ಖಾಸಗಿ ಬಸ್ ಅಪಘಾತದಲ್ಲಿ 7 ಮಂದಿ ಮರಣ; ತನಿಖೆಗೆ ಸಚಿವ ಶ್ರೀರಾಮುಲು ಆದೇಶ
Minister Sriramulu,PRIVATE BUS AND LORRY ACCIDENT IN KALABURAGI

ಕಲಬುರಗಿ ಬಳಿಯ ಕಮಲಾಪುರದಲ್ಲಿ ಸಂಭವಿಸಿರುವ ಖಾಸಗಿ ಬಸ್ ದುರಂತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನಾ ಸ್ಥಳಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ತೆರಳಿದ್ದು, ಪರಿಶೀಲನಾ ಕಾರ್ಯ ಕೈಗೊಂಡಿದ್ದಾರೆ. ತನಿಖಾ ವರದಿ ಬಂದ ನಂತರ ದುರಂತದ ಬಗ್ಗೆ ಮಾಹಿತಿ ಸಿಗಲಿದೆ ಎಂದರು.
ಖಾಸಗಿ ಬಸ್ ದುರಂತದಲ್ಲಿ 7 ಜನರು ಮರಣ ಹೊಂದಿರುವ ಮಾಹಿತಿ ಇದೆ. ಖಾಸಗಿ ಬಸ್‍ನಲ್ಲಿ 35 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಗಾಯಗೊಂಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪರಿಹಾರ ನೀಡುವ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ಖಾಸಗಿ ಬಸ್ ದುರಂತವಾಗಿರುವುದರಿಂದ ಪರಿಹಾರದ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಅಪಾಯಕಾರಿ ರಸ್ತೆ ಇರುವ ಕಡೆಗಳಲ್ಲಿ ರಸ್ತೆ ಸುರಕ್ಷತಾ ಅನುದಾನ ಬಳಸಿ ಸರಿಪಡಿಸುವ ಕೆಲಸವಾಗುತ್ತಿದೆ. ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಿಯಮ ಉಲ್ಲಂಘನೆ ಮಾಡುವ ಖಾಸಗಿ ಬಸ್‍ಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ಹೇಳಿದರು.