Uncategorized

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ನಿರ್ದೇಶಕ ಹೇಮಂತ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಮತ್ತೆ ಒಂದಾಗಿದ್ದಾರೆ

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ನಿರ್ದೇಶಕ ಹೇಮಂತ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಮತ್ತೆ ಒಂದಾಗಿದ್ದಾರೆ. ಈ ಜೋಡಿ ಒಂದಾಗಿ ವಿಭಿನ್ನ ರೀತಿಯ ಚಿತ್ರ ಮಾಡಿದ್ದು, ಅದಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಎಂದು ಚಂದದ ಹೆಸರು ಕೂಡ ಇಟ್ಟಿದ್ದಾರೆ.

ಈ ಸಿನಿಮಾ ಫಸ್ಟ್ ಲುಕ್ ಇಂದು ಬಿಡುಗಡೆ ಆಗಿದೆ. ಫಸ್ಟ್ ಲುಕ್ ಕಂಡು ರಕ್ಷಿತ್ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಮಲ್ಲಿಗೆಯಂತೆ ತೂಗುತ್ತಿದ್ದ ರಕ್ಷಿತ್ ಗುಲಾಬಿ ರೀತಿಯಲ್ಲಿ ಉಬ್ಬಿಕೊಂಡಿರುವುದಕ್ಕೆ ಕಾರಣವನ್ನೂ ಅವರು ಕೇಳಿದ್ದಾರೆ. ಹೌದು, ಈ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು,

ಅದು ಗಾಬರಿ ಬೀಳುವಷ್ಟು ತೂಕ ಹೆಚ್ಚಿದೆಯಂತೆ. ಈ ಪಾತ್ರಕ್ಕಾಗಿ ಅಂಥದ್ದೊಂದು ತಾಲೀಮು ಅವಶ್ಯಕತೆ ಇತ್ತು. ಹಾಗಾಗಿ 15 ರಿಂದ 20 ಕೇಜಿ ತೂಕವನ್ನು ಈ ಚಿತ್ರಕ್ಕಾಗಿ ರಕ್ಷಿತ್ ಹೆಚ್ಚಿಸಿಕೊಂಡಿದ್ದಾರಂತೆ. ಅಲ್ಲದೇ, ಇಲ್ಲಿ ಅವರ ಪಾತ್ರಕ್ಕೆ ಹಲವು ಶೇಡ್ ಗಳು ಇರುವುದರಿಂದ ತೂಕ ಹೆಚ್ಚಿಸಿಕೊಂಡ ಪಾತ್ರದ ಫಸ್ಟ್ ಲುಕ್ ಅನ್ನು ಈ ಬಾರಿ ರಿಲೀಸ್ ಮಾಡಿದ್ದಾರೆ ನಿರ್ದೇಶಕರು. ಈಗ ಆ ಫಸ್ಟ್ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ, ರಕ್ಷಿತ್ ನಡೆಯನ್ನು ಅಭಿನಂದಿಸಲಾಗುತ್ತಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button