ಜಾತ್ರೆಯಲ್ಲಿ ಪಾನಿಪುರಿ ತಿಂದು 97 ಮಕ್ಕಳು ಅಸ್ವಸ್ಥ
97 Children Fall Sick After Eating 'Pani Puri' At Madhya

ಮೇ 29- ಜಾತ್ರೆಯೊಂದರಲ್ಲಿ ಪಾನಿಪುರಿ ತಿಂದ ತೊಂಬತ್ತೇಳು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲಾಯಲ್ಲಿ ನಡೆದಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಜಿಲ್ಲಾ ಕೇಂದ್ರದಿಂದ 38 ಕಿ.ಮೀ. ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸಿಂಗರಾಪುರ ಪ್ರದೇಶದಲ್ಲಿ ಆಯೋಜಿಸಿದ್ದ ಜಾತ್ರೆಗೆ ಬಂದಿದ್ದ ಮೀಪದ ವಿವಿಧ ಗ್ರಾಮಗಳ ಜನರು ಶನಿವಾರ ಸಂಜೆ ಒಂದೇ ಅಂಗಡಿಯಲ್ಲಿದ್ದ ಮಸಾಲೆ ತಿಂಡಿಯನ್ನು ಸಂತ್ರಸ್ತರೆಲ್ಲರೂ ಸೇವಿಸಿದ್ದರು.
ರಾತ್ರಿ 7.30ರ ಸುಮಾರಿಗೆ ಮಕ್ಕಳಿಗೆ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಆರ್.ಶಾಕ್ಯಾ ತಿಳಿಸಿದ್ದಾರೆ. ವಿಷಾಹಾರ ಸೇವನೆಯಿಂದ 97 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು. ಪಾನಿ ಪುರಿ ಮಾರಾಟಗಾರನನ್ನು ಬಂಸಲಾಗಿದೆ ಮತ್ತು ತಿಂಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಡ್ಲಾದ ಸಂಸದ, ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿಯಾದರು.