
ಹನೂರು: ಲಕ್ಷಾಂತರ ಭಕ್ತರ ಪರಮ ದೈವ ‘ಶ್ರೀಮಲೆ ಮಹದೇಶ್ವರ ಸ್ವಾಮಿ’ಯ ಹೆಸರಿನಲ್ಲಿ ಸೃಷ್ಟಿಸಿರುವ ಪೇಸ್‌ಬುಕ್ ಪೇಜ್‌ನಲ್ಲಿ ಅಶ್ಲೀಲ ವಿಡಿಯೋಗಳು ಅಪ್‌ಲೋಡ್ ಆಗುತ್ತಿದ್ದು, ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ.

ಕೊಳ್ಳೇಗಾಲದ ಸಂಜಯ್‌ಕುಮಾರ್ 2013ರಲ್ಲಿ ಕ್ರಿಯೇಟ್ ಮಾಡಿರುವ ಈ ಫೇಜ್‌ಬುಕ್ ಪೇಜ್ ಕ್ರಿಯೇಟ್ ಮಾಡಿದ್ದರು. ಈ ಪೇಜ್‌ಗೆ ಸುಮಾರು 17 ಸಾವಿರ ಅನುಯಾಯಿಗಳಿದ್ದಾರೆ. ಇದರಲ್ಲಿ ದೇವರ ಪೋಟೋಗಳು, ಪೂಜಾ ಕೈಂಕರ್ಯಗಳು ಸೇರಿದಂತೆ ಇತರ ಮಾಹಿತಿಗಳನ್ನು ಅಪ್‌ಲೋಡ ಮಾಡಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳ ಹಿಂದೆ ಈ ಪೇಜ್ ಅನ್ನು ಹ್ಯಾಕ್ ಮಾಡಲಾಗಿದೆ. ಸ್ಟೋರಿಗಳ ವಿಭಾಗದಲ್ಲಿ ಹುಡುಗಿಯರ ಅಶ್ಲೀಲ ಪೋಟೋ, ವಿಡಿಯೊಗಳನ್ನು ಹಾಕಲಾಗುತ್ತಿದೆ.
ಫೇಸ್‌ಬುಕ ಪೇಜ್ ಹ್ಯಾಕ್ ಆದ ಮರು ದಿನವೇ ಅಡ್ಮಿನ್ ಸಂಜಯ್‌ಕುಮಾರ್ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. 30 ಜನರಿಂದ ಈ ಪೇಜ್ ವಿರುದ್ಧ ರಿಪೋರ್ಟ್ ಮಾಡಿಸು ಎಂದು ಪೊಲೀಸರು ಸಂಜಯ್‌ಗೆ ಸಲಹೆ ನೀಡಿದ್ದಾರೆ. ಈವರೆಗೆ 5 ಜನರಿಂದ ಸಂಜಯ್ ರಿಪೋರ್ಟ್ ಮಾಡಿಸಿದ್ದಾರೆ. ಹಾಗಾಗಿ ಹ್ಯಾಕ್ ಆಗಿರುವ ಪೇಜ್ ಅನ್ನು ನಾಶ ಪಡಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ಜಾಲತಾಣದಲ್ಲೂ ಅಪಾರ ಭಕ್ತರು:
ಶ್ರೀಮಲೆ ಮಹದೇಶ್ವರ ಸ್ವಾಮಿಗಿರುವ ಅಪಾರ ಭಕ್ತರು ಸಾಮಾಜಿಕ ಜಾಲತಾಣಗಳಲ್ಲೂ ಅನುಸರಣೆ ಮಾಡುತ್ತಿದ್ದಾರೆ. ದೇವರು, ದೇವಸ್ಥಾನಕ್ಕೆ ಸಂಬಂಧಿಸಿದ ವಿಚಾರಗಳು ಜಾಲತಾಣಗಳಲ್ಲಿ ಪ್ರಕಟಗೊಂಡರೆ ಅವುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೆಚ್ಚುಗೆ, ಕಮೆಂಟ್‌ಗಳು ವ್ಯಕ್ತವಾಗುತ್ತವೆ. ವಾಟ್ಸಾಫ್ ಗ್ರೂಪ್‌ಗಳಲ್ಲಿ ಚರ್ಚೆಗಳನ್ನು ಮಾಡುವುದು, ವರ್ಷಕ್ಕೊಮ್ಮೆ ಎಲ್ಲರೂ ಒಗ್ಗೂಡಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ಬರುತ್ತಾರೆ.
77 ಮಲೆಯ ಮಾದಪ್ಪ, ಶ್ರೀಮಲೆ ಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ, ಶ್ರೀಮಲ್ಲಿಗೆ ಮನಸ್ಸಿನ ಮಹದೇಶ್ವರ ಸ್ವಾಮಿ, ಶ್ರೀಮಲೆ ಮಹದೇಶ್ವರ ಸ್ವಾಮಿ ಪುಣ್ಯಕ್ಷೇತ್ರ,77 ಬೆಟ್ಟದ ಒಡೆಯ ಉಘೇ ಉಘೇ ಮಹದೇಶ್ವರ, ಶ್ರೀವಜ್ರ ಮಲೆ ಮಹದೇಶ್ವರ ಸ್ವಾಮಿ, ಉಘೇ ಉಘೇ ಮಾದಪ್ಪ, ಶ್ರೀಮಲೆ ಮಹದೇಶ್ವರ, ಮುದ್ದು ಮಾದಪ್ಪನ ಗೆಳೆಯರ ಬಳಗ, ಚೆಲ್ಲಾಟಗಾರ ಮಾದಪ್ಪ, ಮಹದೇಶ್ವರ ಸ್ವಾಮಿ ಭಕ್ತ ವೃಂದ, ಸಪ್ತಗಿರಿ ಶ್ರೀಮಲೈ ಮಹದೇಶ್ವರ ಸ್ವಾಮಿ ಹಾಗೂ ಶ್ರೀಮಲೆ ಮಹದೇಶ್ವರ ಸ್ವಾಮಿಯ ಹೆಸರಿನಲ್ಲಿ ಫೇಸ್‌ಬುಕ್ ಪೇಜ್‌ಗಳು ಜನಪ್ರಿಯವಾಗಿವೆ.
ನಾನು ಕ್ರಿಯೇಟ್ ಮಾಡಿದ್ದ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದೆ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಕ್ರಮವಹಿಸಿಲ್ಲ. ಅದರಲ್ಲಿ ಅಶ್ಲೀಲ ಪೋಟೋ, ವಿಡಿಯೋಗಳು ಅಪ್‌ಲೋಡ್ ಆಗುತ್ತಿದ್ದು, ಹ್ಯಾಕ್ ಆಗಿರುವ ಬಗ್ಗೆ ತಿಳಿದ ಜನರು ನನಗೆ ಕರೆ ಮಾಡಿ ಬೈಯುತ್ತಿದ್ದಾರೆ.
ಸಂಜಯ್ ಕುಮಾರ್,
ಫೇಸ್‌ಬುಕ್ ಪೇಜ್ ಕ್ರಿಯೇಟರ್.