
ಬೆಳಗಿನ ಜಾವ ಕ್ರಿಸ್ಮಸ್ ಪ್ರಾರ್ಥನೆಗೆಂದು ಆಲೆಕ್ಸ್ ಮತ್ತು ಸತೀಶ್ ರಿಜಸ್ಟರ್ ನಂಬರ್ ಹಾಕದ ಹೊಸ ಬೈಕ್ನಲ್ಲಿ ಬೆಂಗಳೂರಿನ ಸೇಂಟ್ ಪ್ಯಾಟ್ರಿಕ ಬೆಸಲಿಕಾ ಚರ್ಚ್‌ಗೆ ತೆರಳುತ್ತಿದ್ದಾಗ ನಡೆದ ಅಪಘಾತದಲ್ಲಿ ಅಲೆಕ್ಸ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೋಪಾಲಗೌಡ ಜಂಕ್ಷನ್ ಬಳಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಬೈಕ್ ಫುಟ್‌ಪಾತ್ ಗೋಡೆಗೆ ಬೈಕ್ ಗುದ್ದಿದೆ.
ಹಿಂಬದಿ ಸವಾರ ಸತೀಶ್ ಗಾಯಗೊಂಡು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.