಡರಾದ ಚೇತನ್,ಗ್ರಾ ಪಂ ಸದಸ್ಯರಾದ ಶ್ರೀ ಪ್ರಭು, ಪಾಂಡುರಂಗ, ರಾಮ್ ಮೋಹನ್, ಜಾವಗಲ್ ಗ್ರಾಮಸ್ಥರು ಹಾಗೂ ಮಕ್ಕಳು ಹಾಜರಿದ್ದರು .

Related Articles

Leave a Reply

Your email address will not be published. Required fields are marked *

Back to top button