ಗುಣ ಮಟ್ಟದ ರಸಗೊಬ್ಬರ -ಮೋದಿ ಭರವಸೆ

ದೇಶದಲ್ಲಿ ‘ಒಂದು ರಾಷ್ಟ್ರ ಒಂದು ರಸಗೊಬ್ಬರ’ ಅಡಿಯಲ್ಲಿ, ರೈತರಿಗೆ ಅಗ್ಗದ ಮತ್ತು ಉತ್ತಮ ಗುಣಮಟ್ಟದ ರಸಗೊಬ್ಬರವನ್ನು ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆರಸಗೊಬ್ಬರಗಳ ಉತ್ಪಾದನಾ ತಂತ್ರಜ್ಞಾನ ಮತ್ತು ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಇದು ದೊಡ್ಡ ಬದಲಾವಣೆ.
ಇದರಿಂದ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಉತ್ತೇಜನ ನೀಡಲಿದೆ. ಮತ್ತು ಎಲ್ಲಾ ಬೆಳೆ-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದಿದ್ಧಾರೆ.ದೆಹಲಿಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಪಿಎಂ- ಕಿಸಾನ್ ಸನ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾಗತಿಕವಾಗಿ ಕೃಷಿ ಉತ್ಪನ್ನಗಳ ಸಮರ್ಥ ಉತ್ಪಾದನೆಗೆ ಭಾರತ ಶೀಘ್ರದಲ್ಲೇ ಬಹು ದೊಡ್ಡ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದಾರೆ.
ನೀರನ್ನು ಸಂರಕ್ಷಿಸಲು ಮತ್ತು ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್‍ಗಳ ಬಳಕೆಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಇದರ ಜೊತೆಗೆ ನೈಸರ್ಗಿಕ ಕೃಷಿಗೆ ಸಂಪೂರ್ಣ ಪ್ರಾಮುಖ್ಯತೆ ನೀಡಲಾಗಿದೆ ಇದರಿಂದ ಉತ್ಪಾದನೆಯಲ್ಲಿ ಬಹುಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಖಾದ್ಯ ತೈಲ, ಗೊಬ್ಬರ ಮತ್ತು ಕಚ್ಚಾ ತೈಲವನ್ನು ಇತರ ದೇಶಗಳಿಂದ ಖರೀದಿಸಲು ಹೆಚ್ಚು ಖರ್ಚು ಮಾಡುತ್ತೇವೆ. ವಿದೇಶಗಳಲ್ಲಿ ಯಾವುದೇ ಬಿಕ್ಕಟ್ಟು ಉಂಟಾದಾಗ ಅದು ನಮ್ಮ ಮೇಲೂ ಪರಿಣಾಮ ಬೀರುತ್ತದೆ. ಮೊದಲು ಕೋವಿಡ್ ಬಂತು ನಂತರ ರಷ್ಯಾ-ಉಕ್ರೇನ್ ಯುದ್ದ ಪ್ರಾರಂಭವಾಯಿತು.
ನಮ್ಮ ಹೆಚ್ಚಿನ ಅಗತ್ಯಗಳನ್ನು ಪೂರೈಸುವ ದೇಶಗಳು ಯುದ್ಧದಲ್ಲಿ ತೊಡಗಿವೆ ಎಂದು ಅವರು ತಿಳಿಸಿದ್ದಾರೆ.ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಇರುವ ರೈತ ಸಂಘಟನೆಗಳು ಮತ್ತು ರೈತ ಉತ್ಪಾದನಾ ಸಂಘಗಳ ಜೊತೆಗೂ ಕೂಡ ಸಂವಾದ ನಡೆಸಿದರು.ಇದೇ ವೇಳೆ ಕೃಷಿ ಉತ್ಪನ್ನಗಳ ಪ್ರಾತ್ಯಕ್ಷಿಕೆ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡದರು.
ಈ ವೇಳೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ಥೋಮರ್, ಮನ್ ಸುಖ್ ಮಾಂಡವೀಯ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ ಸೇರಿದಂತೆ ಮತ್ತಿತರಿದ್ದರು.೧೬ ಸಾವಿರ ಕೋಟಿ ರೂ ಬಿಡುಗಡೆಪಿಎಂ ಕಿಸಾನ್ ಸನ್ಮಾನ್ ಯೋಜನೆ ಅಡಿಯಲ್ಲಿ ದೇಶದಾದ್ಯಂತ ರೈತರಿಗೆ ೧೬,೦೦೦ ಕೋಟಿ ರೂಪಾಯಿ ಮೊತ್ತವನ್ನು ರೈತರ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ನೇರ ನಗದು ವರ್ಗಾವಣೆ ಮೂಲಕ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ವಾರ್ಷಿಕವಾಗಿ ರೈತರಿಗೆ ನೀಡುವ ೬ ಸಾವಿರ ರೂಪಾಯಿ ಮೊತ್ತದ ೧೨ ನೇ ಕಂತು ಇದಾಗಿದೆ ಎಂದು ಹೇಳಿದರು.