ಚರಂಡಿ, ಮೋರಿ, ರಸ್ತೆ ಸಣ್ಣ ಸಣ್ಣ ವಿಚಾರ ಬಿಟ್ಟುಬಿಡಿ: ಲವ್ ಜಿಹಾದ್ ಬಗ್ಗೆ ಗಮನ ನೀಡಿ- ವಿವಾದಾತ್ಮಕ ಹೇಳಿಕೆ ನೀಡಿದ ನಳೀನ್ ಕುಮಾರ್ ಕಟೀಲ್

ಮಾತಿನ ಬರದಲ್ಲಿ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದೀಗ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.ಚರಂಡಿ, ಮೋರಿ ರಸ್ತೆ ಸಣ್ಣ ಸಣ್ಣ ವಿಚಾರ ಬಿಟ್ಟುಬಿಡಿ. ಲವ್ ಜಿಹಾದ್ ಬಗ್ಗೆ ಗಮನ ನೀಡಿ ಎಂದು ಹೇಳಿಕೆ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ನಿಮ್ಮ ಮಕ್ಕಳು ಉಳಿಯಬೇಕು ಅಂದ್ರೆ ಲವ್ ಜಿಹಾದ್ ನಿಲ್ಲಬೇಕು. ಲವ್ ಜಿಹಾದ್ ತಡೆಯಲು ಬಿಜೆಪಿ ಬೇಕು. ಲವ್ ಜಿಹಾದ್ ವಿರುದ್ದ ಬಿಜೆಪಿ ಕಾನೂನು ಜಾರಿ ಮಾಡುತ್ತೆ. ಡಿಕೆ ಶಿವಕುಮಾರ್ ಸಿಎಂ ಆದ್ರೆ ಎಲ್ಲಾ ಭಯೋತ್ಪಾದಕರು ರಸ್ತೆಗೆ ಬರ್ತಾರೆ. ಭಯೋತ್ಪಾದಕರು ಪಿಎಫ್ ಐ ಎಲ್ಲರೂ ರಸ್ತೆಗೆ ಬರ್ತಾರೆ.
ಕಾಂಗ್ರೆಸ್ ಭಯೋತ್ಪಾದಕರ ಪಾರ್ಟಿ. ಭಯೋತ್ಪಾದನೆಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಪಿಎಫ್ ಐ ಕೆಎಫ್ ಡಿ ನಿಷೇಧಿಸಿದ್ದು ಕೇಂದ್ರ ಸರ್ಕಾರ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಗುಂಡಿ ಬಿದ್ದಿರುವ ರಸ್ತೆಗಳಿಂದ ವಾಹನ ಸವಾರರು ಬಿದ್ದು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರೇ ಇತ್ತ ರಸ್ತೆ ಚರಂಡಿ ಎಲ್ಲವೂ ಸಣ್ಣ ವಿಚಾರ ಎಂಬಂತೆ ಹೇಳಿರುವ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.