ಅಪರಾಧ

ಗಾಯಕ ಅಲ್ಫಾಜ್ ಮೇಲೆ ಹಲ್ಲೆ

ಪಂಜಾಬಿ ಗಾಯಕ ಅಲ್ಫಾಜ್ ಅಕಾ ಅಮಾನ್‌ಜೋತ್ ಸಿಂಗ್ ಪನ್ವಾರ್ ಅವರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಫಾಜ್ ಮೇಲೆ ಹಲ್ಲೆ ನಡೆದಿದೆ.

ಅವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ಗಾಯಕ ಹಿರ್ದೇಶ್ ಸಿಂಗ್ ಅಲಿಯಾಸ್ ಹನಿ ಸಿಂಗ್ ತಮಮ್ಇ ನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಲ್ಫಾಜ್ ಮೊಹಾಲಿ ಡಾಬಾದ ಹೊರಗೆ ಬನೂರ್ ಲಾಂದ್ರನ್ ಹೆದ್ದಾರಿಯಲ್ಲಿ ರಸ್ತೆಬದಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದಿದ್ದು ಅವರು ಗಾಯಗೊಂಡಿದ್ದಾರೆ.

ಆರೋಪಿಯನ್ನು ಹರಿಯಾಣದ ಪಂಚಕುಲದ ರಾಯ್‌ಪುರ ರಾಣಿ ನಿವಾಸಿ ವಿಕ್ಕಿ ಎಂದು ಗುರುತಿಸಲಾಗಿದ್ದು, ಮೊಹಾಲಿ ಪೊಲೀಸರು, ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.ಗಾಯಕ ಅಲ್ಫಾಜ್ ಶನಿವಾರ ರಾತ್ರಿ ಮೊಹಾಲಿಯ ಲ್ಯಾಂಡ್ರಾನ್ ರಸ್ತೆಯಲ್ಲಿರುವ ಡಾಬಾಗೆ ಹೋಗಿದ್ದರು.

ಈ ವೇಳೆ ಆರೋಪಿಗಳು ಡಾಬಾ ಮಾಲೀಕರೊಂದಿಗೆ ಜಗಳವಾಡುತ್ತಿದ್ದರು. ಆಗ ಜಗಳ ಇತ್ಯರ್ಥಕ್ಕೆ ಆಲ್ಫಾಜ್ ಮಧ್ಯೆ ಪ್ರವೇಶಿಸಿದ್ದಾರೆ. ಆರೋಪಿಗಳು ಅಲ್ಫಾಜ್ ಅವರೊಂದಿಗೂ ಜಗಳವಾಡಿದ್ದರು.

ನಂತರ ಅಲ್ಲಿಂದ ಹೊರಟ ಅಲ್ಫಾಜ್ ತನ್ನ ಕಾರಿನ ಬಳಿ ಹೋದಾಗ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button