
ಕೊರೊನಾ ನಾಲ್ಕನೆ ಅಲೆ ಅಬ್ಬರದ ಹಿನ್ನೆಲೆಯಲ್ಲಿ ತತ್ತರಿಸಿರುವ ಚೀನಾ ಈ ಬಾರಿ ಕಾರ್ಮಿಕ ದಿನಾಚರಣೆ ಆಚರಿಸದಿರಲು ನಿರ್ಧರಿಸಿದೆ. 73 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಕಾರ್ಮಿಕ ದಿನಾಚರಣೆ ಆಚರಿಸುತ್ತಿಲ್ಲ.
ರಾಜಧಾನಿ ಬೀಜಿಂಗ್ ಸೇರಿದಂತೆ ಪ್ರಮುಖ ವಾಣಿಜ್ಯ ನಗರ ಸಾಂಘೈ ಸೇರಿದಂತೆ ಹಲವೆಡೆ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದು, ದೇಶಾದ್ಯಂತ ಸುಮಾರು 26 ನಗರಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಚೀನಾದಲ್ಲಿ ಪ್ರತಿ ದಿನ ಸರಾಸರಿ 7 ಸಾವಿರ ಮಂದಿಗೆ ಕೊರೊನಾ ಪತ್ತೆಯಾಗುತ್ತಿದ್ದು, ಜನ ಸಂದಣಿ ಹೆಚ್ಚಿರುವ ವಸತಿ ಪ್ರದೇಶಗಳಲ್ಲಿ ಕಡ್ಡಾಯವಾಗಿ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೆಲವು ನಗರಗಳಲ್ಲಿ ಸುಮಾರು 15 ದಿನಗಳಿಂದ ಜನರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಆಹಾರ, ಔಷ ಖರೀದಿಸಲು ಸಹ ಹೊರ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಕೆಲವೆಡೆ ಜನರನ್ನು ಹಿಂಸಿಸಲಾಗುತ್ತಿದ್ದು, ನಮ್ಮನ್ನು ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚುತ್ತಿರುವ ದೃಶ್ಯಗಳು ಕೂಡ ಕಂಡು ಬರುತ್ತಿವೆ. ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುತ್ತಿರುವ ಜನರ ಕೂಗುತ್ತಾ, ಅರಚುತ್ತಾ ಜೀವ ಉಳಿಯಲು ಆಹಾರ ಕೊಡಿ ಎಂದು ಬೇಡುತ್ತಿದ್ದಾರೆ.