ರಾಜ್ಯ
*ಚಾಲಕರ_ಗಮನಕ್ಕೆ ಒಳ್ಳೆಯ_ಮಾಹಿತಿ*

ರಾತ್ರಿಯಲ್ಲಿ ದೂರ ಪ್ರಯಾಣ ಮಾಡುವವರು ಪಾಲಿಸಬೇಕಾದ ಕೆಲವು ಅತಿ ಸೂಕ್ಷ್ಮ ವಿಷಯಗಳು.
- ಪ್ರತಿ 150 ಕಿಲೋಮೀಟರ್ ಗಳಿಗೆ ಒಮ್ಮೆ ಸಾಧ್ಯವಾದರೆ ಚಾಲನೆಯನ್ನು ಮತ್ತೊಬ್ಬರಿಗೆ ಬದಲಾಯಿಸಿ.
- ಸಹಪ್ರಯಾಣಿಕರು ಚಾಲಕನೊಂದಿಗೆ ನಿರಂತರ ಮಾತನಾಡುತ್ತ ಇರಿ. ಯಾವುದಾದರೂ ವಿಷಯಗಳನ್ನು ಎತ್ತಿಕೊಂಡು ಚರ್ಚೆ ಮಾಡಿ ಹಾಡು ಹೇಳುವುದು ಚಪ್ಪಾಳೆ ತಟ್ಟುವುದು ಚಾಲಕನನ್ನು ಮತ್ತೆ ಮತ್ತೆ ಮಾತನಾಡಿಸುವುದು ಈ ರೀತಿ ಮಾಡುವುದರಿಂದ ಚಾಲಕ ಯಾವಾಗಲೂ ಎಚ್ಚರವಾಗಿರುತ್ತಾನೆ ನಿದ್ರೆಗೆ ಜಾರುವ ಸಾಧ್ಯತೆಗಳು ಕಡಿಮೆ.
- ಕುಟುಂಬ ಸಮೇತ ಅಥವಾ ಗೆಳೆಯರೊಂದಿಗೆ ರಾತ್ರಿ ದೂರ ಪ್ರಯಾಣ ಮಾಡುವವರು ಅಂದರೆ ಸಹಪ್ರಯಾಣಿಕರು ಎಲ್ಲರೂ ಒಟ್ಟಿಗೆ ನಿದ್ರೆ ಹೋಗಬಾರದು. ಒಂದಿಬ್ಬರು ನಿದ್ರೆ ಮಾಡಿದರೆ ಕನಿಷ್ಠ ಒಬ್ಬ ಸಹ ಪ್ರಯಾಣಿಕ ಎಚ್ಚರದಿಂದಿರಬೇಕು. ಅವನು ಚಾಲಕನ ಜೊತೆ ವಿಚಾರವಿನಿಮಯ ಮಾತುಕತೆ ಮಾಡುತ್ತಿರಬೇಕು.
- ಚಾಲಕನಿಗೆ ನಿದ್ದೆ ಬಂದರೆ ಸ್ವಲ್ಪ ದೂರ ಹೋಗಿ ನಿಲ್ಲಿಸುವ ಅಥವಾ ಇದು ನಿಲ್ಲಿಸಲು ಯೋಗ್ಯವಾದ ಸ್ಥಳವಲ್ಲ, ಸುರಕ್ಷಿತ ಸ್ಥಳವಲ್ಲ. ಹತ್ತು ಕಿಲೋಮೀಟರ್ ಮುಂದೆ ಹೋದರೆ ಪೆಟ್ರೋಲ್ ಪಂಪ್ ಇದೆ ಬೆಳಕು ಇರುವ ಪ್ರದೇಶ ಇದೆ. ಅಲ್ಲಿ ತಲುಪಿ ಅಲ್ಲಿ ವಿಶ್ರಾಂತಿ ಪಡೆಯುವ ಎನ್ನುವ ಹುಚ್ಚು ನಿರ್ಧಾರ ತೆಗೆದುಕೊಳ್ಳಬಾರದು ಇದು ತುಂಬಾ ಅಪಾಯಕಾರಿ. ಎಲ್ಲಿ ನಿದ್ರೆ ಬರುತ್ತದೆಯೋ ಅಲ್ಲಿಯೇ ಪಕ್ಕದಲ್ಲಿ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆದು ಮುಂದುವರಿಯುವುದು ಒಳಿತು.
- ಗುರಿಯನ್ನು ಮುಟ್ಟಲು ಇನ್ನೇನು 5 ಕಿಲೋಮೀಟರ್ ಇರುವಾಗ ನಿದ್ದೆ ಬಂದರು ವಿಶ್ರಾಂತಿ ಪಡೆದು ಮುಂದುವರಿಯುವುದು ಒಳಿತು.
- ಮುಖ ತೊಳೆಯುವುದರಿಂದ ಬಿಸಿ,ಪಾನೀಯ-ಸೇವಿಸುವುದರಿಂದ ಸೀನುವುದರಿಂದ ನಿದ್ದೆಯು ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ ಎನ್ನುವುದು ಅರಿತುಕೊಳ್ಳಿ.
- ನಿದ್ದೆ ಬರುವ ಲಕ್ಷಣಗಳು ಕಂಡುಬಂದರೆ ಸೀಟಿಗೆ ಒರಗಿ ಕುಳಿತುಕೊಳ್ಳದೆ, ನೇರವಾಗಿ ಕುಳಿತುಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿ ವಿಶ್ರಾಂತಿ ಪಡೆಯಿರಿ. ಸೀಟಿಗೆ ಒರಗಿ ಆರಾಮವಾಗಿ ಕುಳಿತುಕೊಳ್ಳುವುದರಿಂದ ನಿದ್ದೆ ಸುಲಭವಾಗಿ ಬರುತ್ತದೆ, ಎಚ್ಚರವಿರಲಿ.
- ಮುಂದಿನಿಂದ ಬರುವ ವಾಹನಕ್ಕೆ ಲೋ ಭೀಮ್/ಹೈ ಭೀಮ್ ಸಮಯಕ್ಕೆ ತಕ್ಕಂತೆ ಕೊಟ್ಟು ಸಹಕರಿಸಿ. ಮುಂದಿನಿಂದ ಬರುವ ವಾಹನದ ಬೆಳಕನ್ನು ನೇರವಾಗಿ ನೋಡದೆ ರಸ್ತೆಯನ್ನು ನೋಡುವುದರಿಂದ ತಮ್ಮ ಕಣ್ಣುಗಳು ಆಯಾಸವಾಗುವುದನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು.
- ನೀವು ಎಷ್ಟೇ ಪರಿಣಿತ ಚತುರ ಚಾಲಕನಾಗಿದ್ದರೂ ಸರಿ ನಿದ್ದೆ ಬಂದರೆ ಸಂಕೋಚವಿಲ್ಲದೆ ತಮ್ಮ ಸಹಪ್ರಯಾಣಿಕರಿಗೆ ತಿಳಿಸಿ ವಿಶ್ರಾಂತಿ ಪಡೆಯಿರಿ.
- ವಾಹನ ಚಾಲನೆ ಮಾಡುವಾಗತಮ್ಮ ಪ್ರೀತಿಪಾತ್ರರು ಮನೆಯಲ್ಲಿ ತಮಗೋಸ್ಕರ ಕಾಯುತ್ತಿದ್ದಾರೆ ಎನ್ನುವುದು ಮರೆಯದಿರಿ.
- ಈ ಎಲ್ಲ ಸಲಹೆಗಳು ನಿಮಗೆ ತಿಳಿದಿರುವುದೇ ಆದರೂ ತಿಳಿಯದವರಿಗೆ ರವಾನೆ ಮಾಡಿ ಮತ್ತೆ ಮತ್ತೆ ಎಚ್ಚರಿಸಿ.