ಜನರ ಸೇವೆ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ : ನಟ ಜಗ್ಗೇಶ್

ಜನಸೇವೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ನಿಷ್ಪಕ್ಷಪಾತವಾಗಿ ಎಲ್ಲರನ್ನು ಒಗ್ಗೂಡಿಸಿ ರಾಜ್ಯದ ಪ್ರಗತಿಗೆ ಶ್ರಮಿಸುತ್ತೇನೆ ಎಂದು ನಿಯೋಜಿತ ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ನಟ ಜಗ್ಗೇಶ್ ತಿಳಿಸಿದ್ದಾರೆ.
ನಾನು ಮಾಡಿದ ಕೆಲಸ ಕಾರ್ಯಗಳಿಂದ ಬಿಜೆಪಿ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ವಹಿಸುತ್ತಿದ್ದಾರೆ.
ರಾಯರ ಕೃಪೆಯಿಂದ ಒಳ್ಳೆಯ ಕೆಲಸ ಮಾಡುವ ಶಕ್ತಿ ನನಗೆ ಲಭಿಸಿದೆ ಎಂದು ಅವರು ಹೇಳಿದ್ದಾರೆ.ನನಗೆ ರಾಜ್ಯಸಭೆಗೆ ಟಿಕೆಟ್ ಸಿಗುವ ಯಾವುದೇ ಮಾಹಿತಿ ಇರಲಿಲ್ಲ.
ದೆಹಲಿಯಿಂದ ನಮ್ಮ ನಾಯಕರು ತಿಳಿಸಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಬಿಜೆಪಿಯಲ್ಲಿ ಸಕ್ರಿಯವಾಗಿ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತಿದ್ದೇನೆ.
ರಾಷ್ಟ್ರ ಮಟ್ಟದಲ್ಲಿ ನನ್ನ ರಾಜಕೀಯ ಜೀವನ ಶುರುವಾಗುತ್ತಿರುವುದು ಹೊಸ ಅನುಭವ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಗಳ ಬಗ್ಗೆ ನಾನು ಪ್ರಭಾವಿತನಾಗಿದ್ದೇನೆ.
ಪ್ರಸ್ತುತ ನನ್ನ ಕಲಾರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಒಳ್ಳೆಯ ಅವಕಾಶ ಸಿಗುತ್ತದೆ. ಅದನ್ನು ಬಳಸಿಕೊಂಡು ನನ್ನ ವ್ಯಾಪ್ತಿಗೆ ಬರುವ ಜನ ಸೇವೆಯನ್ನು ನಿಶ್ವಾರ್ಥ ಹಾಗೂ ಪಾರದರ್ಶಕವಾಗಿ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.ನನ್ನ ಕುಟುಂಬ ಹಾಗೂ ಅಭಿಮಾನಿ ಗಳು ಸಹ ಸಂತಷಪಟ್ಟಿದ್ದಾರೆ.
ಎಲ್ಲರ ಆಶೀರ್ವಾದದಿಂದ ನಾಳೆ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.