ಅಪರಾಧಬೆಂಗಳೂರುರಾಜ್ಯ

ಚಿನ್ನಾಭರಣ ದೋಚಿದ್ದ ಅಣ್ಣ ತಮ್ಮ ಸೇರಿ ಮೂವರು ಅಂದರ್‌: ಕಳ್ಳತನಕ್ಕೆ ಪೋಷಕರು ಸಾಥ್‌

ಬೆಂಗಳೂರು: ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ತಲೆ ನೋವಾಗಿದ್ದ ಇಬ್ಬರು ಕಳ್ಳ ಸಹೋದರರು ಸೇರಿ ಮೂವರು ಆರೋಪಿಗಳನ್ನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

ಗುಣಶೇಖರ್ ಅಲಿಯಾಸ್ ಕೊರಂಗು, ಅಜಿತ್ ಹಾಗೂ ಮುತ್ತುಕುಮಾರ್‌ ಬಂಧಿತರು. ಆರೋಪಿಗಳು ಬೀಗ ಹಾಕಿದ ಮನೆಗಳನ್ನ ದೂರದಿಂದಲೇ ಅನೇಕ ದಿನಗಳ ಕಾಲ ವಾಚ್‌ ಮಾಡುತ್ತಿದ್ದರು.

ನಂತರ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದರು. ಕದ್ದ ವಸ್ತಗಳನ್ನು ಕಡಿಮೆ ಬೆಲೆಗೆ ಮಾರಿ ಐಷಾರಾಮಿ ಜೀವನ ನಡೆಸಲು ಹಾಗೂ ಮಾದಕ ವಸ್ತು ಸೇವೆನೆಗೆ ಹಣ ವ್ಯಯಿಸುತ್ತಿದ್ದರು.

ಇನ್ನೂ ಆರೋಪಿ ಗುಣಶೇಖರ್ ಬಾಲ್ಯದಿಂದಲೇ ಕಳ್ಳತನಕ್ಕೆ ಮಾಡುವ ಚಾಳಿಗೆ ಇಳಿದಿದ್ದ. ತಮಿಳುನಾಡಿನಲ್ಲಿ ಕೋಳಿ ಜೂಜಾಡಲು ಕಳ್ಳತನದ ಹಣ ಬಳಕೆ ಮಾಡುತ್ತಿದ್ದ.

ಹೀಗೆ ಈ ಕಳ್ಳ ಸಹೋದದರು ಸಿಲಿಕಾನ್‌ ಸಿಟಿಯ ಹೆಣ್ಣೂರು, ಕೊತ್ತನೂರಿನಲ್ಲಿ ಮನೆಯ ಬಾಲ್ಕನಿ ಸ್ಲೈಡಿಂಗ್ ಡೋರ್ ಬ್ರೇಕ್ ಮಾಡಿ ಚಿನ್ನಾಭರಣ ದೋಚಿದ್ದರು.

ಪೊಲೀಸರು ಮೊಬೈಲ್‌ ನಂಬರ್‌ ಟ್ರ್ಯಾಪ್‌ ಮಾಡಬಾರದು ಅಂತಾ ವಾಟ್ಸ್‌ ಆಪ್‌ ಕರೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಕದ್ದ ಚಿನ್ನಾಭರಣವನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದರು.

ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬೇಲ್‌ ಪಡೆದು ಬಂದು ಮತ್ತದೇ ಪ್ರವೃತ್ತಿ ಮುಂದುವರೆಸಿದ್ದರು. ಸದ್ಯ ಹೆಣ್ಣೂರು ಪೊಲೀಸರು ಫಿಂಗರ್‌ ಪ್ರಿಂಟ್‌ ಆಧಾರದಲ್ಲಿ ಕಳ್ಳರನ್ನು ಬಂಧಿಸಿ 49 ಲಕ್ಷ ಮೌಲ್ಯದ 1.1 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಗಳ ಮೇಲೆ ಒಟ್ಟು ಹದಿನಾಲ್ಕು ಪ್ರಕರಣಗಳಿರುವ ಅಂಶ ಬೆಳಕಿಗೆ ಬಂದಿದ್ದು, ಮಕ್ಕಳ ಕಳ್ಳತನ ವೃತ್ತಿಗೆ ಪೋಷಕರ ಸಾಥ್ ಕೊಡುತ್ತಿದ್ದರು ಎಂಬುದು ಸಹ ತನಿಖೆಯಲ್ಲಿ ಗೊತ್ತಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button