
ಕಳಸ ತಾಲೂಕಿನ ತೋಟದೂರು ಸಮೀಪದ ಕುಳಿಹಿತ್ಲು ಗ್ರಾಮದ ರೈತ ಸೋಮಶೇಖರ್ ಕಾಡುಕೋಣ ದಾಳಿಗೆ ಬಲಿಯಾಗಿದ್ದಾರೆ. ಕುಳಿಹಿತ್ಲು ಗ್ರಾಮದಲ್ಲಿ ಇರುವ ಅರ್ಧ ಎಕರೆ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ.
ಅಡಿಕೆ ತೋಟದಲ್ಲಿ ಕೆಲಸ ಮಾಡುವಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ಸೋಮಶೇಖರ್ ತಕ್ಷಣ ಓಡಿಹೋಗಲು ಯತ್ನಿಸಿದರೂ ಕಾಡುಕೋಣ ಓಡಿ ಹೋಗಿ ತಿವಿದು ಕೊಂದಿದೆ. ಸೋಮಶೇಖರ್ ಕೂಗುತ್ತಾ ಓಡುತ್ತಿದ್ದಂತೆ ಸಹೋದರ ಬಂದಿದ್ದಾರೆ.
ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸುವಷ್ಟರಲ್ಲಿ ಪ್ರಾಣ ಹೋಗಿದೆ.ತೋಟದೂರು ಭಾಗದಲ್ಲಿ ಕಾಡಾನೆ ಹಾವಳಿ ಇದೆ. ಕಾಡುಕೋಣ ದಾಳಿ ಮಾಡಿರೋದು ಈ ಭಾಗದ ಜನರಿಗೆ ಮತ್ತಷ್ಟು ಭಯ ತರಿಸಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರ್ತಿದ್ದಂತೆ ತಾಳ್ಮೆ ಕಳೆದುಕೊಂಡಿದ್ದ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪರಿಸ್ಥಿತಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.