Uncategorized
ಗಂಡುಮಗುವಿನ ತಾಯಿಯಾದ ನಟಿ ಸಂಜನಾ ಗಲ್ರಾನಿ: ಕುಟುಂಬದಲ್ಲಿ ಒಂದೇ ದಿನ ಡಬಲ್ ಖುಷಿ

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇವರ ವಿವಾಹ 2020ರ ಮೇ ತಿಂಗಳಿನಲ್ಲಿ ಡಾ. ಅಜೀಜ್ ಪಾಷಾ ಅವರ ಜತೆ ನಡೆದಿತ್ತು. ಈ ದಂಪತಿ ಈಗ ಅಪ್ಪ-ಅಮ್ಮನಾದ ಖುಷಿಯಲ್ಲಿದ್ದಾರೆ.
ಸಂಜನಾಗೆ ಚಿಕಿತ್ಸೆ ನೀಡಿದ ವೈದ್ಯರು ಸಂಜನಾ ಜೊತೆ ಫೋಟೋವನ್ನು ತೆಗೆದುಕೊಂಡು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇವರ ಸಹೋದರಿ ನಿಕ್ಕಿ ಗಲ್ರಾನಿ ಅವರು ಚೆನ್ನೈನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರೆ ಇತ್ತ ಸಂಜನಾ ಅಮ್ಮ ಆಗಿದ್ದಾರೆ. ಆದ್ದರಿಂದ ಗಲ್ರಾನಿ ಕುಟುಂಬದಲ್ಲಿ ಡಬಲ್ ಖುಷಿ ಮನೆಮಾಡಿದೆ.
ಕೆಲವು ದಿನಗಳ ಹಿಂದೆ ಬೇಬಿ ಬಂಪ್ ಫೋಟೋಶೂಟ್ ಹಾಗೂ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದ ಸಂಜನಾ ಅವರು ಅದರ ಫೋಟೋ ಶೇರ್ ಮಾಡಿಕೊಂಡಿದ್ದರು.