ರಾಜಕೀಯರಾಷ್ಟ್ರಿಯ

ಜಯಲಲಿತಾ ಸಾವಿನ ಪ್ರಕರಣಕ್ಕೆ ತಿರುವು: ಶಶಿಕಲಾ, ವೈದ್ಯರ ಲೋಪದ ಬಗ್ಗೆ ವರದಿ

ಚೆನ್ನೈ: ತೀವ್ರ ಅನಾರೋಗ್ಯದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಅವರು 2016ರಲ್ಲಿ ನಿಧನರಾದ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ನ್ಯಾಯಮೂರ್ತಿಗಳು ಸುದೀರ್ಘ ವರದಿ ಸಲ್ಲಿಸಿದ್ದಾರೆ.

ಈ ವರದಿಯಲ್ಲಿ ಅವರು, ಕನಿಷ್ಠ ಒಬ್ಬ ಉನ್ನತ ಸರ್ಕಾರಿ ಅಧಿಕಾರಿ ಮತ್ತು ಜಯಲಲಿತಾ ಅವರ ಜತೆ ವಾಸಿಸುತ್ತಿದ್ದ ಅವರ ಆಪ್ತೆ ವಿಕೆ ಶಶಿಕಲಾ ಅವರು ಎಸಗಿದ ಲೋಪಗಳನ್ನು ಪ್ರಸ್ತಾಪಿಸಿದ್ದಾರೆ.

ಇದರಿಂದ ಜಯಲಲಿತಾ ಅವರ ನಿಧನದ ಸಂದರ್ಭದಿಂದಲೂ, ಅವರ ಸಾವಿನಲ್ಲಿ ಬೇರೆಯದೇ ಕೈವಾಡ ಇರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯಕ್ಕೆ ಬಲ ಬಂದಂತಾಗಿದೆ.

ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ಆರುಮುಗಸ್ವಾಮಿ ನೇತೃತ್ವದ ತಂಡವನ್ನು 2017ರಲ್ಲಿ ರಚಿಸಲಾಗಿತ್ತು.

ಜಯಲಲಿತಾ ಅವರ ಅನಾರೋಗ್ಯ, ಅಪೋಲೋ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿರುವುದರ ನಡುವಿನ ಆರೋಪಗಳು, ಕಾನೂನು ಪ್ರತಿಪಾದನೆಗಳು ಮತ್ತು ಸಂಚಿನ ಅನುಮಾನಗಳ ಕುರಿತಂತೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಆಗಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ ಆಯೋಗ ರಚನೆ ಮಾಡಿತ್ತು.

ಡಿಎಂಕೆ ಸರ್ಕಾರವು ಅಧಿಕಾರಕ್ಕೆ ಬಂದಾಗ, ಜಯಲಲಿತಾ ಅವರ ಸಾವಿನ ಪ್ರಕರಣವನ್ನು ವಿವರವಾಗಿ ತನಿಖೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿತ್ತು.

ನ್ಯಾ. ಎ ಆರುಮುಗಸ್ವಾಮಿ ತಂಡದ ವರದಿಯನ್ನು ಆಗಸ್ಟ್‌ನಲ್ಲಿ ಸಲ್ಲಿಸಲಾಗಿತ್ತು. ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರವು ಈ ವರದಿಯನ್ನು ಮಂಗಳವಾರ ಹಂಚಿಕೊಂಡಿದೆ.

ಜಯಲಲಿತಾ ಅವರ ನಿಧನದ ವೇಳೆ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ. ರಾಮ ಮೋಹನ ರಾವ್ ಅವರು ಅಪರಾಧ ಕೃತ್ಯಗಳಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದು ಉನ್ನತ ಅಧಿಕಾರಿಯನ್ನು ವರದಿ ಹೆಸರಿಸಿದೆ.

ವರದಿಯು ಆಗಿನ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ವಿರುದ್ಧವೂ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದೆ. ಜಯಲಲಿತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಪೋಲೋ ಅಧ್ಯಕ್ಷ ಡಾ. ಪ್ರತಾಪ್ ರೆಡ್ಡಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದೆ.

ಜಯಲಲಿತಾ ಅವರ ಪರಮಾಪ್ತೆ, ವಿಕೆ ಶಶಿಕಲಾ ಅವರ ಕುರಿತೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಲವು ದಶಕಗಳಿಂದ ಜಯಲಲಿತಾ ಜತೆಗಿದ್ದ ಶಶಿಕಲಾ, ಜಯಲಲಿತಾ ಅವರು ಪ್ರಮುಖ ಆರೋಪಿಯಾಗಿದ್ದ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button