ಬೆಂಗಳೂರುರಾಜಕೀಯರಾಜ್ಯ

ಚುನಾವಣೆ ಮೂಡ್​ಗೆ ಜಾರಿದ ರಾಜಕೀಯ ಪಕ್ಷಗಳು ; 3 ಪಾರ್ಟಿಯಿಂದ ಯಾತ್ರೆ ಪಟ್ಟಿ ಸಿದ್ದ

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ, ರಾಜಕೀಯ ಪಕ್ಷಗಳು ಗರಿಗೆದರಿ ನಿಂತಿವೆ. ಏಳು ತಿಂಗಳ ಮೊದಲೇ ಚುನಾವಣೆ ಪ್ರಚಾರಕ್ಕೆ ಇಳಿದಿವೆ. ಪ್ರಚಾರದ ಮೂಲಕ ಮತದಾರರನ್ನ ಸೆಳೆಯೋಕೆ ಮುಂದಾಗಿವೆ.

ಸಾಲು ಸಾಲು ಸಭೆಗಳು, ಪಾದಯಾತ್ರೆ, ರಥಯಾತ್ರೆಗಳನ್ನ ಹಮ್ಮಿಕೊಳ್ಳೋಕೆ ಹಣಿಯಾಗುತ್ತಿದ್ದಾರೆ, ಬೃಹತ್ ಸಮಾವೇಶಗಳನ್ನು ಸಹ ಆಯೋಜಿಸುತ್ತಿದ್ದಾರೆ.

ಪ್ರಸ್ತುತ ಲೋಕಸಭೆ ಹಾಗೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನ‌ ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ನಡೆಸಿದೆ.

ರಾಜ್ಯದಲ್ಲೂ ರಾಹುಲ್ ರಥಯಾತ್ರೆ ಬಹಳ ಭರ್ಜರಿಯಾಗಿಯೇ ಸಾಗಿದೆ. ಅಭೂತಪೂರ್ವ ಜನಬೆಂಬಲವೂ ವ್ಯಕ್ಯವಾಗ್ತಿದೆ. ಇದರ ಲಾಭ ವಿಧಾನಸಭಾ ಚುನಾವಣೆಯ ಮೇಲೂ ಆಗಲಿದೆ ಎಂಬ ನಿರೀಕ್ಷೆಯನ್ನ ಕೈ ನಾಯಕರು ಇಟ್ಕೊಂಡಿದ್ದಾರೆ.

ಇದ್ರ ನಡುವೆ ನವೆಂಬರ್ ಮೊದಲ ವಾರದಲ್ಲೇ ಸಿದ್ರಾಮಯ್ಯ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ರಥಯಾತ್ರೆಯನ್ನ ಮಾಡೋಕೆ ಹೊರಟಿದ್ದರು.

ಅದಕ್ಕೆ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದ್ರೆ, ಒಬ್ಬರೇ ಮಾಡಿದ್ರೆ ತಪ್ಪು ಅಭಿಪ್ರಾಯ ಹೋಗುತ್ತೆ. ಡಿಕೆಶಿ ಜೊತೆ ಸೇರಿ ಎಲ್ಲಾ ನಾಯಕರು ಪ್ರವಾಸ ಮಾಡಿ ಅನ್ನೋ ಸಲಹೆಯನ್ನ ನೀಡಲಾಗಿದೆ.

ಹೀಗಾಗಿ ನವೆಂಬರ್ ಮೊದಲ ವಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ, ಸುರ್ಜೇವಾಲ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಲಾಗಿದೆ. ಈ ರಥಯಾತ್ರೆಯ ಮೂಲಕ ಮತ್ತೆ ಮತದಾರರ ವಿಶ್ವಾಸಗಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಸರತ್ತು ಶುರುಮಾಡಿದೆ.

ಕಾಂಗ್ರೆಸ್ ಜೋಡೋಗೆ ಬೆದರಿದ ಬಿಜೆಪಿ!ಭಾರತ್ ಜೋಡೋ ಪಾದಯಾತ್ರೆಯ ಎಫೆಕ್ಟ್ ರಾಜ್ಯ ಬಿಜೆಪಿಗೆ ಆತಂಕ ತಂದಿಟ್ಟಿದೆ. ಮೇಲ್ನೋಟಕ್ಕೆ ಅದ್ರಿಂದ ಯಾವುದೇ ತೊಂದರೆಯಿಲ್ಲ ಅಂತ ಬಿಜೆಪಿ ನಾಯಕರು ಹೇಳಿದ್ರೂ ಒಳಗೊಳಗೆ ಆತಂಕ ಇದ್ದೇ ಇದೆ. ಮತ್ತೊಂದು ಸರ್ಕಾರದ ವಿರುದ್ಧ ನಿರಂತರ ಆರೋಪಗಳ ಸರಮಾಲೆ.

ಪಿಎಸ್ ಐನೇಮಕಾತಿ,ಉಪನ್ಯಾಸಕರ ನೇಮಕಾತಿ,ಕೆಪಿಎಸ್ಸಿ ಹಗರಣ, ಸಹಕಾರ ಸಂಘದ ನೇಮಕ ಅವ್ಯವಹಾರ, ಬಿಟ್ ಕಾಯಿನ್,40% ಕಮೀಷನ್ ಆರೋಪ ಒಂದೇ ಎರಡೇ ಹಲವು ಆರೋಪಗಳು ಸರ್ಕಾರದ ಮೇಲಿವೆ. ಸೋ ಈ ಆರೋಪಗಳಿಂದ ಹೊರವರಬೇಕು.

ಜನರ ಮನಸ್ಸನ್ನ ಡೈವರ್ಟ್ ಮಾಡಬೇಕು. ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಪ್ರವಾಸ ಹಮ್ಮಿಕೊಂಡಿದೆ.

ನಾಳೆಯಿಂದ ಮೂರು ದಿನಗಳ ಕಾಲ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ವೈ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡ್ತಿದ್ದಾರೆ.

ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರಗಿ, ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸ್ತಿದ್ದಾರೆ. ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಇದೀಗ ತಾವು ತಂದಿರುವ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವನ್ನ ಮುಂದಿಟ್ಟುಕೊಂಡು ಆಸಮುದಾಯಗಳ ಮತಗಳನ್ನ ಸೆಳೆಯೋಕೆ ಹೊರಟಿದ್ದಾರೆ.

ತದನಂತರ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿ.ಎಲ್.ಸಂತೋಷ್ ಅವರ ಟೀಂ ಕೂಡ ರಾಜ್ಯ ಪ್ರವಾಸ ಮಾಡಲಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯಕರ್ತರ ಸರಣಿ ಸಭೆಗಳನ್ನ ನಡೆಸಲಿದೆ.

ಜೆಡಿಎಸ್ ನಿಂದಲೂ ಶುರುವಾಗಿದೆ ಪಂಚರತ್ನ ಕಾರ್ಯಕ್ರಮನೀರಿನ ವಿಚಾರ ಮುಂದಿಟ್ಟುಕೊಂಡು ಜಿಲ್ಲಾ ಪ್ರವಾಸಇನ್ನು ಜೆಡಿಎಸ್ ನಾಯಕರು‌ಕೂಡ ಹಿಂದೆ ಬಿದ್ದಿಲ್ಲ.

ಕಾಂಗ್ರೆಸ್, ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ನಾಲ್ಕೈದು ತಿಂಗಳಿಂದ್ಲೇ ಕಾರ್ಯಕ್ರಮಗಳನ್ನ ಮಾಡ್ತಿದ್ದಾರೆ. ಪಂಚರತ್ನ ಯೋಜನೆಗಳನ್ನ ಮುಂದಿಟ್ಟುಕೊಂಡು ಜನರ ವಿಸ್ವಾಸಗಳಿಸೋಕೆ ಹೊರಟಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತಿದೆ. ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲೂ ಅದ್ಧೂರಿ ಸಮಾವೇಶಗಳನ್ನ ನಡೆಸೋಕೆ ಮುಂದಾಗಿದೆ.

ಮೂರು ಪಕ್ಷಗಳು‌ ಚುನಾವಣೆಯ ತಾಲೀಮಿಗಿಳಿದಿವೆ. ಕಾಂಗ್ರೆಸ್ ಭಾರತ್ ಜೋಡೊ ತದನಂತೆ ನವೆಂಬರ್ ನಲ್ಲಿ ರಥಯಾತ್ರೆ ಹಮ್ಮಿಕೊಂಡಿದೆ. ಬಿಜೆಪಿ ನಾಳೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಯಕ್ರಮಗಳನ್ನ ನಡೆಸ್ತಿದೆ. ಮತ್ತೊಂದು ಕಡೆ ಜೆಡಿಎಸ್ ಪಂಚರತ್ನ ಕಾರ್ಯಕ್ರಮ ಪ್ರಚಾರ ನಡೆಸ್ತಿದೆ.

ಮೂರು ಪಕ್ಷಗಳು ಮುಂಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡೇ ಸಾಲು ಸಾಲು ರಥಯಾತ್ರೆಗಳು, ಪಾದಯಾತ್ರೆಗಳು, ಸರಣಿ ಸಮಾವೇಶಗಳು, ಜಾತಿಗೊಂದು ಸಮುದಾಯಕ್ಕೊಂದು ಸಭೆಗಳನ್ನ ಆಯೋಜಿಸುತ್ತಿವೆ. ಈ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿವೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button