
ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಈ ವೇಳೆಗಾಗಲೇ ಮುಚ್ಚಬೇಕಿತ್ತು. 9,482 ರಸ್ತೆ ಗುಂಡಿಗಳನ್ನು ಗುರುತಿಸಿದ್ದ ಬಿಬಿಎಂಪಿ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಮುಚ್ಚುವುದಾಗಿ ಹೇಳಿತ್ತು. ಆದರೆ ಇನ್ನು 2020 ಗುಂಡಿಗಳು ಬಾಕಿ ಇವೆ.
ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ಮತ್ತೆ ಎಡವಿದಂತೆ ಕಾಣುತ್ತಿದೆ. ರಸ್ತೆ ಗುಂಡಿಗಳನ್ನು ಮುಚ್ಚಬೇಕಿತ್ತು. ಆದರೆ ಮಳೆಯಿಂದ ಸಾಧ್ಯವಾಗಿಲ್ಲ. ಅದಕ್ಕೆ ನಿಗದಿತ ಗಡುವಿನಲ್ಲಿ ಗುಂಡಿಗಳನ್ನು ಮುಚ್ಚಲು ಆಗಿಲ್ಲ ಎಂದು ಸಬೂಬು ಹೇಳುತ್ತಿದೆ.
ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಜನರಿಗೆ ಕಲ್ಪಿಸಬೇಕಿದ್ದ ಬಿಬಿಎಂಪಿ ಗುಂಡಿ ಗಂಡಾಂತರ ಮಾಡಿಕೊಂಡಿದೆ. ರಸ್ತೆ ಗುಂಡಿಗಳಿಂದ ಹಲವಾರು ಅಪಘಾತಗಳು ಸಂಭವಿಸಿ ಸಾವುನೋವುಗಳು ಉಂಟಾಗಿವೆ. ಇಷ್ಟಾದರೂ ಎಚ್ಚೆತ್ತುಕೊಳ್ಳದೆ ಮಳೆಯ ನೆಪವನ್ನು ಹೇಳುತ್ತಿದೆ.
ಬಾಕಿ ಉಳಿದಿರುವ 2020 ಗುಂಡಿಗಳನ್ನು ಮುಚ್ಚುವ ವೇಳೆಗೆ ಮತ್ತೆ ರಸ್ತೆಯಲ್ಲಿ ಗುಂಡಿಗಳಾಗಿರುತ್ತವೆ. ಮತ್ತೆ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.