
ಸಾಮಾನ್ಯವಾಗಿ ಹಬ್ಬಗಳಲ್ಲಿ ಅಂಗಡಿಗಳಲ್ಲಿ ರಿಯಾಯಿತಿ ನೀಡೋದನ್ನು ನೋಡಿರ್ತಿವಿ,ಕೇಳಿರ್ತಿವಿ. ಆದ್ರೆ ಮಂಡ್ಯದಲ್ಲಿ ನೀಲಿ ಸಿನಿಮಾ ತಾರೆ ಸನ್ನಿಲಿಯೋನ್ ರ ಅಪ್ಪಟ ಅಭಿಮಾನಿಯೊಬ್ಬ ಸನ್ನಿ ಲಿಯೋನ್ ಮೇಲಿನ ಅಭಿಮಾನಕ್ಕೆ ವರ್ಷ ಪೂರ್ತಿ ವಿಶೇಷ ಆಫರ್ ನೀಡುವ ಮೂಲಕ ಚಿಕನ್ ಪ್ರಿಯರ ಸೆಳೆದಿದ್ದಾನೆ.
ಹೌದು!…ಮಂಡ್ಯ ನಗರದ ಕರ್ನಾಟಕ ಬಾರ್ ವೃತ್ತದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿರುವ ನಟಿ ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್, ತನ್ನ ಅಂಗಡಿಯಲ್ಲಿ ಚಿಕನ್ ಖರೀ ದಿಸುವ ಸನ್ನಿಲಿಯೋನ್ ಅಭಿಮಾನಿಗಳಿಗೆ ಶೇ.10 ಡಿಸ್ಕೌಂ ಟ್ ಕೊಡುವುದಾಗಿ ಮಾಹಿತಿ ಫಲಕ ಹಾಕಿಕೊಂಡಿದ್ದಾನೆ. ಆದ್ರೆ ಸುಮ್ಮನೆ ಬಂದು ನಾನು ಕೂಡ ಸನ್ನಿಲಿಯೋನ್ ಅ ಭಿಮಾನಿ ಎಂದರೆ ಈ ರಿಯಾಯಿತಿ ಸಿಗುವುದಿಲ್ಲ.ಬದಲಿಗೆ ಈ ಆಫರ್ ಗೆ ಈ ಮೂರು ಪ್ರಮುಖ ಷರತ್ತು ಪೂರೈಸಬೇಕು.
ಇನ್ನು ಈ ಡಿಸ್ಕೌಂಟ್ಗೆ ಪೂರೈಸಬೇಕಾದ ಆ ಮೂರು ಷರತ್ತುಗಳ ಬಗ್ಗೆ ಹೇಳೋದಾದ್ರೆ, ಮೊದಲಿಗೆ ಸಾಮಾಜಿಕ ಜಾಲತಾಣ ಫೆಸ್‌ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್ ಅವರನ್ನು ಫಾಲೋ ಮಾಡುತ್ತಿರ ಬೇಕು.ಇನ್ನು ಎರಡನೆಯದು ಅವರು ತಮ್ಮ ಮೊಬೈಲ್ ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು, ಹಾಗೂ ಅವರ ಎಲ್ಲ ಚಿತ್ರಗಳಿಗೂ ಮೆಚ್ಚುಗೆ ಹಾಗೂ ಕಾಮೆಂಟ್ ಮಾಡಿರಬೇಕೆಂದು ಷರತ್ತು ಹಾಕಲಾಗಿದೆ. ಇಷ್ಟನ್ನು ಪರಿಶೀಲಿಸಿ ಖಚಿತವಾದ ನಂತರ ಅವರಿಗೆ 10% ಡಿಸ್ಕೌಂಟ್ ನೀಡಲಾಗುತ್ತದೆ.
ಒಟ್ಟಾರೆ ಮಂಡ್ಯದ ಈ ಚಿಕನ್ ಅಂಗಡಿ ಮಾಲೀಕನ ಈ 10% ಫಲಕ ಸದ್ಯ ಸೋಷಿಯಲ್ ಮೀಡೀಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.ಇದೀಗ 10 % ಆಫರ್ ಗೆ ಮುಗಿ ಬೀಳ್ತಾ ಇದ್ದು ಸನ್ನಿ ಲಿಯೋನ್ ಅಭಿಮಾನಿಗಳಾಗ್ತಿದ್ದಾರೆ.