ಚಾಮರಾಜಪೇಟೆ ಮೈದಾನದ ಗಣೇಶೋತ್ಸವಕ್ಕೆ ಚಂದಾ ವಸೂಲಿ

ಚಾಮರಾಜಪೇಟೆ ಮೈದಾನ ಗಣೇಶೋತ್ಸವ ಆಚರಣೆಗೂ ಮುನ್ನವೇ ಕೆಲವರು ಚಂದಾ ವಸೂಲಿಗೆ ಮುಂದಾಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಚಾಮರಾಜಪೇಟೆ ನಾಗರಿಕ ಒಕ್ಕೂಟ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಸರ್ಕಾರದ ಅನುಮತಿ ಕೋರಿದೆ.
ಸರ್ಕಾರ ಇನ್ನು ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಇದರ ಮಧ್ಯೆ ಕೆಲವರು ಚಂದಾ ವಸೂಲಿಗೆ ಇಳಿದಿದ್ದಾರೆ.ಚಾಮರಾಜಪೇಟೆ ನಾಗರಿಕ ಒಕ್ಕೂಟದ ಹೆಸರಿನಲ್ಲಿ ಚಂದಾ ವಸೂಲಿ ಮಾಡುತ್ತಿರುವುದು ಗಮನಾರ್ಹವಾಗಿದ್ದು, ಕೆಲವರು ಬಿಲ್ ಬುಕ್ ಪ್ರಿಂಟ್ ಹಾಕಿಸಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಚಂದಾ ವಸೂಲಿಗಿಳಿದಿದ್ದಾರೆ.
ನಾವು ಯಾವುದೇ ರೀತಿಯ ಚಂದಾ ವಸೂಲಿ ಮಾಡುತ್ತಿಲ್ಲ. ನಮ್ಮ ಒಕ್ಕೂಟದಲ್ಲಿ ಈ ಹಿಂದೆ ಇದ್ದ ಕೆಲವರು ಚಂದಾ ವಸೂಲಿ ಮಾಡುತ್ತಿದ್ದಾರೆ.
ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ನಾಗರಿಕ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಸ್ಪಷ್ಟಪಡಿಸಿದ್ದಾರೆ.
ಈ ರೀತಿ ಚಂದಾ ವಸೂಲಿ ಮಾಡುತ್ತಿರೋದು ತಪ್ಪು, ನಮ್ಮ ಒಕ್ಕೂಟದ ಹೆಸರಲ್ಲಿ ಯಾರೇ ವಸೂಲಿಗೆ ಬಂದ್ರೆ ಸಾರ್ವಜನಿಕರು ಹಣ ನೀಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕೆಲ ಕಿಡಿಕೆಡಿಗಳು ಸಂಘದ ಹೆಸರು ಹಾಳು ಮಾಡಲು ಈ ರೀತಿ ವಸೂಲಿಗೆ ಇಳಿದ್ದಿದರೆ ಅಂತವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.