Uncategorized

ಗಾಂಜಾ ಬೆಳೆಯುವುದನ್ನು ಕಾನೂನುಬದ್ಧಗೊಳಿಸಿದ ಏಷ್ಯಾದ ಮೊದಲ ರಾಷ್ಟ್ರ!

ಗಾಂಜಾ ಕೇವಲ ಒಂದು ನಶಾ ವಸ್ತು ಮಾತ್ರವಲ್ಲ, ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಜೂನ್ ತಿಂಗಳಲ್ಲಿ ದೇಶದ ಮನೆಗಳಿಗೆ ಒಂದು ಮಿಲಿಯನ್ ಉಚಿತ ಗಾಂಜಾ ಗಿಡಗಳನ್ನು ವಿತರಿಸುವ ಯೋಜನೆಯನ್ನು ಥೈಲ್ಯಾಂಡ್ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆರೋಗ್ಯ ಸಚಿವ ಅನುಟಿನ್ ಚಾರ್ನ್‌ವಿರಾಕುಲ್ ಅವರ ಪ್ರಕಾರ, ಜನರು ಮನೆಯಲ್ಲಿ ಗಾಂಜಾ ಬೆಳೆಯಲು ಅನುಮತಿಸಲಾಗುತ್ತಿದೆ. ಈ ಮೂಲಕ ಗಾಂಜಾವನ್ನು ಕಾನೂನುಬದ್ಧಗೊಳಿಸಿದ ಏಷ್ಯಾದ ಮೊದಲ ದೇಶ ಥೈಲ್ಯಾಂಡ್ ಆಗಿದೆ.ಆದರೆ ಬಹುಮುಖ್ಯ ಅಂಶವೆಂದರೆ ಗಾಂಜಾವನ್ನು ಕೇವಲ ಔಷಧೀಯ ಉದ್ದೇಶಗಳಿಗಾಗಿ ಮಾತ್ರ ಕಾನೂನುಬದ್ಧಗೊಳಿಸಲಾಗಿದೆ. ಗಮನಿಸಬೇಕಾದ ಥೈಲ್ಯಾಂಡ್​ನಲ್ಲಿ ಲೈಸೆನ್ಸ್​ ಇಲ್ಲದೆ ಗಾಂಜಾದ ವಾಣಿಜ್ಯ ಬಳಕೆಗೆ ಅನುಮತಿಯಿಲ್ಲ. ಗಾಂಜಾವನ್ನು ಕೇವಲ ಔಷಧೀಯ ಉದ್ದೇಶ ಬಿಟ್ಟು ವಾಣಿಜ್ಯವಾಗಿ ಬಳಸಿದವರ ವಿರುದ್ಧ ಕಠಿಣ ದಂಡ ವಿಧಿಸಲಾಗುವುದು ಎಂದು ಥೈಲ್ಯಾಂಡ್ ಆರೋಗ್ಯ ಸಚಿವರು ತಿಳಿಸಿದ್ದಾರೆ. ಆಹಾರ ಮತ್ತು ಪಾನೀಯಗಳ ಉದ್ಯಮದಲ್ಲಿ, ಕೆಫೆಗಳು ಮತ್ತು ರೆಸ್ಟಾರೆಂಟ್‌ಗಳು ಗಾಂಜಾ ತುಂಬಿದ ವಸ್ತುಗಳನ್ನು ಒದಗಿಸಬಹುದು, ಅವರ ಮೇಲೆ ಯಾವುದೇ ಕಾನೂನು ಕ್ರಮವಾಗುವುದಿಲ್ಲ. ಜೂನ್ 9 ದ ಥೈಲ್ಯಾಂಡ್​ನಲ್ಲಿ ಗಾಂಜಾ ಮತ್ತು ಸೆಣಬಿನ ಉತ್ಪನ್ನಗಳನ್ನು ಬೆಳೆಯುವುದು ಮತ್ತು ವ್ಯಾಪಾರ ಮಾಡುವುದು ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಸಸ್ಯದ ಭಾಗಗಳನ್ನು ಬಳಸುವುದು ಅಪರಾಧವಲ್ಲ ಎಂದು ಘೋಷಿಸಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button