
ಭೂಗತ ಪಾದಕಿ ದಾವೂದ್ ಇಬ್ರಾಹಿಂ ನಿಯಂತ್ರಿತ ಅಪರಾಧ. ಅಕ್ರಮ ಚಟುವಟಿಕೆಗಳು ಹಾಗು ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಿದ ಆರೋಪದ ಮೇಲೆ ಮುಂಬೈ ಪಶ್ಚಿಮ ಉಪನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾರ್ಯಚರಣೆ ನಡೆಸಿ ಛೋಟಾ ಶಕೀಲ್‍ನ ಇಬ್ಬರು ಸಹಚರರನ್ನು ಬಂಧಿಸಿದೆ.ಆರೋಪಿಗಳನ್ನು ಆರಿಫ್ ಅಬೂಬಕರ್ ಶೇಖ್ (59) ಮತ್ತು ಶಬ್ಬೀರ್ ಅಬೂಬಕರ ಶೇಖ್ (51) ಎಂದು ಗುರುತಿಸಲಾಗಿದೆ. ದಾವೂದ್ ಇಬ್ರಾಹಿಂನ ಸಿಂಡಿಕೇಟ್ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಎನ್ಐಎ ತಂಡವು ಕಳೆದ ರಾತ್ರಿಇಬ್ಬರನ್ನೂ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಬ್ಬರೂ ದರೋಡೆಕೋರ ಛೋಟಾ ಶಕೀಲ್‍ನೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಮತ್ತು ಇಬ್ರಾಹಿಂ ನಡೆಸುತ್ತಿದ್ದ ದಂಧೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮುಂಬೈ ಮತ್ತು ಥಾಣೆಯ ಅನೇಕ ಸ್ಥಳಗಳಲ್ಲಿ ಇತ್ತೀಚೆಗೆ ಎನ್ಐಎ ನಡೆಸಿದ ದಾಳಿಗಳಲ್ಲಿ, ಎನ್ಐಎ ಅನೇಕ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.ಡಿ-ಕಂಪನಿ (ದಾವೂದ್ ಇಬ್ರಾಹಿಂನ ಅಪರಾಧ ಸಿಂಡಿಕೇಟ) ಯೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಆರಿಫ್ ಮತ್ತು ಶಬ್ಬೀರ್ ಅವರನ್ನು ಬಂಧಿಸಲಾಗಿದೆ. ಅವರ ವಿಚಾರಣೆಯ ಸಮಯದಲ್ಲಿ, ಆರಿಫ್ ಮತ್ತು ಶಬ್ಬೀರ್ ಛೋಟಾ ಶಕೀಲ್‍ನೊಂದಿಗೆ ಕೆಲವು ವಹಿವಾಟುಗಳನ್ನು ನಡೆಸಿದ್ದರು ಎಂದು ಎನ್ಐಎ ತಂಡವು ಕಂಡುಹಿಡಿದಿದೆ.