ರಾಜಕೀಯ

ಜಾರಕಿಹೊಳಿ 819 ಕೋಟಿ ಲೂಟಿ ಮಾಡಿದ್ದಾರೆ, ಇದ್ರಲ್ಲಿ ಶಾ, ಪಡ್ನವೀಸ್, ಬೊಮ್ಮಾಯಿ ಭಾಗಿ’

ಮಾಜಿ ಸಚಿವ ರಮೇಶ್ ಜಾರಕಿಹೊಳಿ 819 ಕೋಟಿ ಹಣ ಲೂಟಿ ಮಾಡಿದ್ದಾರೆ. ಇದು ಸಾರ್ವಜನಿಕ ಹಣ, ಇದ್ರಲ್ಲಿ ಅಮಿತ್ ಶಾ, ಪಡ್ನವೀಸ್ ಮತ್ತು ಬೊಮ್ಮಾಯಿ ಭಾಗಿಯಾಗಿದ್ದಾರೆ.

ಆದ್ರೆ ರಮೇಶ್ ಜಾರಕಿಹೊಳಿಗೆ ಇನ್ನೂ ನೋಟಿಸ್ ನೀಡಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ, ಸೌಭಾಗ್ಯ ಲಕ್ಷ್ಮಿ ಶುಗರ್ ನಲ್ಲಿ ಮಗ, ಮಗಳು, ಸೊಸೆ ಮತ್ತು ರಮೇಶ್ ಸೇರಿ ಎಂಟು ಜನ ಈ ಪ್ರಮುಖರು.

ಸೌಭಾಗ್ಯ ಲಕ್ಷ್ಮಿ ಶುಗರ್ ಅವರೇ ಬರೆದಿರುವ ದಾಖಲೆ ಬಿಡುಗಡೆ ಮಾಡ್ತಾ ಇದ್ದೇನೆ. 2019 ರಲ್ಲಿ ಸೌಭಾಗ್ಯ ಲಕ್ಷ್ಮಿ ಶುಗರ್ ಗೆ ನೊಟೀಸ್ ಕೊಡ್ತಾರೆ. ಅಫೆಕ್ಸ್ ಬ್ಯಾಂಕ್ ರಮೇಶ್ ಗೆ ನೊಟೀಸ್ ನೀಡ್ತಾರೆ.

ಅದರ ಅಧ್ಯಕ್ಷ ಬೆಳ್ಳಿ ಪ್ರಕಾಶ್, ನೀವು ಪಡೆದ ಸಾಲ ಹಿಂದುರಿಗಿಸಿದ ಹಿನ್ನಲೆ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ನೊಟೀಸ್ ಕೊಡ್ತಾರೆ.

ಆದ್ರೆ, ಜಿಲ್ಲಾಧಿಕಾರಿ ಇಲ್ಲಿ ತನಕ ಏನು ಮಾಡಿಲ್ಲ ಎಂದರು.ಅಭಿನಂದನ್ ಪಾಟೀಲ್ ರಮೇಶ್ ಜಾರಕಿಹೊಳಿಯ ಬೇನಾಮಿ ಆಸ್ತಿಯ ಹೋಲ್ಡರ್, ಅವರು ಜಾರಕಿಹೊಳಿ ಜೊತೆಯೆ ಓಡಾಡ್ತಾ ಇರ್ತಾರೆ. ಅಭಿನಂದನ್ ಪಾಟೀಲ್ ಹೆಸರಲ್ಲಿ ಒಂದು ಕಂಪನಿ ಇದೆ.

ಸೌಭಾಗ್ಯ ಲಕ್ಷ್ಮೀ ಲಾಸ್ ಆಗಿದೆ ಎಂದು ಘೋಷಣೆ ಮಾಡಿದ್ದಾರೆ. ಆದ್ರೂ ಅಲ್ಲಿ ಕಬ್ಬನ್ನು ಅರೆತಾ ಇದ್ದಾರೆ. ಅದರಿಂದ ಲಾಭ ಬರ್ತಾ ಇದೆ. ಲಾಭಾಂಶ ಬೋರ್ಡ್ ಡೈರೆಕ್ಟರ್ ಗೆ ಹೋಗ್ತಾ ಇದೆ.

ಬೋರ್ಡ್ ಡೈರೆಕ್ಟರ್ ಅವರ ಮಗ, ಮಗಳು, ಸೊಸೆ ಇನ್ನುಳಿದವರಿಗೆ ಲಾಭಾಂಶ ಹೋಗ್ತಿದೆ ಎಂದರು. ಬಳಿಕ ರಮೇಶ್ ಕೋರ್ಟ್ ಮೊರೆ ಹೋಗ್ತಾರೆ. ಬಳಿಕ ಕೋರ್ಟ್ ಒಂದು ನಿರ್ದೆಶನ ನೀಡತ್ತೆ. ಮೊದಲು ನೀವು ಪಡೆದ ಸಾಲದ ಅರ್ಧ ಪಾವತಿ ಮಾಡಿ ಎಂದು ಸೂಚನೆ ನೀಡಿದೆ.

ಆದ್ರೆ ಕೋರ್ಟ್ ಸೂಚನೆಯನ್ನು ಜಾರಕಿಹೊಳಿ ಪಾಲನೆ ಮಾಡಲ್ಲ. ಅದಾದ ಬಳಿಕ ಮತ್ತೆ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಕೋರ್ಟ್ ಸೂಚನೆಯ ಹಿನ್ನಲೆ ನೋಟಿಸ್ ನೀಡ್ತಾರೆ.

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪರ್ಮಿಶನ್ ಕೇಳ್ತಾರೆ. ಸೌಭಾಗ್ಯ ಲಕ್ಷ್ಮೀ ಶುಗರ್ 900 ಕೋಟಿ ಗೂ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿದೆ ಎಂದರು. ರಮೇಶ್ ಜಾರಕಿಹೊಳಿ ಇಷ್ಟು ತಪ್ಪು ಮಾಡಿದ್ರು.

ಐಟಿ, ಇಡಿ ಏನ್ ಮಾಡ್ತಾ ಇದೆ? ಅಮಿತ್ ಶಾ ಏನ್ ಮಾಡ್ತಾ ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಬೀಳಿಸ್ತಾರೆ ಎನ್ನುವ ಭಯ ನಿಮಗಾ? ಅಥವಾ ಸರ್ಕಾರ ತಂದವರು ಎನ್ನುವ ಕಾಳಜಿಯೆ? ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ನೀವು ಬಿಡ್ತಾ ಇದ್ರಾ? ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೂಡಲೇ ರಮೇಶ್ ರನ್ನು ಬಂಧಿಸಬೇಕು.. 819 ಕೋಟಿ ಹಗರಣದಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೂ ಪಾಲಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ, ಬಂಡೆಪ್ಪ ಕಾಶಪ್ಪನವರ್ ಅವರಿಗೂ ಇದ್ರಲ್ಲಿ ಹಣ ಹೋಗಿರಬಹುದು.

ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮ ಮಾತು ಕೇಳ್ತಾ ಇರಲಿಲ್ಲ.

ಆದರೆ ಸಿದ್ದರಾಮಯ್ಯರಿಗೆ ನಮ್ಮ ಕಾಂಗ್ರೆಸ್ ನಾಯಕರಿಗೆ ಇದ್ರಲ್ಲಿ ಹಣ ಪಡೆದಿಲ್ಲ. ಸಮ್ಮಿಶ್ರ ಸರ್ಕಾರದ ಸಹಕಾರ ಮಂತ್ರಿ ನಮ್ಮ ಪಾರ್ಟಿಯವರು ಆಗಿರಲಿಲ್ಲ ಎಂದು ಹೇಳಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button