ಅಪಘಾತ
ಗೂಡ್ಸ್ ವಾಹನದ ಮೇಲೆ ಆನೆ ದಾಳಿ: ತರಕಾರಿ ಗುಳುಂ, ವಾಹನವೂ ಜಖಂ

ತಮಿಳುನಾಡಿನಿಂದ ಕರ್ನಾಟಕಕ್ಕೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನದ ಮೇಲೆ ತನ್ನ ಮರಿಗಳೊಂದಿಗೆ ಆನೆ ದಾಳಿ ನಡೆಸಿದೆ.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಾದ ಚಾಮರಾಜನಗರ ಗಡಿಭಾಗ ಅಸನೂರು ಸಮೀಪ ಘಟನೆ ನಡೆದಿದೆ.ಕಬ್ಬಿನ ಲಾರಿಗಾಗಿ ಕಾದು ನಿಂತಿದ್ದ ಆನೆಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ವಾಹನ ಎದುರಾಗಿದೆ.
ತರಕಾರಿ ತುಂಬಿದ್ದ ವಾಹನ ನೋಡುತ್ತಿದ್ದಂತೆಯೇ ಆನೆ ಏಕಾಏಕಿ ಆನೆಗಳು ವಾಹನದ ಮೇಲೆರಗಿದೆ. ಕ್ಷಣ ಮಾತ್ರದಲ್ಲಿ ವಾಹನದಲ್ಲಿದ್ದ ತರಕಾರಿಯನ್ನು ಗುಳುಂ ಮಾಡಿದೆ.
ಇನ್ನು, ಆನೆಯ ದಾದಾಗಿರಿಗೆ ವಾಹನದ ಗಾಜು ಒಡೆದು ಹೋಗಿದ್ದು, ಮುಂಭಾಗ ಜಖಂ ಆಗಿದೆ.ಇನ್ನು, ಆನೆ ರಂಪಾಟದ ವಿಡಿಯೋವನ್ನು ಬೇರೆ ವಾಹನ ಚಾಲಕರು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
ಕಬ್ಬಿನ ಲಾರಿಗಳಿಗೆ ಮಾತ್ರ ಕಣ್ಣಿಡುತ್ತಿದ್ದ ಈ ಆನೆ ಈಗ ಗೂಡ್ಸ್ ವಾಹನದ ಮೇಲೂ ಎರಗಿರುವುದು ಚಾಲಕರಲ್ಲಿ ಆತಂಕ ಮೂಡಿಸಿದೆ.