ಚೀನಾದಲ್ಲಿ ಸರಣಿ ಅಪಘಾತ, 17 ಮಂದಿ ಸಾವು

ದಕ್ಷಿಣ ಚೀನಾದಲ್ಲಿ ಇಂದು ಮುಂಜಾನೆ ಟ್ರಾಫಿಕ್ ಸಿಗ್ನಲ್ ಬಳಿ ವಾಹನಗಳು ಪರಸ್ಪರ ಗುದ್ದಿಕೊಂಡು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಮತ್ತು 22 ಜನರು ಗಾಯಗೊಂಡಿದ್ದಾರೆ.ಸ್ಥಳೀಯ ಸಂಚಾರ ನಿರ್ವಹಣಾ ದಳದ ಪ್ರಕಾರ, ಜಿಯಾಂಗ್ಕ್ಸಿ ಪ್ರಾಂತ್ಯದ ನಾನ್ಚಾಂಗ್ ನಗರದ ಹೊರಗೆ ಈ ಅಪಘಾತ ಸಂಭವಿಸಿದೆ.
ಎಷ್ಟು ವಾಹನಗಳು ಅಪಘಾತದಲ್ಲಿ ಜಖಂಗೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಲಾಗಿದೆ.ಸಾಮಾನ್ಯವಾಗಿ ಅಸರ್ಮಪಕ ನಿರ್ವಹಣೆ ಅಥವಾ ಕಿಕಿರಿದ ವಾಹನಗಳಿಂದ ಉಂಟಾಗುವ ಟ್ರಾಪಿಕ್ ಜಮ್ ನಿಂದ ಇಂತಹ ಅಪಘಾತಗಳು ಸಾಮಾನ್ಯವಾಗಿವೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಗಿಯಾದ ನಿಯಮಗಳು ಕಡಿಮೆಯಾಗಿತ್ತು ಎಂದು ಹೇಳಿದ್ದಾರೆ.
ಭಾನುವರದ ರಜೆಯ ಸಮಯದಲ್ಲಿ ಪ್ರವಾಸಿ ತಾಣಕ್ಕೆ ತೆರಳಲು ಚೀನೀಯರು ಬಯಸುತ್ತಾರೆ ,ಇದಲ್ಲದೆ ಸಾವಿರಾರು ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹಿಂದಿರುಗಿ ಕುಟುಂಬ ಕೂಟಗಳಲ್ಲಿ ಭಾಗಿಯಾಗುತ್ತಾರೆ.
ಕೊವಿಡ್ ನಿರ್ಬಂಧಗಳ ಸಡಿಲಿಕೆ ಮತ್ತು ಜನವರಿ 22 ರಂದು ಪ್ರಾರಂಭವಾಗುವ ಹಬ್ಬದ ಋತುವಿನಲ್ಲಿ ಹೆಚ್ಚಿನ ಪ್ರವಾಸಗಳ ಸಂಖ್ಯೆಯು ಈ ವರ್ಷ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.