
ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ಅವರ ಚಂಡೀಗಢದಲ್ಲಿ ಅವರ ನಿವಾಸದ ಬಳಿ ಪತ್ತೆಯಾಗಿದೆ.ಭಗವತ್ ಮನ್ ನಿವಾಸದ ಸಮೀಪ ಇರುವ ಹೆಲಿಪ್ಯಾಡ್ ಬಳಿ ಬಾಂಬ್ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದೆ.
ಟ್ಯೂಬ್ ವೆಲ್ ಆಪರೇಟರ್ ಸೋಮವಾರ ಸಂಜೆ 4.30ರ ಸುಮಾರಿಗೆ ಹೆಲಿಪ್ಯಾಡ್ ಸಮೀಪದ ಮಾವಿನ ಮರದ ತೋಪಿನಲ್ಲಿ ಬಾಂಬ್ ರೀತಿಯ ವಸ್ತು ಕಂಡು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಸೇನಾ ಮುಖ್ಯಸ್ಥರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಂಬ್ ಪತ್ತೆಯಾದ ವೇಳೆ ಭಗವತ್ ಮನ್ ಘಟನಾ ಸ್ಥಳದಲ್ಲಿ ಇರಲಿಲ್ಲ. ಸುಮಾರು ಒಂದೂವರೆ ಕಿ.ಮೀ. ದೂರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.