ಖಾದ್ಯ ತೈಲ ದರದಲ್ಲಿ ಮತ್ತೆ ಭಾರಿ ಇಳಿಕೆ, ಇಲ್ಲಿದೆ ಹೊಸ ದರ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆಯೇ ಶ್ರೀ ಸಾಮಾನ್ಯರ ಪಾಲಿಗೆ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ.
ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಇತ್ತೀಚೆಗಷ್ಟೇ ಅಡಾನಿ-ವಿಲ್ಮರ್ ಖಾದ್ಯ ತೈಲ ಬೆಲೆಯಲ್ಲಿ ಪ್ರತಿ ಲೀಟರ್ ಗೆ 10 ರೂ. ಇಳಿಕೆ ಮಾಡಿತ್ತು.ಬೆಲೆಯಲ್ಲಿ ಎಷ್ಟು ಇಳಿಕೆ? ಅಡಾನಿ-ವಿಲ್ಮರ್ ಫಾರ್ಚ್ಯೂನ್ ರೆಫೈನಡ್ ತೈಲ ಬೆಲೆಯನ್ನು ಪ್ರತಿ ಲೀಟರ್ ಗೆ ರೂ.220 ರಿಂದ ರೂ.210ಕ್ಕೆ ಇಳಿಕೆ ಮಾಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ ಸಾಸಿವೆ ಎಣ್ಣೆಯ ಬೆಲೆಯನ್ನು 205 ರೂ.ಗಳಿಂದ 195 ರೂ.ಗಳಿಗೆ ಇಳಿಕೆ ಮಾಡಿದೆ.
ಇದಲ್ಲದೆ ಜೆಮಿನಿ ಎಡಿಬಲ್ ಅಂಡ್ ಫ್ಯಾಟ್ಸ್ ಕೂಡ ಪ್ರತಿ ಲೀಟರ್ ಸೂರ್ಯಕಾಂತಿ ಎಣ್ಣೆ ದರದಲ್ಲಿ 15 ರೂ.ಗಳ ಇಳಿಕೆ ಮಾಡಿದೆ. ಮುಂಬರುವ ದಿನಗಳಲ್ಲಿಯೂ ಕೂಡ ಕಂಪನಿ ಖಾದ್ಯ ತೈಲ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಪಾಮ್ ಆಯಿಲ್ ಮೇಲಿನ ಆಮದು ಸುಂಕದಲ್ಲಿ ಇಳಿಕೆ ಮಾಡಿದ ಬಳಿಕ ಖಾದ್ಯ ತೈಲ ಕಂಪನಿಗಳು ಕೂಡ ಬೆಲೆ ಇಳಿಕೆ ಮಾಡಿವೆ ಎಂಬುದು ಇಲ್ಲಿ ಉಲ್ಲೇಖನೀಯ. ‘ನಮಗೆ ಸಿಗುತ್ತಿರುವ ಲಾಭವನ್ನು ನಾವು ಗ್ರಾಹಕರಿಗೂ ಕೂಡ ನೀಡಲು ಬಯಸುತ್ತೇವೆ’ ಎಂದು ಕಂಪನಿಗಳು ಹೇಳಿವೆ.
ಪಾಮ್ ಆಯಿಲ್ ಪೂರೈಕೆ ಕುಂಠಿತಗೊಂಡ ಹಿನ್ನೆಲೆ ಖಾದ್ಯ ತೈಲಗಳ ಬೆಲೆಯಲ್ಲಿ ಬಂಪರ್ ಏರಿಕೆಯಾಗಿತ್ತು.
ಮುಂಬರುವ ದಿನಗಳಲ್ಲಿಯೂ ಕೂಡ ಬೆಲೆ ಇಳಿಕೆಯಾಗಲಿದೆಮುಂಬರುವ ದಿನಗಳಲ್ಲಿ ಭಾರತ ಸರ್ಕಾರ ಇಂಡೋನೇಷ್ಯಾಗೆ ಗೋಧಿಯನ್ನು ರಫ್ತು ಮಾಡಲು ನಿರ್ಧರಿಸಿದ್ದು, ಅದರ ಬದಲಿಗೆ ಪಾಮ್ ಎಣ್ಣೆಯನ್ನು ಆಮದು ಮಾಡಿಕೊಳ್ಳಲಿದೆ ಎನ್ನಲಾಗಿದೆ.
ಆದರೆ, ಈ ಕುರಿತು ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಒಂದು ವೇಳೆ ಎಲ್ಲವೂ ಕೂಡ ಅಂದುಕೊಂಡಂತೆ ನಡೆದರೆ ಮುಂಬರುವ ದಿನಗಳಲ್ಲಿ ಖ್ಯಾದ್ಯ ತೈಲಗಳ ಬೆಲೆಯಲ್ಲಿ ಮತ್ತೆ ಇಳಿಕೆಯಾಗುವ ಸಾಧ್ಯತೆ ಇದೆ.