ರಾಜ್ಯ

ಜನ ನನ್ನ ಕೈಹಿಡಿದುಬಿಟ್ಟರೆ ಇವರ ಮುಖವಾಡಗಳನ್ನೆಲ್ಲಾ ಬಿಚ್ಚಿ ಬಿಚ್ಚಿ ತೋರಿಸ್ತೀನಿ: ರೂಪೇಶ್ ರಾಜಣ್ಣ

ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಏಳನೇ ವಾರ ವಿಶೇಷ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಯಾರು ರಿಯಲ್, ಯಾರು ಫೇಕ್ ಎಂಬುದನ್ನು ಸ್ಪರ್ಧಿಗಳೇ ತಿಳಿಸಬೇಕಿದೆ. ದಿವ್ಯಾ ಉರುಡುಗ ಅವರನ್ನ ಫೇಕ್ ಗುಂಪಿಗೆ ಸೇರಿಸಿದ ರೂಪೇಶ್ ರಾಜಣ್ಣ ಕೆಲವು ಸಂಗತಿಗಳನ್ನ ಬಿಚ್ಚಿಟ್ಟರು.

ಇದಾದ್ಮೇಲೆ ರೂಪೇಶ್ ರಾಜಣ್ಣ ಅವರನ್ನೇ ಮಿಕ್ಕವರು ಟಾರ್ಗೆಟ್ ಮಾಡಿದಾಗ ‘’ಜನ ನನ್ನ ಕೈಹಿಡಿದುಬಿಟ್ಟರೆ ಇವರ ಮುಖವಾಡಗಳನ್ನೆಲ್ಲಾ ಬಿಚ್ಚಿ ಬಿಚ್ಚಿ ತೋರಿಸ್ತೀನಿ’’ ಎಂದು ಗುಡುಗಿದ್ದಾರೆ.ಮನೆಯ ಸ್ಪರ್ಧಿಗಳು ಪರಸ್ಪರ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ಈ ವಾರದ ಟಾಸ್ಕ್‌ಗಳನ್ನು ನೀಡಲಾಗಿದೆ. ಇದರ ಅನುಸಾರ ಪ್ರತಿ ಆಟದಲ್ಲಿ ಗೆಲ್ಲುವ ಸ್ಪರ್ಧಿ ತೀರ್ಪುಗಾರನಾಗಿ ವಿಶೇಷ ಆಸನದ ಮೇಲೆ ಕುಳಿತುಕೊಂಡು..

ಅವರ ಅನಿಸಿಕೆಯ ಪ್ರಕಾರ.. ಮನೆಯ ಟಾಪ್ ಐದು ರಿಯಲ್ ಸ್ಪರ್ಧಿಗಳು ಯಾರು ಎಂಬುದನ್ನ ಘೋಷಿಸಬೇಕು. ಉಳಿದ ಸ್ಪರ್ಧಿಗಳು ಫೇಕ್‌ ಗುಂಪಿಗೆ ಸೇರುತ್ತಾರೆ. ಫೇಕ್ ಗುಂಪಿಗೆ ಸೇರಿದವರು ತಮ್ಮೊಳಗೆ ಚರ್ಚಿಸಿ ಮುಂದಿನ ವಾರದ ನಾಮಿನೇಷನ್‌ಗೆ ಇಬ್ಬರನ್ನ ಆಯ್ಕೆ ಮಾಡಬೇಕು. ಅದೇ ಆಯ್ಕೆಯನ್ನ ರಿಯಲ್ ಗುಂಪು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು.

ಆನಂತರ ತೀರ್ಪುಗಾರ ಟಾಸ್ ಹಾಕಬೇಕು. ಟಾಸ್ಕ್‌ನಲ್ಲಿ ಕಣ್ಣಿನ ಆಕೃತಿ ಬಿದ್ದಾಗ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಟಾಸ್‌ನಲ್ಲಿ ‘ಬಿಗ್ ಬಾಸ್’ ಅಕ್ಷರ ಬಿದ್ದರೆ ಒಬ್ಬರನ್ನ ಬದಲಾವಣೆ ಮಾಡಬೇಕು.

ಬಳಿಕ ಮುಂದಿನ ಟಾಸ್ಕ್ ಯಾರು ಆಡುತ್ತಾರೆ ಎಂದು ತೀರ್ಪುಗಾರ ನಿರ್ಧರಿಸಿ ಹೇಳಬೇಕಿತ್ತು.ವಾರದ ಅಂತ್ಯದಲ್ಲಿ ಅತಿ ಹೆಚ್ಚು ಬಾರಿ ಟಾಸ್ಕ್ ಗೆದ್ದು ತೀರ್ಪುಗಾರರಾದವರು, ಅತಿ ಹೆಚ್ಚು ಬಾರಿ ರಿಯಲ್ ಎಂದೆನಿಸಿಕೊಂಡವರು ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ.

ಅತಿ ಹೆಚ್ಚು ಬಾರಿ ನಾಮಿನೇಟ್ ಆಗುವ ಸದಸ್ಯರು ಮುಂದಿನ ವಾರದ ನಾಮಿನೇಷನ್‌ಗೆ ನೇರವಾಗಿ ಆಯ್ಕೆ ಆಗುತ್ತಾರೆ.ಈ ವಾರ ಕ್ಯಾಪ್ಟನ್ ಆಗಿರುವ ಪ್ರಶಾಂತ್ ಸಂಬರಗಿ ಮೊದಲ ತೀರ್ಪುಗಾರರಾಗಿ ಟಾಸ್ಕ್‌ಗೆ ಚಾಲನೆ ನೀಡಿದರು. ರಿಯಲ್ ಗುಂಪಿಗೆ – ಕಾವ್ಯಶ್ರೀ ಗೌಡ, ರೂಪೇಶ್ ಶೆಟ್ಟಿ, ಆರ್ಯವರ್ಧನ್, ಅನುಪಮಾ ಗೌಡ, ಅರುಣ್ ಸಾಗರ್ ಅವರನ್ನ ಸೇರಿಸಿದರೆ, ಫೇಕ್ ಗುಂಪಿಗೆ – ದೀಪಿಕಾ ದಾಸ್, ರೂಪೇಶ್ ರಾಜಣ್ಣ, ವಿನೋದ್ ಗೊಬ್ಬರಗಾಲ, ದಿವ್ಯಾ ಉರುಡುಗ, ಅಮೂಲ್ಯ ಗೌಡ, ರಾಕೇಶ್ ಅಡಿಗ ಅವರುಗಳನ್ನ ಪ್ರಶಾಂತ್ ಸಂಬರಗಿ ಸೇರಿಸಿದರು.

ಈ ವೇಳೆ ಫೇಕ್‌ ಗುಂಪಿನಲ್ಲಿ ತಮ್ಮಲ್ಲೇ ನಾಮಿನೇಷನ್ ಚರ್ಚೆ ನಡೆಯುವಾಗ ದಿವ್ಯಾ ಉರುಡುಗ.. ರೂಪೇಶ್ ರಾಜಣ್ಣ ಅವರ ಹೆಸರನ್ನ ತೆಗೆದುಕೊಂಡರು. ಅತ್ತ ದಿವ್ಯಾ ಉರುಡುಗ ಹೆಸರನ್ನ ರೂಪೇಶ್ ರಾಜಣ್ಣ ಹೇಳಿದರು.

ದಿವ್ಯಾ ಉರುಡುಗ ಕೇವಲ ಹಾಡು ಮತ್ತು ತನ್ನ ಸೇಫ್ಟಿಗೆ ಏನು ಬೇಕು ಅಷ್ಟು ಮಾತ್ರ ಆಡ್ಕೊಂಡು ಸಮಯ ಕಳೆಯುತ್ತಿದ್ದಾರೆ ಹೊರತು ಕಳೆದ ವರ್ಷದಲ್ಲಿ ಇದ್ದ ಹಾಗೆ ಖಂಡಿತ ಇಲ್ಲ. ಸ್ವಲ್ಪ ಸಮಯಸಾಧಕಿ ಅನಿಸುತ್ತೆ. ಇತ್ತೀಚೆಗೆ ಒಂದು ಹಾಡು ಮಾಡಿದ್ವಿ.

ಆ ಹಾಡಿನ ಟ್ಯೂನ್ ಮಾಡಿದವನು ನಾನು. ಸಾಹಿತ್ಯ ಬರೆದವನು ನಾನು. ಎಲ್ಲೂ ಅದು ರೂಪೇಶ್ ರಾಜಣ್ಣ ಮಾಡಿದ ಟ್ಯೂನ್ ಅಂತ ಬಾಯ್ಬಿಟ್ಟು ಹೇಳಲ್ಲ. ಇದು ನಾನೇ ಮಾಡಿದ್ದು ಎಂಬಂತೆ ಜನರಿಗೆ ಬಿಂಬಿಸಿದ್ದಾರೆ. ಈ ರೀತಿ ಸಣ್ಣ ಸಣ್ಣ ವಿಷಯಗಳಲ್ಲಿ.. ಅಡುಗೆ ಮನೆಯಲ್ಲಿ ಲೋಟ ಒಡೆದಾಗ.. ಅವರ ಕಡೆಯಿಂದ ಟಚ್ ಆಗಿರಬಹುದು. ಆದರೆ, ಅದನ್ನ ಬಿಟ್ಟುಕೊಡದೆ..

ನಾನು ಹೊಡೆದ ಮೇಲೆ.. ದೀಪಿಕಾ ದಾಸ್ ಶಿಕ್ಷೆ ಹೇಳಲು ಬಂದಾಗ ಡಿಫೆನ್ಸಿವ್ ಆಗ್ತಾರೆ. ತಮ್ಮ ತಪ್ಪನ್ನ ಮುಚ್ಚಿಕೊಂಡು ನಾಟಕ ಆಡ್ತಾರೆ. ಆ ನಾಟಕ ಕಾರಣಕ್ಕೆ ನಾನು ದಿವ್ಯಾ ಉರುಡುಗ ಅವರನ್ನ ನಾಮಿನೇಟ್ ಮಾಡ್ತೀನಿ’’ ಎಂದರು ರೂಪೇಶ್ ರಾಜಣ್ಣ.ಒಬ್ಬರು ಬರೆದಿದ್ದ ಹಾಡನ್ನ ಹೇಳದೇ ಹೋದಾಗ..

ಒಬ್ಬ ಕಲಾವಿದನಾಗಿ ಬಹಳ ನೋವಾಗುತ್ತದೆ’’ ಎಂದು ಅರುಣ್ ಸಾಗರ್ ಹೇಳಿದರು. ಅದಕ್ಕೆ, ‘’ನಾನು ಟ್ಯೂನ್ ಹಾಕಿದ್ದೆ. ಲಿರಿಕ್ಸ್ ಬರೆದಿದ್ದೆ. ಆ ಮಾತನ್ನ ಅವರು ಹೇಳಲೇ ಇಲ್ಲ. ಸತ್ಯವನ್ನಾದರೂ ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಂಡಿದಿದ್ರೆ ನಾನು ಈ ಕಾರಣವನ್ನ ಕೊಟ್ಟು ನಾಮಿನೇಟ್ ಮಾಡುತ್ತಿರಲಿಲ್ಲ’’ ಎಂದರು ರೂಪೇಶ್ ರಾಜಣ್ಣ. ‘’ಅವಳಿಗೆ ತುಂಬಾ ಹರ್ಟ್ ಆಗಿದೆ. ಪಾಪ..

ಒದ್ದಾಡುತ್ತಿದ್ದಾಳೆ’’ ಅಂತ ಅರುಣ್ ಸಾಗರ್ ಹೇಳಿದಾಗ, ‘’ಸತ್ಯವನ್ನೇ ತಾನೇ ಹೇಳಿದ್ದು! ನಾನು ಯಾಕೆ ಮುಚ್ಚಿಡಲಿ..’’ ಎಂದರು ರೂಪೇಶ್ ರಾಜಣ್ಣ. ‘’ನೀವು ಇಂಥದ್ದಕ್ಕೆ ಹೋರಾಡಿ’’ ಎಂದರು ಅರುಣ್ ಸಾಗರ್.ನಾನೇ ಲೋಟವನ್ನ ಒಡೆದು ಹಾಕಿದಿದ್ದರೆ ನಾನೇ ಹೇಳುತ್ತಿದ್ದೆ.

ಅವರ ಪರವಾಗಿ ನಾನು ಮಾತನಾಡಿದ್ದು. ಈಗ ನೋಡಿದ್ರೆ ಹೀಗೆ ಹೇಳ್ತಿದ್ದಾರೆ’’ ಎಂದು ಹೇಳುತ್ತಾ ದಿವ್ಯಾ ಉರುಡುಗ ಕಣ್ಣೀರು ಸುರಿಸಿದರು.ರಾಕೇಶ್ ಅಡಿಗ – ರೂಪೇಶ್ ರಾಜಣ್ಣ ಮಧ್ಯೆ ವಾಗ್ವಾದರಾಕೇಶ್ ಅಡಿಗ – ನೀವು ಮಾತನಾಡಿದ್ದು ತುಂಬಾ ತುಂಬಾ ತಪ್ಪುರೂಪೇಶ್ ರಾಜಣ್ಣ – ಯಾಕೆ?ರಾಕೇಶ್ ಅಡಿಗ – ಈ ಮನೆಯಲ್ಲಿ ನಿಮಗೆ ಅವಳು ತುಂಬಾ ಸಪೋರ್ಟ್ ಮಾಡಿದ್ದಳು.

ಅವಳಿಗೆ ಅಷ್ಟೋಂದು ರೂಡ್‌ ಆಗಿ ಅನ್ನಬಾರದಿತ್ತು. ಅವಳು ಯಾವಾಗಲೂ ನಿಮಗೆ ಅಪ್ರೀಷಿಯೇಟ್ ಮಾಡುತ್ತಿದ್ದಳು. ನಿಮಗೆ ಉತ್ತಮ ಕೊಡುತ್ತಿದ್ದಳು.ರೂಪೇಶ್ ರಾಜಣ್ಣ – ನನಗೆ ಉತ್ತಮ ಕೊಟ್ಟರು ಎಂಬ ಕಾರಣಕ್ಕೆ ನಾನು ಅವರ ತಪ್ಪು ಹೇಳಬಾರದಾ?ರಾಕೇಶ್ ಅಡಿಗ – ಹೇಳೋ ರೀತಿ ತುಂಬಾ ಹಾರ್ಶ್ ಆಗಿತ್ತು.

ಚುಚ್ಚಿದ ಹಾಗಿತ್ತು.ರೂಪೇಶ್ ರಾಜಣ್ಣ – ಅದನ್ನೇ ಸಾಫ್ಟ್ ಆಗಿ ಹೇಳಬಹುದಿತ್ತಾ?ರಾಕೇಶ್ ಅಡಿಗ – ಹೌದು..ರೂಪೇಶ್ ರಾಜಣ್ಣ – ನಾನು ಹೇಳಿದ್ದು ಸತ್ಯ ತಾನೇ?ರಾಕೇಶ್ ಅಡಿಗ – ನನಗೆ ಗೊತ್ತಿಲ್ಲ..ರೂಪೇಶ್ ರಾಜಣ್ಣ – ಪೂರ್ತಿ ಮಾಹಿತಿ ಇಲ್ಲ ಅಂದ್ರೆ ದಯವಿಟ್ಟು ಮಧ್ಯೆ ಬರಬೇಡಿ.

ರಾಕೇಶ್ ಅಡಿಗ – ನೀವು ಹೇಳಿದ್ದು ರೂಡ್ ಇತ್ತು ಅಂತಷ್ಟೇ ನಾನು ಹೇಳಿದ್ದು. ಅವಳು ಅತ್ತಿದ್ದು ನನಗೆ ಬೇಜಾರಾಯಿತು.ರೂಪೇಶ್ ರಾಜಣ್ಣ – ಈಗ ನಾನೂ ಕಣ್ಣೀರು ಹಾಕ್ಲಾ ಕ್ಯಾಮರಾ ಮುಂದೆ?ನೋವಾಗಿದೆ!‘’ನ್ಯಾಯ ಕೇಳೋದು ಕರೆಕ್ಟ್. ಆದರೆ ಏರುದನಿಯಲ್ಲಿ ಕೇಳೋದು ತಪ್ಪು. ದಯವಿಟ್ಟು ಹೀಗೆ ಮಾಡಬೇಡಿ ಅಂದ್ರೆ ನಾನು ಒಳ್ಳೆಯವನಾಗ್ತೀನಾ? ಹೇಳೋಕೆ ಆಗದೇ ಇರೋವಷ್ಟು ನೋವಾಗಿದೆ ನನಗೆ.

ಹತ್ತು ಹತ್ತು ಚಾಕುವನ್ನ ಚುಚ್ಚಿದ ಹಾಗಾಗಿದೆ. ಅದನ್ನೆಲ್ಲಾ ಕ್ಯಾಮರಾ ಮುಂದೆ ಹೇಳೋಕೆ ಆಗುತ್ತಾ?’’ ಎಂದು ರೂಪೇಶ್ ರಾಜಣ್ಣ ಬೇಸರ ವ್ಯಕ್ತಪಡಿಸಿದರು.ಎಷ್ಟು ಸಾಂಗ್ ಬರೆದೆ ಅಂತ ಕೇಳಿದ್ರು. ರಾಜಣ್ಣನ ಜೊತೆ, ಅಮೂಲ್ಯ ಜೊತೆ, ರಾಕೇಶ್ ಜೊತೆ.. ಕಾಂಬಿನೇಶನ್ ಸುಮಾರಿದೆ. ಸೋಲೋ ಆದರೆ ಎರಡೇ ಅಂತಾನೇ ಹೇಳಿದ್ದೀನಿ.

ಅವರ ಹಾಡು ನನಗೆ ಯಾಕೆ? ಅಂಥ ಮನಸ್ಥಿತಿ ಇರೋರ ಬಳಿ ಕ್ಲಿಯರ್ ಮಾಡೋಕೂ ನನಗೆ ಇಷ್ಟ ಇಲ್ಲ. ಎಲ್ಲಾದರೂ ಒಂದು ಕಡೆ ಆ ಹಾಡನ್ನ ನಾನೇ ಬರೆದಿರೋದು ಅಂತ ಹೇಳಿದ್ರೆ.. ನಾನೊಬ್ಬಳೇ ಹಾಡಿದ್ರೆ ಕೇಳಿ..’’ ಎಂದರು ದಿವ್ಯಾ ಉರುಡುಗ.ರೂಪೇಶ್ ರಾಜಣ್ಣ ಕೊಟ್ಟ ತೀರ್ಪುತೀರ್ಪುಗಾರರಾಗಿ ರೂಪೇಶ್ ರಾಜಣ್ಣ ಕೂತಾಗ ರಿಯಲ್ ಗುಂಪಿಗೆ – ರೂಪೇಶ್ ಶೆಟ್ಟಿ, ಅಮೂಲ್ಯ ಗೌಡ, ಆರ್ಯವರ್ಧನ್ ಗುರೂಜಿ, ವಿನೋದ್, ಕಾವ್ಯಶ್ರೀ ಗೌಡ ಅವರನ್ನ ಸೇರಿಸಿದರು. ಫೇಕ್ ಗುಂಪಿಗೆ – ಅನುಪಮಾ ಗೌಡ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್, ಅರುಣ್ ಸಾಗರ್, ಪ್ರಶಾಂತ್ ಸಂಬರಗಿ ಅವರನ್ನ ರೂಪೇಶ್ ರಾಜಣ್ಣ ಸೇರಿಸಿದರು.

ಅವರೆಲ್ಲರೂ ಒಂದಾಗಿ ನನ್ನ ವಿರುದ್ಧ ಬರೋದಲ್ಲ. ನಾನೊಬ್ಬನೇ ನಿಂತುಕೊಳ್ತೀನಿ. ಜನ ಒಬ್ಬರು ಕೈಹಿಡಿದುಬಿಟ್ಟರೆ, ಇವರ ಮುಖವಾಡಗಳನ್ನೆಲ್ಲಾ ಬಿಚ್ಚಿ ಬಿಚ್ಚಿ ಒಬ್ಬೊಬ್ಬರದ್ದು ತೋರಿಸಲಿಲ್ಲ ಅಂದ್ರೆ ಕೇಳಿ…’’ ಎಂದು ರೂಪೇಶ್ ರಾಜಣ್ಣ ಗುಡುಗಿದರು.ಹಾಗೇ, ‘’ನನಗೆ ಸ್ವಲ್ಪ ಮರೆವು ಜಾಸ್ತಿ.

ನನ್ನ ಸ್ಟೇಟ್ಮೆಂಟ್‌ನಲ್ಲಿ ವರ್ಡಿಂಗ್ ಆಚೆ ಈಚೆ ಆಗಿರಬಹುದು. ಆದರೆ, ಹೇಳಿಕೆಯಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ’’ ಎಂದರು ರೂಪೇಶ್ ರಾಜಣ್ಣ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button