ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ಕಛೇರಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪಕ್ಷ ಸೇರ್ಪಡೆ ಕಾರ್ಯಕ್ರಮ ಮತ್ತು ಪಕ್ಷ ಸಂಘಟನೆಯ ಕುರಿತಾದ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ KRS ಪಕ್ಷದ ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ತೇಜಸ್ ಕುಮಾರ್ ಮಾತನಾಡಿ ” ಭ್ರಷ್ಟ ಜೆಸಿಬಿ ( ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ) ಪಕ್ಷಗಳು ಭ್ರಷ್ಟಾಚಾರದಲ್ಲಿ ಸಮಾನವಾಗಿ ಮುಳುಗಿವೆ. ಇಂದು ಕರ್ನಾಟಕಕ್ಕೆ ಸಚ್ಚ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣ ಮಾಡಲು KRS ಪಕ್ಷದಂತಹ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಹಣ – ಹೆಂಡ – ಕೋಮುವಾದಿ ರಾಜಕಾರಣದಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ನಿವಾರಿಸಲು KRS ಪಕ್ಷವು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಪ್ರಾಮಾಣಿಕ ರಾಜಕಾರಣದ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಹಾಗೂ ಈಗಾಗಲೇ KRS ಪಕ್ಷವು ಜನಪರ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದ ಲಕ್ಷಾಂತರ ಜನರಲ್ಲಿ ಪರ್ಯಾಯ ರಾಜಕಾರಣದ ಬಗ್ಗೆ ವಿಶ್ವಾಸ ಮೂಡಿಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ KRS ಪಕ್ಷದಿಂದ ಹಣ – ಹೆಂಡ ಹಂಚದೆ ಪ್ರಾಮಾಣಿಕವಾಗಿ ಸ್ಪರ್ಧಿಸಲು ಹೆಚ್ಚು ಹೆಚ್ಚು ಜನರು ಮುಂದೆ ಬರಬೇಕು ” ಎಂದರು.ರಾಜ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಬಿ.ಎಸ್. ನಂಜೇಗೌಡ ಮಾತನಾಡಿ ” ರಾಜ್ಯಕ್ಕೆ KRS ಪಕ್ಷದಂತಹ ಒಂದು ಒಳ್ಳೆಯ ಪಕ್ಷದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ KRS ಪಕ್ಷದ ಜೊತೆ ಕೈ ಜೋಡಿಸಿ ಹೋರಾಟಗಳನ್ನು ಮಾಡಲಾಗುವುದು ” ಎಂದು ಹೇಳಿದರು.KRS ಪಕ್ಷದ ಚನ್ನರಾಯಪಟ್ಟಣ ತಾಲ್ಲೂಕು ಮುಖಂಡರಾದ ಮಂಜೇಗೌಡ ಮಾತನಾಡಿ ” ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ತಮ್ಮ ನ್ಯಾಯಬದ್ಧ ಕೆಲಸಗಳನ್ನು ಮಾಡಲು ಸರಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಬೇಕು. ಅವರ ಕೆಲಸಗಳು ತ್ವರಿತವಾಗಿ ನಡೆಯುವಂತೆ ಮಾಡಲು ತಾಲ್ಲೂಕು ಕಛೇರಿಯ ಮುಂಬಾಗದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ” ಎಂದು ಹೇಳಿದರು.ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಿ.ಎನ್. ಶಿವೇಗೌಡ, ತಾಲ್ಲೂಕು ಉಪಾಧ್ಯಕ್ಷರಾದ ಕೃಷ್ಣಪ್ಪ ಮತ್ತು ಮಹೇಶ್, ತಾಲ್ಲೂಕು ಕಾರ್ಯದರ್ಶಿಗಳಾದ ಬಿ.ಎಸ್. ನಂಜೇಗೌಡ , KRS ಪಕ್ಷದ ತಾಲ್ಲೂಕು ಮುಖಂಡರಾದ ಮಂಜೇಗೌಡ, ಆರ್.ಟಿ. ಐ. ಕಾರ್ಯಕರ್ತ ಮೋಹನ್ ಕುಮಾರ್, ರೈತ ಸಂಘದ ನಾಗರಾಜು, ರಾಮಣ್ಣ, ರಾಜು, ಶೇಖರ್, ಬಸಪ್ಪ ಹಾಗೂ ಇತರರು ಇದ್ದರು.ಸಭೆಯ ನಂತರ KRS ಪಕ್ಷ ಹಾಗೂ ರೈತ ಸಂಘದ ಮುಖಂಡರು ಚನ್ನರಾಯಪಟ್ಟಣದ ತಹಸೀಲ್ದಾರ್ ಗೋವಿಂದರಾಜು ಅವರನ್ನು ಭೇಟಿಯಾಗಿ ಮಾತನಾಡಿದರು.