ಗುಜರಾತ್ ಆಪ್ ಕಚೇರಿ ಮೇಲೆ ಪೋಲಿಸ್ ದಾಳಿ: ಕೇಜ್ರಿ ಟೀಕೆ

ಅಹಮದಾಬಾದ್ನಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿಯ ಮೇಲೆ ಗುಜರಾತ್ ಪೊಲೀಸರು ಹಠಾತ್ ದಾಳಿ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಆಪ್ಗೆ ವ್ಯಾಪಕ ಬೆಂಬಲ ದೊರೆಯುತ್ತಿರುವ ಬೆನ್ನಲ್ಲೇ ಈ ದಾಳಿ ನಡೆಸಿದೆ.ಈ ದಾಳಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಪ್ ಗುಜರಾತ್ ನಲ್ಲಿ ಪಕ್ಷಕ್ಕೆ ಸಿಗುತ್ತಿರುವ ಬೆಂಬಲದಿಂದ ಬಿಜೆಪಿ ಕಂಗಾಲಾಗಿ ಪಕ್ಷವನ್ನು ಕಟ್ಟಿ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಹಮದಾಬಾದ್ ಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಆಪ್ ಪಕ್ಷದ ಗುಜರಾತ್ ಘಟಕ ಟ್ವಿmರ್ನಲ್ಲಿ ದೂರಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಗುಜರಾತ್ ಕಚೇರಿಯಲ್ಲಿ ದಾಳಿ ಮಾಡಿರುವ ಪೊಲೀಸರಿಗೆ ಏನು ಸಿಗಲಿಲ್ಲ.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಪ್ರಾಮಾಣಿಕತೆ ಶಂಕಿಸಲು ಆಗದ ರೀತಿಯಲ್ಲಿ ಸ್ವಚ್ಚವಾಗಿದೆ ಎಂದು ತಿರುಗೇಟು ನೀಡಿದ್ದಾರೆ.ಗುಜರಾತ್ ಜನರಿಂದ ಆಪ್ಗೆ ಸಿಗುತ್ತಿರುವ ಬೆಂಬಲದಿಂದ ಬಿಜೆಪಿಗೆ ಅಭದ್ರತೆ ಕಾಡುತ್ತಿದೆ. ರಾಜ್ಯದಲ್ಲಿ ಆಪ್ ಪರ ಅಲೆ ಬೀಸುತ್ತಿದೆ. ದೆಹಲಿಯ ನಂತರ ಗುಜರಾತ್ ನಲ್ಲಿ ದಾಳಿ ಆರಂಭವಾಗಿದೆ. ದೆಹಲಿಯಲ್ಲೂ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದಾಗಿ ಯಾವುದೇ ಮಾಹಿತಿ ಸಿಗಲಿಲ್ಲ. ಗುಜರಾತ್ನಲ್ಲೂ ಏನು ಸಿಗುವುದಿಲ್ಲ.
ನಾವು ದೇಶಭಕ್ತ ಪ್ರಾಮಾಣಿಕ ಜನರಿದ್ದೇವೆ ಎಂದು ಕೇಜ್ರಿವಾಲ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.ಆಪ್ ಆರೋಪ ಮಾಡುತ್ತಿರುವ ಬಗ್ಗೆ ಗುಜರಾತ್ ಪೋಲಿಸರು ಇದುವರೆಗೂ ಯಾವುದೇ ಪ್ರತಿಕ್ರಿಯಿ ನೀಡಿಲ್ಲ.