ಕ್ರೀಡೆ

ಕ್ಲಾಸ್ ಗೆ ಚಕ್ಕರ್ ಹಾಕಿ ವಿರಾಟ್ ಕೊಹ್ಲಿ ನೋಡಲು ಬಂದ ಬಾಲಕ..!

Cricket

ಮುಂಬೈ: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಜಗತ್ತಿನೆಲ್ಲೆಡೆ ಅಭಿಮಾನಿಗಳಿದ್ದಾರೆ, ಅವರು ತಂಡದ ನಾಯಕನಾಗಿರದೇ ಇದ್ದರೂ ಕೂಡ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ, ಈಗ ವೈರಲ್ ಆಗಿರುವ ಫೋಟೋವೊಂದರಲ್ಲಿ ಬಾಲಕ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ನೋಡುವುದಕ್ಕಾಗಿ ಕ್ಲಾಸ್ ಗೆ ಚಕ್ಕರ್ ಹಾಕಿ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.

ಈಗ ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಈ ವೈರಲ್ ಆಗಿದ್ದು,ಈ ಫೋಟೋ ದಲ್ಲಿ ಬಾಲಕನು ಬಿತ್ತಿ ಪತ್ರವೊಂದನ್ನು ಹಿಡಿದು ‘Virat sir you are d best,I missed school to see you’ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಈಗ ತಮ್ಮ ಎಂದಿನ ಫಾರ್ಮ್ ಕಂಡುಕೊಳ್ಳಲು ಸಾಕಷ್ಟು ಪ್ರಯಾಸಪಡುತ್ತಿದ್ದಾರೆ.ಈ ಬಾರಿಯ ಐಪಿಎಲ್ ನ ಆವೃತ್ತಿಯಲ್ಲಿ ಅವರು ನಿರಾಸದಾಯಕ ಪ್ರದರ್ಶನವನ್ನು ನೀಡಿದ್ದರು.ಈಗ ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಈ ಬಾರಿಯಾದರೂ ತಮ್ಮ ಹಳೆಯ ಫಾರ್ಮ್ ಗೆ ಮರಳುತ್ತಾರೆಯೇ ಎನ್ನುವುದನ್ನು ನಾವು ಕಾಯ್ದು ನೋಡಬೇಕಾಗಿದೆ.

ಇನ್ನೊಂದೆಡೆಗೆ ವಿರಾಟ್ ಕೊಹ್ಲಿ ಅವರ ನಿರಾಶಾದಾಯಕ ಪ್ರದರ್ಶನಕ್ಕೆ ರವಿಶಾಸ್ತ್ರಿ ಅವರೇ ಕಾರಣ ಎಂದು ಪಾಕ್ ನ ಮಾಜಿ ಆಟಗಾರ ರಶೀದ್ ಲತೀಫ್ ದೂರಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button