ಗೊಂಬೆಯಂತಿದ್ದ ನಟಿ ಪಾಲಿಗೆ ವಿಲನ್ ಆದ ವೈದ್ಯರು! ದಂತ ಚಿಕಿತ್ಸೆ ಪಡೆದ ಯುವನಟಿಗೆ ಇಂದೆಂಥ ಸ್ಥಿತಿ?

ಕನ್ನಡದ ನಟಿ ಸ್ವಾತಿ ಸತೀಶ್ ಅವರು ದಂತ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋದಾಗ ನಟಿಯ ಮುಖವನ್ನು ವಿರೂಪಗೊಳಿಸಿದ ಘಟನೆಯೊಂದು ನೆಡೆದಿದೆ.
ಬೆಂಗಳೂರಿನ ಜೆ.ಪಿ ನಗರದಲ್ಲಿ ನಿವಾಸಿ ನಟಿ ಸ್ವಾತಿ ಸತೀಶ್, ಕಳೆದ 20 ದಿನಗಳಿಂದ ಹಲ್ಲು ನೋವಿನಿಂದ ಬಳಲುತ್ತಿದ್ದರು. ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಟಿ ಸ್ವಾತಿ ಹೋಗಿದ್ದರು.
ಆ ವೇಳೆ ರೂಟ್ ಕೆನಾಲ್ ಚಿಕಿತ್ಸೆಗಾಗಿ ಅನಸ್ತೆಷಿಯಾ ನೀಡಬೇಕಿದ್ದ ವೈದರು, ಬದಲಾಗಿ ಸ್ಯಾಲಿಕ್ ಆಸಿಡ್ ಇಂಜಕ್ಷನ್ ನೀಡಿದ್ದಾರೆ.
ಇದರಿಂದಾಗಿ ಸ್ವಾತಿ ಅವರ ಮುಖದ ಒಂದು ಭಾಗ ಊತ ಬಂದಿದೆ.ಇದನ್ನು ಗಮನಿಸಿದ ಸ್ವಾತಿ ಹಾಗೂ ಅವರ ಮನೆಯವರು ವೈದ್ಯರ ಬಳಿ ಊತದ ಬಗ್ಗೆ ವಿಚಾರಿಸಿದಾಗ, ಕೆಲವು ಗಂಟೆಗಳಲ್ಲಿ ಕಡಿಮೆಯಾಗಲಿದೆ ಎಂಬ ಮಾಹಿತಿಯನ್ನ ನೀಡಿದ್ದಾರೆ.
ಆದರೆ ಕೆಲ ದಿನಗಳು ಕಳೆದರೂ ಊತ ಮಾತ್ರ ಕಡಿಮೆಯಾಗಿಲ್ಲ. ಬದಲಿಗೆ ಹೆಚ್ಚಾಗುತ್ತ ಹೋಯಿತು. ಮತ್ತೆ ವೈದ್ಯರಿಗೆ ಕರೆ ಮಾಡಿದಾಗ ತಾವು ಊರಲ್ಲಿಲ್ಲ ಎಂದು ಹೇಳಿದ್ದಾರೆ.
ಸದ್ಯ ನಟಿ ಸ್ವಾತಿ ಮನೆಯಿಂದ ಹೊರಬರಲಾರದೆ, ಇತ್ತ ಮುಖದ ಸ್ಥಿತಿಯನ್ನು ಕಂಡು ಕಣ್ಣೀರಿಡುತ್ತಿದ್ದಾರೆ. ಇನ್ನೂ ಈ ನಟಿ ಬಗ್ಗೆ ಹೇಳುವುದಾದರೆ ಎಫ್ಐಆರ್ 6 ಟು 6 ಸೇರಿದಂತೆ ಹಲವು ಸಿನಿಮಾದಲ್ಲಿ ಸ್ವಾತಿ ನಟಿಸಿದ್ದಾರೆ.
ಮಾತ್ರವಲ್ಲದೆ ನಿರೂಪಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಒಬ್ಬ ನಟಿಗೆ ಲುಕ್ ತುಂಬಾನೆ ಇಂಪಾರ್ಟೆಂಟ್ ಆದರೆ ಇದೀಗ ನಟಿ ಸ್ವಾತಿ ವೈದ್ಯರ ನಿರ್ಲಕ್ಷದಿಂದ ಈ ಸ್ಥಿತಿಗೆ ಬಂದಿದ್ದು ಗುರುತಿಸುವುದೇ ಕಷ್ಟವಾಗಿದೆ.
ಮುಂದೆ ನಟನೆಗೆ ಅವಕಾಶ ಸಿಗತ್ತೋ, ಇಲ್ಲವೋ ಎಂಬ ನೋವಿನಲ್ಲಿ ನಟಿ ಸ್ವಾತಿ ಕಾಲಕಳೆಯುತ್ತಿದ್ದಾರೆ.ಇನ್ನೂ ನಟಿ ಸ್ವಾತಿ ಸತೀಶ್ ಸದ್ಯ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.
ಈ ಘಟನೆಯಿಂದ ವೃತ್ತಿ ಜೀವನಕ್ಕೂ ತೊಂದರೆಯಾಗಿರುವುದರಿಂದ ಕಾನೂನು ಹೋರಾಟ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.
ಕೆಲವು ದಿನಗಳ ಹಿಂದೆ ನಟಿ ಚೇತನಾ ರಾಜ್ ಕೂಡ ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನಂಶ ಶೇಖರಣೆಯಾದ ಪರಿಣಾಮ ಸಾವನ್ನಪಿದ್ದಾರೆ.
ಈ ಘಟನೆ ಕೂಡ ವೈದ್ಯರ ನಿರ್ಲಕ್ಷ್ಯದಿಂದ ನಡೆದಿದೆ. ಈ ರೀತಿ ವೈದ್ಯರ ನಿರ್ಲಕ್ಷ್ಯ ಜೀವವನ್ನೆ ತೆಗೆಯುತ್ತಿದೆ.