ಜನಸಂಖ್ಯಾ ನಿಯಂತ್ರಣ ಸಮಾನ ನೀತಿ ಅಗತ್ಯತೆ ಭಾಗವತ್ ಪ್ರತಿಪಾದನೆ

ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ “ಎಲ್ಲರಿಗೂ ಅನ್ವಯವಾಗುವ” ಸಮಾನ ನೀತಿಯ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದಿಲ್ಲಿ ಹೇಳಿದ್ದಾರೆ.”ಧರ್ಮ ಆಧಾರಿತ ಜನಸಂಖ್ಯೆಯ ಅಸಮತೋಲನವನ್ನೂ ನಿರ್ಲಕ್ಷಿಸಲಾಗುವುದಿಲ್ಲ” ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಆರೆಸ್ಸೆಸ್, ಆಡಳಿತಾರೂಢ ಬಿಜೆಪಿಯ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡಿದ ಅವರು,ದೇಶ ಒಡೆಯುವ ಭೀತಿ ಹೆಚ್ಚಿಸಲು “ಧರ್ಮ ಆಧಾರಿತ ಅಸಮತೋಲನ” ಮತ್ತು “ಬಲವಂತದ ಮತಾಂತರ” ವನ್ನು ಉಲ್ಲೇಖಿಸಿದ್ದಾರೆ.ಪೂರ್ವ ಟಿಮೋರ್, ಕೊಸೊವೊ ಮತ್ತು ದಕ್ಷಿಣ ಸುಡಾನ್ ಅನ್ನು “ಧಾರ್ಮಿಕ ಸಮುದಾಯ-ಆಧಾರಿತ ಅಸಮತೋಲನದ ಕಾರಣದಿಂದ ಹೊರಹೊಮ್ಮಿದ ಹೊಸ ದೇಶಗಳು ತಾಜಾ ಉದಾಹರಣೆಗಳಾಗಿವೆ ಎಂದು ತಿಳಿಸಿದ್ದಾರೆ.“ಜನಸಂಖ್ಯೆಯ ನಿಯಂತ್ರಣದ ಜೊತೆಗೆ, ಧಾರ್ಮಿಕ ಆಧಾರದ ಮೇಲೆ ಸಮತೋಲನ ಸಹ ಪ್ರಾಮುಖ್ಯತೆಯ ವಿಷಯವಾಗಿದೆ, ಅದನ್ನು ನಿರ್ಲಕ್ಷಿಸಲಾಗುವುದಿಲ್ಲ”ಎಂದು ಹೇಳಿದ್ದಾರೆ.
ಕೆಲವು ಮುಸ್ಲಿಂ ನಾಯಕರನ್ನು ಭೇಟಿಯಾದ ಕೆಲವೇ ವಾರಗಳ ನಂತರ ತಮ್ಮ ಭಾಷಣದಲ್ಲಿ ಒತ್ತಿ ಹೇಳಿರುವ ಅವರು “ಜನಸಂಖ್ಯೆಗೆ ಸಂಪನ್ಮೂಲ ಬೇಕಾಗುತ್ತದೆ, ಅಥವಾ ಅದು ಹೊರೆಯಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಮಗುವನ್ನು ಹೆರುವ ಯಾವುದೇ ನೀತಿಯಲ್ಲಿ ಮಹಿಳೆಯರ ಆರೋಗ್ಯ “ಖಂಡಿತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಹೇಳಿದ ಅವರು ಇಂದಿನ ದಸರಾ ರ್ಯಾಲಿಯು ಆರ್‌ಎಸ್‌ಎಸ್ ತನ್ನ ವಾರ್ಷಿಕ ಕಾರ್ಯಕ್ರಮಕ್ಕೆ ಮಹಿಳೆಯನ್ನು ಮುಖ್ಯ ಅತಿಥಿಯಾಗಿ – ಪರ್ವತಾರೋಹಿ ಸಂತೋಷ್ ಯಾದವ್‌ಗೆ – ಮೊದಲ ಬಾರಿಗೆ ಆಹ್ವಾನಿಸಿದೆ ಎಂದರು.ಮೂಲಭೂತವಾಗಿ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳ ಪ್ರಮುಖ ಅಜೆಂಡಾವನ್ನು ಪುನರುಚ್ಚರಿಸಿದ ಅವರು, “ಜನನ ಪ್ರಮಾಣ ಒಂದು ಕಾರಣ, ಬಲ, ಆಮಿಷ ಅಥವಾ ದುರಾಶೆ ಮತ್ತು ಒಳನುಸುಳುವಿಕೆಯಿಂದ ಮತಾಂತರಗಳು ಸಹ ದೊಡ್ಡ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ.