ಜನಪ್ರಿಯತೆಯಲ್ಲಿ ಆರ್ಸಿಬಿಯೇ ಮುಂದು

ವಿಶ್ವ ಕ್ರಿಕೆಟ್ ಲೀಗ್ ಆದ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗುವಲ್ಲಿ ಎಡವಿದರೂ ಕೂಡ ಜನಪ್ರಿಯತೆಯಲ್ಲಿ ಪಾಫ್ ಡುಪ್ಲೆಸಿ ತಂಡವೇ ಮುಂಚೂಣಿಯಲ್ಲಿದೆ.
ಈ ಬಾರಿಯ ಅತಿ ಹೆಚ್ಚು ಪಂದ್ಯಗಳು 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್‍ನ ತವರು ನೆಲವಾದ ಮುಂಬೈನಲ್ಲೇ ನಡೆದರೂ ಕೂಡ ಆ ತಂಡಕ್ಕಿಂತ ಹೆಚ್ಚಿನ ಜನಪ್ರಿಯತೆಯೂ ಆರ್ಸಿಬಿ ದಕ್ಕಿದೆ.
ಆರ್‍ಸಿಬಿಯ ತವರು ನೆಲವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯ ನಡೆಯದಿದ್ದರೂ ಕೂಡ ಮೈದಾನದಲ್ಲಿ ಅಭಿಮಾನಿಗಳು ಆರ್ಸಿಬಿ… ಆರ್ಸಿಬಿ…. ಎಂದು ಉದ್ಘೋಷ ಮಾಡುವ ಮೂಲಕ ತಮಗೆ ಆ ತಂಡದ ಮೇಲಿರುವ ಒಲವನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ಟ್ವೀಟ್‍ನಲ್ಲೂ ಕೂಡ ಎಲ್ಲ ತಂಡಗಳಿಗಿಂತ ಘರ್ಜಿಸುವ ಸಿಂಹದ ಚಿಹ್ನೆಯನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬಗ್ಗೆ ಅತಿ ಹೆಚ್ಚಾಗಿ ಚರ್ಚೆ ಆಗಿದೆ ಎಂಬ ಅಂಶವೂ ಕೂಡ ಬೆಳಕಿಗೆ ಬಂದಿದೆ.
ಟ್ವಿಟ್ಟರ್‍ನಲ್ಲಿ ಪಾಪ್ ಡುಪ್ಲೆಸಿಸ್ ನೇತೃತ್ವದ ಆರ್‍ಸಿಬಿಯ ನಂತರ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತು ಚರ್ಚೆಯಾಗಿದೆ, ಐಪಿಎಲ್ 15 ಆರಂಭಗೊಳ್ಳುವ ಒಂದು ದಿನದ ಮುಂಚೆ ಧೋನಿ ನಾಯಕತ್ವ ತೊರೆದರು, ನಂತರ ರವೀಂದ್ರಾ ಜಾಡೇಜಾಗೆ ತಂಡದ ಹೊಣೆಯನ್ನು ಹೊರಿಸಲಾಗಿತ್ತಾದರೂ ಮಧ್ಯಂತರದಲ್ಲಿ ಜಡೇಜಾರ ನಾಯಕನ ಹೊಣೆಯನ್ನು ಧೋನಿಗೆ ವಹಿಸಲಾಯಿತು.
ನಂತರ ಸ್ಥಾನದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್, ಶ್ರೇಯಾಸ್ ಅಯ್ಯರ್ ಸಾರಥ್ಯದ ಕೆಕೆಆರ್ ಹಾಗೂ ಈ ಬಾರಿಯ ರನ್ನರ್ ಅಪ್ ಆದ ರಾಜಸ್ಥಾನ್ ರಾಯಲ್ಸ್ ತಂಡದ ಕುರಿತು ಹೆಚ್ಚು ಚರ್ಚೆಯಾಗಿದೆ.
ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಕೂಡ ಆಟಗಾರರ ಸಾಲಿನಲ್ಲಿ ಹೆಚ್ಚಾಗಿ ಚರ್ಚೆಯಾದ ಆಟಗಾರರ ಸಾಲಿನಲ್ಲಿ ವಿರಾಟ್ ಕೊಹ್ಲಿ ನಿಲ್ಲುತ್ತಾರೆ, ನಂತರದ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ರವೀಂದ್ರ ಜಾಡೇಜಾ, ಡುಪ್ಲೆ ಸಿಸ್ ನಿಲ್ಲುತ್ತಾರೆ.
ಇನ್ನು ಹ್ಯಾಸ್ ಟ್ಯಾಗ್‍ನಲ್ಲೂ ಕೂಡ ಆರ್‍ಸಿಬಿಯ ಸ್ಲೋಗನ್ ಆದ #PLAY BOLD ಈ ಹೆಚ್ಚು ಜನಪ್ರಿಯತೆ ಗಳಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್‍ನ #WHISTLE PODU, #YELLOW LOVE, #WEARECHALLENGERS ಎಂಬ ಪದಗಳು ಹೆಚ್ಚಾಗಿ ಬಳಕೆಯಾಗಿದೆ.
2022ರ ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ತಂಡವು ಸಂಜು ಸಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‍ಗಳಿಂದ ಜಯಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.