
ಕೆಜಿಎಫ್, ಪುಷ್ಪ, ಆರ್‍ಆರ್‍ಆರ್ ಸಿನಿಮಾಗಳ ನಂತರ ಬಾಲಿವುಡ್‍ಗಿಂತ ದಕ್ಷಿಣ ಭಾರತದ ಸಿನಿಮಾ ನಟರುಗಳ ದರ್ಬಾರ್ ಜೋರಾಗಿದೆ. ಕಳೆದ ವರ್ಷ ಬಾಲಿವುಡ್‍ನ ಖಾನ್ ತ್ರಯರಾದ ಶಾರುಕ್‍ಖಾನ್, ಸಲ್ಮಾನ್‍ಖಾನ್, ಅಮೀರ್‍ಖಾನ್‍ಗಳ ಜಮಾನವೇ ನಡೆಯುತ್ತಿತ್ತು, ಆದರೆ ಈ ವರ್ಷ ಖಾನ್ ತ್ರಯರ ಸಿನಿಮಾಗಳು ಹೇಳಿಕೊಳ್ಳದ ಹೆಸರು ಮಾಡದೇ ಇರುವುದರಿಂದ ಅವರ ಜನಪ್ರಿಯತೆಯೂ ತಗ್ಗಿದೆ.
ಸಲ್ಮಾನ್‍ಖಾನ್ ಅಭಿನಯದ ಅಂತಿಮ್ ದಿ ಟ್ರೂತ್ ಸಿನಿಮಾವು ಬಾಕ್ಸ್‍ಆಫೀಸ್‍ನಲ್ಲಿ ಮಕಾಡೆ ಮಲಗಿದ್ದರೆ, ಶಾರುಖ್ ಹಾಗೂ ಅಮೀರ್‍ರ ಸಿನಿಮಾಗಳು ನೆಲಕಚ್ಚಿವೆ. ಈಗ ಬಿಡುಗಡೆಯಾಗಿರುವ ಜನಪ್ರಿಯ ನಟರುಗಳ ಪಟ್ಟಿಯಲ್ಲಿ ಬಾಲಿವುಡ್‍ನ ಕಿಲಾಡಿ ನಟ ಅಕ್ಷಯ್‍ಕುಮಾರ್ ಮಾತ್ರ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ, ಅವರು ಅಭಿನಯಿಸಿದ್ದ ಸೂರ್ಯವಂಶಿ ಚಿತ್ರವು ಸಕ್ಸಸ್ ಆದರೆ, ಸಾಮ್ರಾಟ್ ಪೃಥ್ವಿರಾಜ್ ಹಾಗೂ ಬಚ್ಚನ್ ಪಾಂಡೆ ಸಿನಿಮಾಗಳು ಸೋಲು ಕಂಡಿವೆ.
ಟಾಪ್ 10ರಲ್ಲಿ ರಾಕಿಂಗ್ ಸ್ಟಾರ್ ಯಶ್‍ಗೆ ಸ್ಥಾನ:ಪ್ರಶಾಂತ್ ನೀಲ್ ನಿರ್ದೇಶಿಸಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾವು ವಿಶ್ವದೆಲ್ಲೆಡೆ ಹೆಸರು ಮಾಡಿರುವುದರಿಂದ ಪ್ರತಿಷ್ಠಿತ ಒಮ್ರ್ಯಾಕ್ಸ್ ಹೊರಡಿಸಿರುವ ಜನಪ್ರಿಯ ನಟರುಗಳ ಪಟ್ಟಿಯಲ್ಲಿ ಯಶ್‍ಗೆ 7ನೆ ಸ್ಥಾನ ಲಭಿಸಿದೆ. ಕೆಜಿಎಫ್ 2 ಚಿತ್ರವು ದೇಶ, ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿ 1100 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಗಮನ ಸೆಳೆದಿತ್ತು.
ಯಾವ ನಟನಿಗೆ ಎಷ್ಟನೇ ಸ್ಥಾನ:ಬ್ರಿಸ್ಟ್ ಸಿನಿಮಾ ಸೋತರೂ ಕೂಡ ತಮಿಳಿನ ಸ್ಟಾರ್ ನಟ ವಿಜಯ್ ಅವರು ನಂಬರ್ 1 ಸ್ಥಾನ ಪಡೆದಿದ್ದಾರೆ, ಆರ್‍ಆರ್ ಆರ್ ಸಿನಿಮಾದ ಕೋಮರಂ ಭೀಮುಡು ಪಾತ್ರದಿಂದ ಗಮನ ಸೆಳೆದಿದ್ದ ಟಾಲಿವುಡ್‍ನ ಸ್ಟಾರ್ ನಟ ಜ್ಯೂನಿಯರ್ ಎನ್‍ಟಿಆರ್ ನಂತರದ ಸ್ಥಾನ ಪಡೆದಿದ್ದಾರೆ. ಯಂಗ್ ರೆಬೆಲ್‍ಸ್ಟಾರ್ ಖ್ಯಾತಿಯ ಪ್ರಭಾಸ್‍ರ ರಾಧೆ ಶ್ಯಾಮ್ ಸಿನಿಮಾ ಸೋತರೂ ಕೂಡ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಮೂಲಕ 3ನೆ ಸ್ಥಾನ ಅಲಂಕರಿಸಿದ್ದಾರೆ.
ಪುಷ್ಪ ಸಿನಿಮಾದ ನಟನೆ ಮೂಲಕ ಗಮನ ಸೆಳೆದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (4ನೇ ಸ್ಥಾನ), ಬಾಲಿವುಡ್‍ನ ಅಕ್ಷಯ್‍ಕುಮಾರ್(5ನೇ ಸ್ಥಾನ), ಕಾಲಿವುಡ್ ನಟ ಅಜಿತ್ ( 6ನೇ ಸ್ಥಾನ), ಸ್ಯಾಂಡಲ್‍ವುಡ್‍ನ ರಾಕಿಂಗ್‍ಸ್ಟಾರ್ ಯಶ್ (7ನೇ ಸ್ಥಾನ), ಆರ್‍ಆರ್‍ಆರ್ ಚಿತ್ರದಲ್ಲಿ ಗಮನಾರ್ಹ ನಟನೆ ನೀಡಿದ್ದ ರಾಮ್‍ಚರಣ್ (8ನೇ ಸ್ಥಾನ), ತಮಿಳು ನಟ ಸೂರ್ಯ (9ನೇ ಸ್ಥಾನ) ಹಾಗೂ ಪ್ರಿನ್ಸ್ ಮಹೇಶ್‍ಬಾಬು (10ನೇ ಸ್ಥಾನ) ಅಲಂಕರಿಸಿದ್ದಾರೆ.ಒಮ್ರ್ಯಾಕ್ಸ್ ಪ್ರತಿ ತಿಂಗಳು ಜನಪ್ರಿಯ ನಾಯಕನಟರುಗಳ ಪಟ್ಟಿ ಮಾಡುತ್ತಿದ್ದು ಇವುಗಳ ಪಟ್ಟಿಯು ಬದಲಾವಣೆಯಾಗುತ್ತಿರುತ್ತದೆ.