ಚಲುವರಾಯಸ್ವಾಮಿ ಗೆದ್ದರೆ ನಾನು ಗೆದ್ದಂತೆ : ಸಿದ್ದರಾಮಯ್ಯ

ಜೆಡಿಎಸ್‍ನವರು ಅವಕಾಶವಾದಿಗಳು, ಅವರನ್ನು ಗೆಲ್ಲಿಸುವುದರಿಂದ ಏನು ಪ್ರಯೋಜನವಿಲ್ಲ. ಚಲುವರಾಯಸ್ವಾಮಿ ಗೆದ್ದರೆ ನಾನು ಗೆದ್ದಂತೆ ಎಂದು ಸಿದ್ದರಾಮಯ್ಯ ಹೇಳಿದರು.ತಾಲೂಕಿನ ದೇವಲಾಪುರ ಹೋಬಳಿ ಕೊಂಬಿನಕೊಪ್ಪಲು ಗ್ರಾಮದಲ್ಲಿ ನಡೆದ ಅರುವಿನಮ್ಮ ಪರ ಮತ್ತು ಕನಕ ಭವನದಲ್ಲಿ ಕನಕನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದ ನಂತರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ.
ಕುರ್ಚಿ ಸಿಗಲು ನಿಮ್ಮ ಆಶೀರ್ವಾದ ಬೇಕು. ನಾವು ವಿಧಾನಸೌಧಕ್ಕೆ ಹೋಗಲು ಚಲುವರಾಯ ಸ್ವಾಮಿಯನ್ನು ಗೆಲ್ಲಿಸಿಕೊಡಿ. ಎಚ್.ಡಿ.ದೇವೇಗೌಡರು ಇಲ್ಲಿ ಬಂದು ಅತ್ತು ಚಲುವರಾಯಸ್ವಾಮಿಯನ್ನು ಕಳೆದ ಬಾರಿ ಸೋಲಿಸಿದ್ದಾರೆ. ಮತ್ತೆ ಬಂದು ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ಆಗ ಕಳೆದ ಬಾರಿ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ.ನಾಗಮಂಗಲದವರು ಈ ಬಾರಿ ಚಲುವರಾಯಸ್ವಾಮಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಹೇಳಿದರು.ಚಲುವರಾಯಸ್ವಾಮಿ ನಿಮ್ಮ ಶಾಸಕರಾಗಬೇಕಾ.. ಬೇಡ್ವ, ಎಂದು ಸಭಿಕರನ್ನು ಪ್ರಶ್ನಿಸಿದರು.
ಸಿಆರ್‍ಎಸ್ ಕೇವಲ ಶಾಸಕರಲ್ಲ ಅವರು ಮಂತ್ರಿ ಎಂದು ಕಾರ್ಯಕರ್ತನೊಬ್ಬ ಕೂಗಿದಾಗ ಮೊದಲು ಕಾಂಗ್ರೆಸ್‍ನ್ನು ಅಕಾರಕ್ಕೆ ತನ್ನಿ ಅಮೇಲೆ ಮಂತ್ರಿ ಮಾಡೋಣ, ಎಂದರು.ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡರ ಗೆಲುವಿಗೆ ಈತನೇ ಕಾರಣ. ರಾಜ್ಯಕ್ಕೆ ಒಳ್ಳೆಯದಾಗಲು ಕಾಂಗ್ರೆಸ್ ಅಕಾರಕ್ಕೆ ಬರಬೇಕು ಎಂದರು.
ನಾಗಮಂಗಲದ ಜನ ಸಾಹಸ ಪ್ರವೃತ್ತಿಯವರು, ದೇಶದ ಬೇರೆ ಬೇರೆ ಭಾಗಗಳಲ್ಲಿ ಇಲ್ಲಿಯ ಜನ ಬದುಕನ್ನು ಕಟ್ಟಿಕೊಂಡಿದ್ದರೂ ತಮ್ಮ ಊರನ್ನು ಮರೆತಿಲ್ಲ. ಪಾರ್ವತಮ್ಮ ರಾಜೆಂದ್ರ ದಂಪತಿ ತನ್ನೂರಿನಲ್ಲಿ ಕನಕ ಭವನ ನಿರ್ಮಾಣಕ್ಕೆ ಸರ್ಕಾರದ ಹಣದ ಜೊತೆ ತಮ್ಮ ಹಣ ಸೇರಿಸಿರುವುದು ಅಭಿನಂದನಾರ್ಹ ಎಂದು ಕೊಂಡಾಡಿದರು.
ಅಗ್ನಿವೀರರ ನೇಮಕದಿಂದ ಯುವಕರ ಭವಿಷ್ಯವನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ 17 ವರ್ಷದ ಯುವಕರನ್ನು ನೇಮಿಸಿ 4 ವರ್ಷದ ನಂತರ ತೆಗೆದು ಹಾಕುತ್ತಾರೆ. ಆಗ ಅವರಿಗೆ 21 ವರ್ಷ ವಯಸ್ಸಾಗಿರುತ್ತದೆ. ಆ ಯುವಕರು ಮಾಜಿ ಸೈನಿಕರು ಅಲ್ಲ, ಪಿಂಚಣಿಯು ಇಲ್ಲ, ಇದಕ್ಕೆ ನಮ್ಮ ವಿರೋಧ.
ನೇಮಿಸಿಕೊಂಡವರಿಗೆ 10-15 ವರ್ಷ ಕೆಲಸ ಕೊಡಿ, ಅವರಿಗೆ ಪಿಂಚಣಿ ಕೊಡಿ ಇದು ನಮ್ಮ ಒತ್ತಾಯ ಎಂದರು.ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಕಂಬಳಿಯ ಶಾಲು ಹೊದೆಸಿ, ಬಂಡೂರು ಕುರಿಮರಿ, ತಲೆಗೆ ಕರಡಿ ಪೇಟ, ಡಮರುಗ ನೀಡಿದಾಗ ಅದನ್ನು ಭಾರಿಸಿ ಸಿದ್ದರಾಮಯ್ಯ ಸಂತಸಪಟ್ಟರು.
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಈ ಗ್ರಾಮದಲ್ಲಿ ಕನಕಭವನ ನಿರ್ಮಾಣಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 25ಲಕ್ಷ, ಮಾಜಿ ಎಂಎಲïಸಿ ಅಪ್ಪಾಜಿಗೌಡ 2.5ಲಕ್ಷ, ನನ್ನ ಶಾಸಕತ್ವದ ಅವಯಲ್ಲಿ 7ಲಕ್ಷ ಅನುದಾನ ನೀಡಿದ್ದೇವೆ. ಆದರೆ ಕನಕಭವನದ ಉದ್ಘಾಟನೆಗೆ ಶಿಷ್ಟಾಚಾರದ ನೆಪವೊಡ್ಡಿ ಈಗಿನ ಶಾಸಕರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು.ಜನರಿಗೆ ಹಿತವಾದ ಸರ್ಕಾರ ಬೇಕೆಂದರೆ ಅದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಆದ್ದರಿಂದ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಸನ್ನ, ಮಾಜಿ ಅಧ್ಯಕ್ಷರಾದ ಎಚ್.ಟಿ.ಕೃಷ್ಣೇಗೌಡ,ಎನ್.ಜೆ. ರಾಜೇಶ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿ ಗೌಡ, ಡಾ.ಕೀಲಾರ ಕೃಷ್ಣ, ಜಿಪಂ ಮಾಜಿ ಸದಸ್ಯರಾದ ಹುಚ್ಚೇಗೌಡ, ಸಾವಿತ್ರಮ್ಮ, ಮನ್‍ಮುಲ್ ಮಾಜಿ ಅಧ್ಯಕ್ಷ ಜವರೇಗೌಡ, ತಾಪಂ ಮಾಜಿ ಅಧ್ಯಕ್ಷರಾದ ಎನ್.ಕೆ.ವಸಂತಮಣಿ, ಆರ್.ಕೃಷ್ಣೇಗೌಡ, ಮಾಜಿ ಸದಸ್ಯ ಕೊಣನೂರು ಹನುಮಂತು, ಸೇರಿದಂತೆ ಹಲವರಿದ್ದರು.