ಗಾಯಕ ಮೂಸಾವಾಲಾ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ ಅರೆಸ್ಟ್
Sidhu Moose Wala murder case: Pune police arrest shooter Santosh Jadhav

ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದ ಶಾಪ್ ಶೂಟರ್ ಸಂತೋಷ್ ಜಾಧವ್‍ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.ಮೂಸ್ ವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿ ಜಾಧವ್ ಆತನ ಸಹಾಯಕನನ್ನು ಕೂಡ ಬಂಧಿಲಾಗಿದೆ ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಕುಲವಂತ್ ಕುಮಾರ್ ಸಾರಂಗಲ್ ಅವರು ಇಂದು ಬೆಳಿಗ್ಗೆ ತಿಳಿಸಿದ್ದಾರೆ ಹೆಚ್ಚಿನ ಬೆಳವಣಿಗೆಯ ಕುರಿತು ನಂತರ ಮಾಹಿತಿ ನೀಡುವ ನಿರೀಕ್ಷೆಯಿದೆ.
ಲಾರೆನ್ಸ ಬಿಷ್ಣೋಯ್ ಗ್ಯಾಂಗ್ ಸದಸ್ಯ ಜಾಧವ್, ಪುಣೆ ಜಿಲ್ಲಾಯ ಮಂಚಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ 2021 ರ ಕೊಲೆ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ ಒಂದು ವರ್ಷ ತಲೆಮರೆಸಿಕೊಂದಿದ್ದ . ಮೂಸ್ ವಾಲಾ ಹತ್ಯೆಯ ತನಿಖೆಯಲ್ಲಿ ಆತನ ಮತ್ತು ನಾಗನಾಥ್ ಸೂರ್ಯವಂಶಿಯ ಹೆಸರು ಕೇಳಿಬಂದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಜಾಧವ್‍ಗೆ ಆಶ್ರಯ ನೀಡಿದ ಆರೋಪಿ ಸಿದ್ಧೇಶ್ ಕಾಂಬಳೆ ಅಲಿಯಾಸ್ ಮಹಾಕಲ್ ಎಂಬಾತನನ್ನು ಬಂಧಿಸಿದ್ದಾರೆ .ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಕೋಶ ಮತ್ತು ಪಂಜಾಬ್ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದರು. ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಅವರ ಮಗ ಸಲ್ಮಾನ್ ಖಾನ್‍ಗೆ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಹಾಕಾಲ್ ಅನ್ನು ಸಹ ವಶಕ್ಕೆ ಪಡೆದು ತ್ತೀವ್ರ ತನಿಖೆಗೆ ಒಳಪಡಿಸಿದ್ದಾರೆ.