
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕರಾಗಿದ್ದ ಉದ್ಯಮಿ ವಿಜಯ್ ಮಲ್ಯ ಅವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಾರೆ ಕ್ರಿಸ್ ಗೇಲ್ ಅವರೊಂದಿಗೆ ಈಗ ತಮ್ಮ ಸಾಮಾಜಿಕ ವೇದಿಕೆಗಳಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಗೇಲ್ ಅವರೊಂದಿಗೆ ಫೋಟೋ ಹಂಚಿಕೊಂಡು ಅವರನ್ನು ಗುಡ್ ಫ್ರೆಂಡ್ ಎಂದು ಬಣ್ಣಿಸಿದ್ದಾರೆ.ನನ್ನ ಗುಡ್ ಫ್ರೆಂಡ್ ಯುನಿವರ್ಸಲ್ ಬಾಸ್ ಕ್ರಿಸ್ಟೋಫರ್ ಹೆನ್ರಿ ಗೇಲ್ ಅವರನ್ನು ಭೇಟಿಯಾಗುತ್ತಿರುವುದು ಸಂತೋಷದ ಸಂಗತಿ, ನಾನು ಅವರನ್ನು ಆರ್ಸಿಬಿಗೆ ಅವರನ್ನು ನೇಮಕ ಮಾಡಿಕೊಂಡಾಗಿನಿಂದಲೂ ಅವರ ಜೊತೆ ಉತ್ತಮ ಬಾಂಧ್ಯವ್ಯ ಇದೆ’ ಎಂದು ಮಲ್ಯ ಬರೆದುಕೊಂಡಿದ್ದಾರೆ.
ಮಲ್ಯ ಪೋಸ್ಟ್ ಮಾಡಿದ ನಂತರ ಈ ಟ್ವೀಟ್ 55,000 ಕ್ಕೂ ಹೆಚ್ಚು ‘ಲೈಕ್‌ಗಳು’ ಮತ್ತು 3000 ಕ್ಕೂ ರೀಟ್ವೀಟ್‌ಗಳನ್ನು ಗಳಿಸಿದೆ.ಗೇಲ್ ಐಪಿಎಲ್‌ನಲ್ಲಿ 142 ಪಂದ್ಯಗಳಿಂದ 4965 ರನ್ ಗಳಿಸಿದ್ದು,148.96 ರ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ ಲೀಗ್‌ನಲ್ಲಿ 39.72 ಸರಾಸರಿ ಹೊಂದಿದ್ದಾರೆ.
2013 ರಲ್ಲಿ ಈಗ ನಿಷ್ಕ್ರಿಯಗೊಂಡ ಪುಣೆ ವಾರಿಯರ್ಸ್ ವಿರುದ್ಧ ಅವರ ಅಜೇಯ 175 ಸೇರಿದಂತೆ ಆರು ಶತಕಗಳನ್ನು ಗಳಿಸಿದ್ದಾರೆ.
ಇದು ಈವರೆಗೆ ಐಪಿಎಲ್ ನಲ್ಲಿ ಗಳಿಸಿದ ಗರಿಷ್ಟ ಮೊತ್ತವಾಗಿದೆ.ಕ್ರಿಲ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ 2011 ರಿಂದ 2017 ರ ವರೆಗೆ ಆಡಿದ್ದರು.ಇದಾದ ನಂತರ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.