ಜಗನಡೆಯಲಿ ಬುದ್ಧನಕಡೆ ವಿನೂತನ ಕಾರ್ಯಕ್ರಮ ಗಾಯಕ ಲಕ್ಷ್ಮಿರಾಮ್ ಸಾರಥ್ಯದಲ್ಲಿ

ಮೈಸೂರಿನ ತನುಮನ ಸಂಸ್ಥೆ ಇದೆ ತಿಂಗಳ 12 ನೇ ತಾರೀಕು ಶುಕ್ರವಾರ ಹುಣ್ಣಿಮೆ ಪ್ರಯುಕ್ತ ಜಗನಡೆಯಲಿ ಬುದ್ಧನಕಡೆ ಕಾರ್ಯಕ್ರಮ ಆಯೋಜಿಸಿದೆ.
ಕಾರ್ಯಕ್ರಮ ದ ದಿವ್ಯ ಸಾನ್ನಿಧ್ಯ ವನ್ನ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಗಳು ವಹಿಸಲಿದ್ದು .ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ರವರು ನೆರವೇರಿಸ ಸಲಿದ್ದಾರೆ.ಮಾಜಿ ಮೇಯರ್ ಪುರುಷೋತ್ತಮ್ ಅಧ್ಯಕ್ಷ ತೆ ವಹಿಸಲಿದ್ದಾರೆ.
ಮುಖ್ಯ ಅತಿಥಿ ಗಳಾಗಿ.
ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಚಿಕ್ಕ ಜವರಪ್ಪ.ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಎಮ್.ಮಹದೇವಸ್ವಾಮಿ.ಪ್ರಾಧ್ಯಪಕಿ ಡಾ. ಮಂಗಳ.ಸಮಾಜ ಸೇವಕಿ ಉಮಾ ದ್ರಾವಿದಿಯನ್.ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್.ಬಿಸ್ಪಿ ಯ ಜೈಶಂಕರ್ ಶ್ಯಾಮ್.
ಪತ್ರಕರ್ತರಾದ ಸೊಮಯ್ಯ ಮಲೆಯೂರು ಆಗಮಿಸಲಿದ್ದಾರೆ.ನಂತರ ಲಕ್ಷ್ಮಿ ರಾಮ್, ಲಾಸ್ಯ,ಮಾದೆಶ್ ಚಿಕ್ಕ ನಂದಿ, ಗಣೇಶ್ ಮಲಾರ,ಕವಿಗಳಾದ ಕೆ.ಸೊಮಯ್ಯ, ಡಾ. ಕೆ.ಪಿ.ಮಹಾದೇವಯ್ಯ, ಡಾ. ಎಸ್ ಮಂಗಳ ಮೂರ್ತಿ,ಡಾ ಚಂದ್ರಗುಪ್ತ, ಹಾರೋಹಳ್ಳಿ ರವೀಂದ್ರರು ಗೀತೆಗಳನ್ನ ಹಾಡಲಿದ್ದಾರೆ.
ಇವರಿಗೆ ಕೀಬೋರ್ಡ್ ನಲ್ಲಿ ಡಿ ಸಿ ಶಿವಕುಮಾರ್ ,ತಬಲಾ ಮಹೇಂದ್ರ ವರ್ಮಾ, ರಿದಮ್ ಪ್ಯಾಡ್ ಕಿರಣ್, ವಾದ್ಯ ಸಹಕಾರ ನೀಡಲಿದ್ದಾರೆ.ಎಂದು ಕಾರ್ಯಕ್ರಮ ಸಂಯೋಜಕ ಡಿ ಸಿ ಶಿವಕುಮಾರ್ ತಿಳಿಸಿದ್ದಾರೆ.