ಜನ್ಮಾಷ್ಟಮಿಯಂದು ರೂಪುಗೊಳ್ಳಲಿದೆ ವಿಶೇಷ ಯೋಗ

ಕೃಷ್ಣ ಜನ್ಮಾಷ್ಟಮಿ: ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷ ಅಷ್ಟಮಿಯಂದು ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು ಎಂದು ಹೇಳಲಾಗುತ್ತದೆ. ಈ ದಿನ ಶ್ರೀಕೃಷ್ಣನ ಬಾಲ ರೂಪವನ್ನು ಪೂಜಿಸಲು ಇದೇ ಕಾರಣ ಎಂಬ ನಂಬಿಕೆಯೂ ಇದೆ.
ಧಾರ್ಮಿಕ ವಿದ್ವಾಂಸರ ಪ್ರಕಾರ, ಈ ಬಾರಿ ಜನ್ಮಾಷ್ಟಮಿಯಂದು ವೃದ್ಧಿ ಮತ್ತು ಧ್ರುವ ಎಂಬ 2 ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ವಿಶೇಷ ಯೋಗಗಳನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ. ಈ ದಿನ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಭಗವಾನ್ ವಿಷ್ಟು ಮತ್ತು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಹಾಗಿದ್ದರೆ, ಈ ದಿನ ಯಾವ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಒಳ್ಳೆಯದಾಗಲಿದೆ ತಿಳಿಯಿರಿ.ಜನ್ಮಾಷ್ಟಮಿಯಂದು ವೃದ್ಧಿ ಮತ್ತು ಧ್ರುವ ಎಂಬ ಎರಡೂ ಶುಭ ಯೋಗಗಳು ರಾಧಾ-ಕೃಷ್ಣರ ಆರಾಧನೆಗೆ ಮಂಗಳಕರವೆಂದು ನಂಬಲಾಗಿದೆ.
ಈ ಎರಡೂ ಯೋಗಗಳ ಸಮಯದಲ್ಲಿ ರಾಧಾ-ಕೃಷ್ಣ ಜಿಯನ್ನು ಪೂಜಿಸುವುದು ವಿಶೇಷ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಭಗವಾನ್ ವಿಷ್ಣು-ಮಾತೆ ಲಕ್ಷ್ಮಿ ಅವರ ಆಶೀರ್ವಾದಕ್ಕೂ ಪಾತ್ರರಾಗಬಹುದು ಎಂದು ನಂಬಲಾಗಿದೆ.
ಏಳು ಕನ್ಯೆಯರಿಗೆ ಬಿಳಿ ಸಿಹಿ ಪದಾರ್ಥವನ್ನು ದಾನ ಮಾಡಿ:ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ಜನ್ಮಾಷ್ಟಮಿಯಂದು ಏಳು ಕನ್ಯೆಯರಿಗೆ ಬಿಳಿ ಸಿಹಿ ಪದಾರ್ಥವನ್ನು ದಾನ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ನೀವು ಮನೆಯಲ್ಲಿ ಏಳು ಜನ ಹುಡುಗಿಯರನ್ನು ಕರೆಸಿ ಕುಂಕುಮ ನೀಡಿ ಶಾವಿಗೆ ಖೀರ್ ಅನ್ನು ನೀಡಿ. ಜನ್ಮಾಷ್ಟಮಿಯಿಂದ ಆರಂಭವಾಗಿ ಸತತ 5 ಶುಕ್ರವಾರಗಳವರೆಗೆ ಈ ಪರಿಹಾರವನ್ನು ಮಾಡಬೇಕು. ಈ ರೀತಿ ಮಾದುವುದರಿಂದ ಉದ್ಯೋಗ-ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಮನೆಯಲ್ಲಿ ಸಂಪತ್ತು ವೃದ್ದಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ವೀಳ್ಯದೆಲೆ ಪರಿಹಾರ:ನಿಮ್ಮ ಮನೆಯಲ್ಲಿ ಬಿಟ್ಟೂ ಬಿಡದೆ ಹಣಕಾಸಿನ ತೊಂದರೆಗಳು ಕಾಡುತ್ತಿದ್ದರೆ ಜನ್ಮಾಷ್ಟಮಿಯ ದಿನದಂದು ವೀಳ್ಯದೆಲೆಯ ಪರಿಹಾರ ನಿಮಗೆ ಪ್ರಯೋಜನಕಾರಿ ಆಗಿದೆ. ಮೊದಲನೆಯದಾಗಿ, ಜನ್ಮಾಷ್ಟಮಿಯ ದಿನದಂದು ಕೃಷ್ಣ ಪರಮಾತ್ಮನಿಗೆ ವೀಳ್ಯದೆಲೆಯನ್ನು ಅರ್ಪಿಸಿ.
ಇದಾದ ನಂತರ ಆ ವೀಳ್ಯದೆಲೆಯಲ್ಲಿ ರಂಗೋಲಿಯಿಂದ ಶ್ರೀಯಂತ್ರವನ್ನು ಮಾಡಿ. ನಂತರ ಆ ವೀಳ್ಯದೆಲೆಯನ್ನು ಕುಟುಂಬದೊಂದಿಗೆ ಪೂಜಿಸಿ ಮತ್ತು ನಂತರ ಅದನ್ನು ಮನೆಯ ಕಮಾನು ಅಥವಾ ನೀವು ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ.
ಈ ಪರಿಹಾರವು ಮನೆಯಲ್ಲಿ ಹಣದ ಕೊರತೆಯನ್ನು ನಿವಾರಿಸುತ್ತದೆ ಮತ್ತು ಕುಟುಂಬದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ.ಮನೆಯಲ್ಲಿ ಲಕ್ಷ್ಮಿ ನೆಲೆಸಲು ಈ ರೀತಿ ಮಾಡಿ:ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವ ಮನೆಯಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ನೆಲೆಸಿರುತ್ತಾಳೋ ಅಂತಹ ಮನೆಯಲ್ಲಿ ಎಂದಿಗೂ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಲಕ್ಷ್ಮಿ ನೆಲೆಸುವಂತೆ ಮಾಡಲು ಜನ್ಮಾಷ್ಟಮಿಯಂದು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ದಿನ ಶ್ರೀಗಂಧ ಅಥವಾ ಕುಂಕುಮದಲ್ಲಿ ರೋಸ್ ವಾಟರ್ ಬೆರೆಸಿ ತಿಲಕವನ್ನು ಹಚ್ಚಿ. ಇದರ ನಂತರ, ಗೋಪಿ ಶ್ರೀಗಂಧದಿಂದ ಶ್ರೀಕೃಷ್ಣನಿಗೆ ಅಲಂಕರಿಸಿ.
ಈ ಪರಿಹಾರದಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಅವಳು ತನ್ನ ಸಂಪೂರ್ಣ ಆಶೀರ್ವಾದವನ್ನು ಕುಟುಂಬಕ್ಕೆ ನೀಡುತ್ತಾಳೆ ಎಂದು ಹೇಳಲಾಗುತ್ತದೆ.ಹಸು ಮತ್ತು ಕರುವಿನ ವಿಗ್ರಹವನ್ನು ಪೂಜಿಸಿ:ಧಾರ್ಮಿಕ ಗ್ರಂಥಗಳಲ್ಲಿ ಜನ್ಮಾಷ್ಟಮಿಯ ಮತ್ತೊಂದು ವಿಶೇಷ ಪರಿಹಾರವನ್ನು ಉಲ್ಲೇಖಿಸಲಾಗಿದೆ.
ಜನ್ಮಾಷ್ಟಮಿಯ ದಿನ ಮನೆಯಲ್ಲಿ ಕರುವಿರುವ ಹಸುವಿನ ಮೂರ್ತಿಗೆ ಪೂಜೆ ಸಲ್ಲಿಸಬೇಕು ಎಂದು ಹೇಳಲಾಗುತ್ತದೆ. ಹಸುವಿನ ಜೊತೆ ಕೊಳಲು ನುಡಿಸುವ ಕೃಷ್ಣ ಪರಮಾತ್ಮನನ್ನು ಸಹ ಪೂಜಿಸಿ.
ಈ ಪರಿಹಾರದಿಂದ ದಂಪತಿಗಳು ಮಕ್ಕಳ ಸಂತೋಷವನ್ನು ಪಡೆಯುತ್ತಾರೆ ಮತ್ತು ಕುಟುಂಬದಲ್ಲಿ ಸಂತೋಷದ ಧ್ವನಿಯು ಅನುರಣಿಸಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.