ಗುಜರಾತ್ ಕದನ;ಬಿಜೆಪಿಯಿಂದ೧೬೦ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಡಿಸೆಂಬರ್‌ನಲ್ಲಿ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ೧೬೦ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ೬೯ ಹಾಲಿ ಶಾಸಕರಿಗೆ ಮಾತ್ರ ಟಿಕೆಟ್ ನೀಡಲಾಗಿದ್ದು, ಉಳಿದಂತೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಈ ಪಟ್ಟಿಯಲ್ಲಿ ೬೯ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು, ಉಳಿದಂತೆ ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ೧೪ ಮಂದಿ ಮಹಿಳೆಯರಿಗೂ ಚುನಾವಣಾ ಟಿಕೆಟ್ ನೀಡಲಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಕ್ರಿಕೆಟ್ ಆಟಗಾರ ರವೀಂದ್ರಜಡೇಜಾ ಅವರ ಪತ್ನಿ ರಿವಾಬ ಜಡೇಜಾ ಅವರಿಗೆ ಟಿಕೆಟ್ ನೀಡಲಾಗಿದ್ದು, ಮಾಜಿ ಮುಖ್ಯಮಂತ್ರಿ ವಿಜಯ್‌ರೂಪಾನಿ ಮತ್ತು ಪಕ್ಷದ ಹಿರಿಯ ನಾಯಕ ಭುಪೇಂದ್ರಸಿನ್ಹಾ ಅವರ ಹೆಸರು ಪಟ್ಟಿಯಲ್ಲಿ ಇಲ್ಲ.
ಗುಜರಾತ್‌ನ ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ೨೦೧೭ರ ಚುನಾವಣೆಯಲ್ಲಿ ಗೆದ್ದಿದ್ದ ಘಟ್ಗೋಡಿಯಾ ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧಿಸಲಿದ್ದು, ಗುಜರಾತ್ ಗೋ ಸಚಿವ ಅರ್ಷಸನ್ವಿ ಮಧುರಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಪಾಟೀಲ್‌ದಾರ್ ಅಂದೋಲನದ ನಾಯಕ ಹಾರ್ದಿಕ್ ಪಟೇಲ್ ತಮ್ಮ ತವರು ಕ್ಷೇತ್ರವಾದ ವಿರಾಂಗಾಂವ್‌ನಿಂದ ಸ್ಪರ್ಧಿಸಲಿದ್ದಾರೆ.ಭಾರತ ಕ್ರಿಕೆಟ್ ತಂಡದ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಜಡೇಜಾ ಅವರಿಗೂ ಬಿಜೆಪಿ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡಿದ್ದು, ಉತ್ತರಜಾಮ್ ಕ್ಷೇತ್ರದಿಂದ ರಿಬಾವ ಜಡೇಜಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವರು.
ಕ್ರಿಕೆಟ್ ಆಟಗಾರ ಜಡೇಜಾ ಅವರ ಪತ್ನಿಯಾಗಿರುವ ರಿಬಾವ ಜಡೇಜಾ ಗುಜರಾತ್ ಕಾಂಗ್ರೆಸ್ ನ ಹಿರಿಯ ನಾಯಕ ಹರಿಸಿಂಗ್ ಸೋಲಂಕಿ ಅವರ ಸಂಬಂಧಿಯೂ ಆಗಿದ್ದಾರೆ.ಗುಜರಾತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿನ್ನೆ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿತ್ತು, ಈ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಭಾಗಿಯಾಗಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದರು.
ಗುಜರಾತ್ ವಿಧಾನಸಭೆಯ ೧೮೨ ಸ್ಥಾನಗಳಿಗೆ ಡಿ ೧ ಮತ್ತು ಡಿ. ೫ ರಮದು ೨ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿ. ೮ ರಂದು ಮತ ಎಣಿಕೆ ನಡೆಯಲಿದೆ. ಡಿ. ೧ರ ಮತದಾನ ನಡೆಯುವ ೮೯ ಸ್ಥಾನಗಳ ಪೈಕಿ ೮೪ ಕ್ಷೇತ್ರಗಳ ಅಭ್ಯರ್ಥಿಯನ್ನು ಮತ್ತು ಡಿ. ೫ ರಂದು ಮತದಾನ ನಡೆಯುವ ೯೩ ಕ್ಷೇತ್ರಗಳ ೭೬ ಅಭ್ಯರ್ಥಿಗಳ ಹೆಸರುಗಳು ಬಿಜೆಪಿ ಇಂದು ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿದೆ.