ಗಮನ ಬೇರೆಡೆ ಸೆಳೆದು ಕಳವು ಖತರ್ನಾಕ್ ಪದವಿ ವಿದ್ಯಾರ್ಥಿ ಸೆರೆ

ಗಮನ ಬೇರೆಡೆ ಸೆಳೆದು ಮೋಸದಿಂದ ವಸ್ತುಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಪದವಿ ವಿದ್ಯಾರ್ಥಿಯನ್ನು ಬಂಧಿಸಿರುವ ಯಶವಂತಪುರ ಪೊಲೀಸರು ೩.೬೮ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಯಶವಂತಪುರದ ಪ್ರಜ್ವಲ್ (೨೦)ಬಂಧಿತ ಆರೋಪಿಯಾಗಿದ್ದು ಆತನಿಂದ ೩.೬೮ ಲಕ್ಷ ಮೌಲ್ಯದ ವಿವಿಧ ಕಂಪನಿ ೨-ಕ್ಯಾಮರಾ, ೧-ಲೆನ್ಸ್ ವಶ.-ಸೆಟ್ ಆಪಲ್ ಕಂಪನಿಯ ಇಯರ್ ಪಾಡ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯು ಪದವಿ ವ್ಯಾಸಂಗ ಮಾಡುತ್ತಿದ್ದು,ಸ್ವತಃ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಚ್ಚಿನ ಹಣಗಳಿಸಬೇಕೆಂಬ ಬಯಕೆಯಿಂದ ಅದಕ್ಕೆ ಬೇಕಾಗುವ ಸಲಕರಣೆಗಳನ್ನು ತೆಗೆದುಕೊಳ್ಳಲು ಹಣವಿಲ್ಲದಿದ್ದರಿಂದ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಯು ಈ ಹಿಂದೆ ಯಶವಂತಪುರದಲ್ಲಿ ಮುನಿಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿನ ಮದುವೆ ಕಾರ್ಯಕ್ರಮದಲ್ಲಿ ಛಾಯಾ ಚಿತ್ರಗಾರ ಗಮನೆ ಬೇರೆಡೆಗೆ ಸೆಳೆದು ಹೆಚ್ಚಿನ ಬೆಲೆಯ ೧-ಕ್ಯಾಮರಾ ಕಳವು ಮಾಡಿ ಶಂಕರಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜೈನ್ ಕಲ್ಯಾಣ ಮಂಟಪದಲ್ಲಿ ಸಹಾ ಇದೇ ರೀತಿ ಹೆಚ್ಚಿನ ಬೆಲೆ ೧-ಕೆನಾನ್ ಕಂಪನಿಯ ಲೆನ್ಸ್ ಕಳವು ಮಾಡಿರುತ್ತಾನೆ.
ಆರೋಪಿಯು ೨೦೨೨ ನೇ ಸಾಲಿನಲ್ಲಿ ಜನವರಿ ಮಾಹೆಯಲ್ಲಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಬಂದಿದ್ದರೂ ಬುದ್ದಿ ಕಲಿಯದೇ ಹಳೆ ಚಾಳಗೆ ಬಿದ್ದಿದ್ದ ಎಂದರು.
ಪ್ಲಿಪ್‌ಕಾರ್ಟ್‌ನಲ್ಲಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ, ಕಳೆದ ಸೆ ೨೬ ರಂದು ಒಬ್ಬ ಗ್ರಾಹಕ ಬುಕ್ ಮಾಡಿದ ೨ ಐಟಂಗಳನ್ನು, ತಮ್ಮ ಹಬ್‌ನಿಂದ ಡಿಲೆವರಿಗಾಗಿ ಪಡೆದುಕೊಂಡಿದ್ದು, ಸದರಿ ಐಟಂಗಳನ್ನು ಯಶವಂತಪುರದ ಗಾಯಿತ್ರಿ ಟೆಂಪಲ್ ರಸ್ತೆ, ಅಂಬೇಡ್ಕರ್ ನಗರದ ವಿಳಾಸಕ್ಕೆ ಡಿಲೆವರಿ ಮಾಡಲು ನಮೂದಿಸಿದ್ದರಿಂದ, ತಾನು ಕಸ್ಟಮರ್ ಕರೆ ಮಾಡಿದ್ದು ಕಸ್ಟಮರ್ ರವರ ಮೊಬೈಲ್ ಸಂಖ್ಯೆ ಸಂಪರ್ಕಕ್ಕೆ ಸಿಗದಿದ್ದರಿಂದ ಮರುದಿನ ತಾನು ಸದರಿ ಐಟಂಗಳನ್ನು ಪುನಃ ಡಿಲೆವರಿಗಾಗಿ ತೆಗೆದುಕೊಂಡು ಕಸ್ಟಮರ್ ರವರು ಬುಕ್ ಮಾಡಿದ ವಿಳಾಸಕ್ಕೆ ಹೋಗಲಾಗಿ ರಸ್ತೆಯಲ್ಲಿ ಒಬ್ಬ ವ್ಯಕ್ತಿ ತಾನೇ ಬುಕ್ ಮಾಡಿದ್ದು ಎಂದು ಹೇಳಿ, ಐಟಂಗಳನ್ನು ತನ್ನಿಂದ ಪ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಿದ ಐಟಂಗಳನ್ನು ಪಡೆದುಕೊಂಡು ತನ್ನ ಗಮನವನ್ನು ಬೇರೆಡೆ ಸೆಳೆದು ಹಣವನ್ನು ನೀಡದೆ ಅಲ್ಲಿಂದ ಓಡಿ ಹೋಗಿದ್ದ.
ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಕೃತ್ಯ ನಡೆದ ಅಕ್ಕಪಕ್ಕದಲ್ಲಿ ದೊರೆತ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಇನ್ಸ್‌ಪೆಕ್ಟರ್ ಸುರೇಶ್ ಕೆ. ಮತ್ತವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.