ರಾಜ್ಯ

ಗುಜರಿ ಸೇರಲಿವೆ 990 ಬಿಎಂಟಿಸಿ ಬಸ್‍ಗಳು..!

ಮೆಟ್ರೋ ರೈಲಿನ ಕಾಲದಲ್ಲೂ ಜಟಕಾ ಬಂಡಿಗಳಂತೆ ಸಾಗುವ ಬಿಎಂಟಿಸಿ ಬಸ್‍ಗಳ ಸಂಚಾರದ ಬಗ್ಗೆ ಸಾರ್ವಜನಿಕರಿಗೆ ಇರುವ ತಾತ್ಸಾರ ಮನೋಭಾವನೆಯನ್ನು ಹೋಗಲಾಡಿಸುವ ಪ್ರಯತ್ನಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ಧರಿಸಿದೆ.ಸಂಚರಿಸುವ ಸಂದರ್ಭದಲ್ಲೇ ಎಲ್ಲೇಂದರಲ್ಲಿ ಕೆಟ್ಟು ನಿಲ್ಲುವ ಬಸ್‍ಗಳಿಗೆ ಮುಕ್ತಿ ಹಾಡಲು ನಿರ್ಧರಿಸಿರುವ ಸಂಸ್ಥೆ ವಯಸ್ಸಾದ 990 ಬಸ್‍ಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದೆ.

ದಿನಕಳೆದಂತೆ ನಮ್ಮ ಬೆಂಗಳೂರು ಟ್ರಾಫಿಕ್ ಕ್ಯಾಪಿಟಲ್ ಆಗುತ್ತಿದ್ದು, ಇಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಣಗೆ ಪಬ್ಲಿಕ್ ಟ್ರಾನ್ಸ್‍ಪೋರ್ಟೇಶನ್ ಉಪಯೋಗಿಸಿ ಎಂದು ಸಂಚಾರಿ ಪೊಲೀಸರು ಅರಿವು ಮೂಡಿಸುತ್ತಿರುವ ಸಂದರ್ಭದಲ್ಲೇ ಜಟಕಾ ಬಂಡಿಗಳಂತೆ ಕುಂಟುತ್ತಾ ಸಾಗುತ್ತ ಎಲ್ಲೇಂದರಲ್ಲಿ ಕೆಟ್ಟು ಹೋಗುವ ಬಸ್‍ಗಳಿಗೆ ಇತಿಶ್ರೀ ಹಾಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ಒಂದ¯್ಲ ದು ಬಿಎಂಟಿಸಿ ಬಸ್ ಕೆಟ್ಟು ನಿಲ್ತಿದೆ. ಇದಕ್ಕೆ ಕಾರಣ ಬಸ್‍ಗಳ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು ಇದರ ಜತೆಗೆ ಬಸ್‍ಗಳಿಗೆ ವಯಸ್ಸಾಗಿರೋದು ಎನ್ನುವುದು ಸಾಬೀತಾಗಿರುವುದರಿಂದ ತನ್ನ 990 ಹಳೆಯ ಬಸ್‍ಗಳನ್ನು ಗುಜರಿಗೆ ಹಾಕಲು ಬಿಎಂಟಿಸಿ ನಿರ್ಧರಿಸಿದೆ.ಬಿಎಂಟಿಸಿ ಬಸ್‍ಗಳು ಗುಜರಿಗೆ ಹೋಗಲು ಕೂಡ ಒಂದೆರಡು ಷರತ್ತುಗಳನ್ನು ಪೂರೈಸಬೇಕಿದೆ.

ಸಾಮಾನ್ಯ ಬಸ್‍ಗಳಾದ್ರೇ 12 ವರ್ಷ ಸೇವಾವ ಮುಗಿಸಿರಬೇಕು ಅಥವ 8.5 ಲಕ್ಷ ಕಿಲೋಮೀಟರ್ ಸಂಚರಿಸಿರಬೇಕು. ವೋಲ್ವೋ ಬಸ್‍ಗಳಾದ್ರೆ 15 ವರ್ಷ ಸೇವಾವ ಮುಗಿಸಿರಬೇಕು ಅಥವ 10.5 ಲಕ್ಷ ಕಿಲೋಮೀಟರ್ ಸಂಚರಿಸಿರಬೇಕಿದೆ.ಇವೆರಡೂ ಷರತ್ತುಗಳು ಪೂರೈಸಿದ್ದಲ್ಲಿ ಮಾತ್ರ ಮತ್ತೊಂದಿಷ್ಟು ಹಂತಗಳಲ್ಲಿ ಪರಿಶೀಲನೆ ನಡೆಸಲಾಗುತ್ತೆ. ಬಸ್‍ಗಳನ್ನು ಸರಿಪಡಿಸೋ ಸಾಧ್ಯತೆಯೇ ಇಲ್ಲ ಎಂದಾಗ ಗುಜರಿಗೆ ಹಾಕಲಾಗುತ್ತದೆ ಎನ್ನುತ್ತಾರೆ ಬಿಎಂಟಿಸಿ ಐಟಿ ನಿರ್ದೇಶಕ ಎ.ವಿ.ಸೂರ್ಯಸೇನ್ ಅವರು.

ಈಗಾಗಲೇ 290 ಬಸ್‍ಗಳನ್ನು ಗುಜರಿಗೆ ಹಾಕಲಾಗಿದೆ. ಪ್ರಸಕ್ತ ವರ್ಷದಲ್ಲಿ 400 ಬಸ್‍ಗಳು ಗುಜರಿ ಸೇರಲಿವೆ. ಮುಂದಿನ ದಿನಗಳಲ್ಲಿ ಉಳಿದ ಬಸ್‍ಗಳನ್ನು ಗುಜರಿಗೆ ಹಾಕಲಾಗುತ್ತಿದೆ. ಒಂದು ಬಸ್‍ಗೆ ಎರಡು ಲಕ್ಷ ರೂ.ಗಳ ದರ ನಿಗದಿಪಡಿಸಲಾಗಿದೆ.

ಹೀಗಾಗಿ ಬಸ್‍ಗಳನ್ನು ಗುಜರಿಗೆ ಹಾಕುವುದರಿಂದಲೂ ಬಿಎಂಟಿಸಿಗೆ ಸುಮಾರು 23 ಕೋಟಿ ರೂ.ಗಳ ಆದಾಯ ಬರುವ ನಿರೀಕ್ಷೆಯಿದೆ.ಮತ್ತೊಂದೆಡೆ, ಗುಜರಿಗೆ ಹಾಕಲಾಗ್ತಿರೋ ಬಸ್‍ಗಳಲ್ಲಿನ ಉಪಯುಕ್ತ ಬಿಡಿ ಭಾಗಗಳನ್ನು ಬಿಎಂಟಿಸಿ ತಾನೇ ಉಳಿಸಿಕೊಳ್ತಿದೆ. ಎಲ್ಲ ಉಪಯುಕ್ತ ವಸ್ತುಗಳನ್ನು ತೆಗೆದುಕೊಂಡ ನಂತರ ಗುಜರಿಗೆ ಹಾಕಲಾಗ್ತಿದೆ.

ಬಸ್‍ನಲ್ಲಿರೋ ಅಲ್ಯುಮೀನಿಯಂ ಹಾಗು ಸ್ಟೈನ್‍ಲೆಸ್ ಸ್ಚೀಲ್ ಮಾತ್ರ ಗುಜರಿಗೆ ಹೋಗ್ತಿರೋದ್ರಿಂದ ಅದೂ ಕೂಡ ರೀಸೈಕಲ್ ಆಗ್ತಿದೆ.ಕೇಂದ್ರ ಸರ್ಕಾರದ ಎಂಎಸ್‍ಟಿಸಿ ಮುಖಾಂತರ ಬಸ್‍ಗಳನ್ನು ಗುಜರಿಗೆ ಹಾಕಲು ಹರಾಜು ಮಾಡೋದ್ರಿಂದ ಎಲ್ಲಿಯೂ ಕಾನೂನುಬಾಹೀರ ಕೆಲಸಗಳಾಗ್ತಿಲ್ಲ ಅನ್ನೋದು ಬಿಎಂಟಿಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಅದೇನೇ ಇರಲಿ, ಗುಜರಿಗೆ ಹೋಗಿರೋ ಬಸ್‍ಗಳಿಂದ ಬಂದ ಆದಾಯವನ್ನು ಬಿಎಂಟಿಸಿ ಸಮರ್ಪಕವಾಗಿ ಉಪಯೋಗಿಸಿ ಉನ್ನತ ಸೌಲಭ್ಯಗಳನ್ನು ನೀಡಲಿ ಅನ್ನೋದು ಜನರ ಆಶಯವಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button